ಕರ್ನಾಟಕ : ಸರ್ಕಾರಿ ಕಚೇರಿಯಲ್ಲಿ ಕಡತಗಳ ತ್ವರಿತ ವಿಲೇವಾರಿಗೆ ತಂತ್ರಜ್ಞಾನದ ಸಮರ್ಪಕ ಬಳಕೆಗೆ ಒತ್ತು ನೀಡಿದ ಪರಿಣಾಮ ಇ-ಆಫೀಸ್ ಬಳಕೆಯಲ್ಲಿ ಕಲಬುರಗಿ ಜಿಲ್ಲಾ ಪಂಚಾಯತಿ ಇಡೀ ರಾಜ್ಯದಲ್ಲಿಯೇ ನಂಬರ್-1 ಸ್ಥಾನ ಪಡೆದುಕೊಂಡಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.ಕಳೆದ‌ 2025ನೇ ಕ್ಯಾಲೆಂಡರ್ ವರ್ಷದಲ್ಲಿ ಜಿಲ್ಲೆಯಲ್ಲಿ 2,938 ಇ-ಕಡತ ಸೃಷ್ಟಿಸಿ 54,381 ಕಡತ ವಿಲೇವಾರಿ ಮಾಡಲಾಗಿದೆ. ಸಾರ್ವಜನಿಕರಿಂದ ಸ್ವೀಕೃತವಾದ 13,664 ಪತ್ರಗಳನ್ನು ಇ-ರಸೀದಿಯಡಿ ಸೃಷ್ಟಿಸಿ 3,52,221 ಇ-ರಸೀದಿ ವಿಲೇವಾರಿ ಮಾಡಲಾಗಿದೆ.ಟಾಪ್‌ 10ನಲ್ಲಿ ಕಲ್ಯಾಣದ ನಾಲ್ಕು ಜಿಲ್ಲೆ:ರಾಜ್ಯದಾದ್ಯಂತ ಕಳೆದ ವರ್ಷ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಇ-ಕಡತ ಬಳಕೆಯಲ್ಲಿ ಟಾಪ್-10 ಜಿಲ್ಲೆಗಳ ಅಂಕಿ ಸಂಖ್ಯೆ ಅವಲೋಕಿಸಿದರೆ 2,938 ಇ-ಕಡತ ಸೃಜಿಸಿ ಕಲಬುರಗಿ ಜಿಲ್ಲಾ ಪಂಚಾಯತ್ ಮೊದಲನೇ‌ ಸ್ಥಾನದಲ್ಲಿದ್ದರೆ, 2,523 ಕಡತ ಸೃಜಿಸಿ ಚಿತ್ರದುರ್ಗ ಜಿ.ಪಂ. ಎರಡನೇ ಹಾಗೂ 2,476 ಕಡತದೊಂದಿಗೆ ಬೆಂಗಳೂರು ನಗರ ಜಿ.ಪಂ. ಜಿಲ್ಲೆ ಮೂರನೇ ಸ್ಥಾನ ಪಡೆದಿದೆ. 2,339 ಇ-ಕಡತ ಸೃಜಿಸಿ ಐದನೇ ಸ್ಥಾನದಲ್ಲಿ ಬೀದರ್, 1,955 ಇ-ಕಡತ ಸೃಜಿಸಿ ಎಂಟನೇ ಸ್ಥಾನದಲ್ಲಿ ಯಾದಗಿರಿ, 1,924 ಇ-ಕಡತ ಸೃಜನೆಯೊಂದಿಗೆ ಒಂಬತ್ತನೇ ಸ್ಥಾನದಲ್ಲಿ ಕೊಪ್ಪಳ ಜಿಲ್ಲಾ ಪಂಚಾಯಿತಿ ಸ್ಥಾನ ಪಡೆದುಕೊಂಡಿದೆ. ಅಗ್ರ 10ರಲ್ಲಿ ಕಲ್ಯಾಣ ಕರ್ನಾಟಕ 4 ಜಿಲ್ಲೆಗಳು ಇ-ಆಫೀಸ್ ಅನುಷ್ಠಾನದಲ್ಲಿ ಸ್ಥಾನ ಪಡೆದಿರುವುದು ಪ್ರದೇಶದ ಗ್ರಾಮೀಣ ಭಾಗದಲ್ಲಿ ಆಡಳಿತ ವೇಗ ಪಡೆದುಕೊಂಡಿರುವುದಕ್ಕೆ ಹಿಡಿದ ಕನ್ನಡಿಯಾಗಿದೆ. ಸುಗಮ‌ ಅಡಳಿತಕ್ಕೆ ಕಲಬುರಗಿ ಜಿಲ್ಲೆ ಮಾದರಿಯಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.ಆಳಂದ ತಾಲ್ಲೂಕು ಪಂಚಾಯಿತಿ 1,127 ಇ-ಕಡತ ಸೃಜಿಸಿ 3,560 ಕಡತ ವಿಲೇವಾರಿ ಮತ್ತು 526 ಇ-ರಸೀದಿ ಸೃಷ್ಟಿಸಿ 2,022 ಇ-ರಸೀದಿ ವಿಲೇವಾರಿಯೊಂದಿಗೆ ರಾಜ್ಯದಲ್ಲಿಯೇ ದ್ವಿತೀಯ ಸ್ಥಾನ ಪಡೆದುಕೊಂಡಿದೆ.ಅಫಜಲಪುರ ತಾಲ್ಲೂಕು ಪಂಚಾಯಿತಿ 668 ಇ-ಕಡತ ಸೃಜಿಸಿ 3,189 ಕಡತ ವಿಲೇವಾರಿ ಮಾಡಿ ಏಳನೇ ಸ್ಥಾನ ಹಾಗೂ ಕಲಬುರಗಿ ತಾ.ಪಂ. 564 ಇ-ಕಡತ ಸೃಜಿಸಿ 1,527 ಕಡತ ವಿಲೇವಾರಿ ಮಾಡಿ ಒಂಬತ್ತನೇ ಸ್ಥಾನ ಕಾಯ್ದುಕೊಂಡಿದೆ. ಈ ಮೂಲಕ ತಾಲ್ಲೂಕುವಾರು ಟಾಪ್ ಟೆನ್‌ನಲ್ಲಿ ಜಿಲ್ಲೆಯ ಮೂರು ತಾಲ್ಲೂಕುಗಳು ಸ್ಥಾನ ಪಡೆದಿವೆ.ಪ್ರಿಯಾಂಕ್ ಖರ್ಗೆಪ್ರಿಯಾಂಕ್ ಖರ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಅನಗತ್ಯ ವರ್ಷಗಟ್ಟಲೇ ಅಲೆದಾಡುವುದನ್ನು ತಪ್ಪಿಸಲೆಂದೆ ಇ-ಆಫೀಸ್ ಅನುಷ್ಠಾನದ ಮೂಲಕ ಪ್ರತಿ ಅಧಿಕಾರಿ-ಸಿಬ್ಬಂದಿಗೆ ಕಾಲಮಿತಿಲ್ಲಿಯೆ ಕಡತ ವಿಲೇವಾರಿಗೆ ಹೊಣೆಗಾರಿಕೆ ನೀಡಿದ ಫಲ ಇದಾಗಿದೆ

Leave a Reply

Your email address will not be published. Required fields are marked *