ಸಿಂಧನೂರು : ಜ 18 ಶ್ರೀ ಶಿವಾಲಯ ದೇವಸ್ಥಾನ ಆವರಣ ಲಕ್ಷ್ಮಿ ಕ್ಯಾಂಪ್ ವಾರ್ಡ್ ನಂಬರ್ 31 ಸಿಂಧನೂರಿನಲ್ಲಿ ಆಯೋಜಿಸಿರುವ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಕಾಕತಿಯ ಕಮ್ಮವರಿ ಸಂಘ ಪಿ ಡಬ್ಲ್ಯೂ ಡಿ ಕ್ಯಾಂಪ್, ಸನ್ ರೈಸ್ ಶಿಕ್ಷಣ ಸಮೂಹ ಸಂಸ್ಥೆಗಳು ಡಿ-ಫಾರ್ಮಸಿ, ನರ್ಸಿಂಗ್,ಪ್ಯಾರಾಮೆಡಿಕಲ್ ಹಾಗೂ ವೈ ಮಹಾಬಲೇಶ್ವರಪ್ಪ ಮೆಮೋರಿಯಲ್ ಕಣ್ಣಿನ ಕೇಂದ್ರ ಬಳ್ಳಾರಿ ಯೂನಿಟ್ ಆಫ್ ಎ ವಿ ಪ್ರಸಾದ್ ಇನ್ಸ್ಟಿಟ್ಯೂಟ್ ಹೈದರಾಬಾದ್ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಸಪ್ತಗಿರಿ ಆಸ್ಪತ್ರೆ ಬೆಂಗಳೂರಿನ ವೈದ್ಯರಿಂದ ಉಚಿತ ಹೃದಯ ರೋಗ ನರ ರೋಗ,ಕ್ಯಾನ್ಸರ್,ಮೂತ್ರಪಿಂಡ ಕಲ್ಲು ಕಾಯಿಲೆಗಳ ತಪಾಸಣಾ ಶಿಬಿರ ಹಾಗೂ ಕಣ್ಣು ಪರೀಕ್ಷೆಗಳನ್ನು ಮತ್ತು ಕಣ್ಣಿನ ಶಸ್ತ್ರ ಚಿಕಿತ್ಸೆಗೆ ರೋಗಿಗಳನ್ನು ಆಯ್ಕೆ ಮಾಡಲಾಯಿತು.ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಇಸಿಜಿ,ಎಕೋ ಮುಂತಾದ ಆರೋಗ್ಯ ತಪಾಸಣೆಗಳನ್ನು ಉಚಿತವಾಗಿ ಮಾಡಲಾಯಿತು, 350ಕ್ಕೂ ಹೆಚ್ಚಿನ ರೋಗಿಗಳ ತಪಾಸಣೆ ಮಾಡಲಾಯಿತು ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇರುವ ರೋಗಿಗಳನ್ನು ಸಪ್ತಗಿರಿ ಆಸ್ಪತ್ರೆ ಬೆಂಗಳೂರು ಇಲ್ಲಿಗೆ ಶಿಫಾರಸು ಮಾಡಲಾಯಿತು ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ 350ಕ್ಕೂ ಹೆಚ್ಚು ರೋಗಿಗಳು ತಪಾಸಣೆಗೆ ಒಳಪಟ್ಟು ಅದರಲ್ಲಿ 20 ಜನರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಪ್ತಗಿರಿ ಆಸ್ಪತ್ರೆಗೆ ಕಳಿಸಿಕೊಡಲಾಯಿತು 50 ಜನ ರೋಗಿಗಳನ್ನು ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆಗಾಗಿ ವೈ ಮಹಾಬಲೇಶ್ವರಪ್ಪ ಮೆಮೋರಿಯಲ್ ಕಣ್ಣಿನ ಕೇಂದ್ರ ಬಳ್ಳಾರಿ ಇಲ್ಲಿಗೆ ಶಿಫಾರಸು ಮಾಡಲಾಯಿತು,ಉಚಿತ ಆರೋಗ್ಯ ತಪಾಸಣಾ ಶಿಬಿರದ ಉಸ್ತುವಾರಿಯನ್ನು ಚಿಟ್ಟೂರು ಶ್ರೀನಿವಾಸ್ ( ವಾಸು) ವಹಿಸಿಕೊಂಡು ಅಚ್ಚುಕಟ್ಟಾಗಿ ಶಿವಾಲಯ ದೇವಸ್ಥಾನದಲ್ಲಿ ನಡೆದ ಉಚಿತ ಆರೋಗ್ಯ ಶಿಬಿರದ ಕೆಲಸಗಳನ್ನು ಅತ್ಯಂತ ಹಚ್ಚುಕಟ್ಟಾಗಿ ತಮ್ಮ ಮನೆಯ ಕೆಲಸದ ಹಾಗೆ ಮುಂದೆ ನಿಂತು ನೆರವೇರಿಸಿದರು ಹಾಗೂ ಅನೇಕ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಇವರು ಇವತ್ತಿನ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಉಚಿತ ಕಣ್ಣಿನ ತಪಾಸಣಾ ಶಿಬಿರದಲ್ಲಿ ಬಂದಂತ ರೋಗಿಗಳಿಗೆ ಮಾರ್ಗದರ್ಶನವನ್ನು ನೀಡುತ್ತಾ ಅಚ್ಚುಕಟ್ಟಾಗಿ ಕಾರ್ಯವನ್ನು ನಿರ್ವಹಿಸಿದರು.ಇದೇ ಸಂದರ್ಭದಲ್ಲಿ ಸನ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ವಿದ್ಯಾರ್ಥಿಗಳು ಸಪ್ತಗಿರಿ ಆಸ್ಪತ್ರೆಯ ವೈದ್ಯರೊಂದಿಗೆ ಸೇರಿ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಆರೋಗ್ಯ ಯೋಧರಾಗಿ ಕಾರ್ಯ ನಿರ್ವಹಿಸಿದರು ಬಿಪಿ,ಶುಗರ್,ಇಸಿಜಿ ಹಾಗೂ ರೋಗಿಗಳ ನೊಂದಣಿ ಮತ್ತು ಔಷಧ ವಿತರಣೆಯಲ್ಲಿ ಕೆಲಸ ಮಾಡಿ ಸಾರ್ವಜನಿಕರ ಪ್ರಶಂಸೆಯನ್ನು ಗಿಟ್ಟಿಸಿಕೊಂಡರು,ಇದೇ ಸಂದರ್ಭದಲ್ಲಿ ಸನ್ ರೈಸ್ ಸ್ಕೂಲ್ ಆಫ್ ನರ್ಸಿಂಗ್‌ನ ಪ್ರಾಚಾರ್ಯರಾದ ಲಾಜರ್ ಸಿರಿಲ್ ಸಹ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಾ ತಮ್ಮ ಅಳಿಲು ಸೇವೆಯನ್ನು ಸಾರ್ವಜನಿಕರಿಗೆ ನೀಡಿದರು ಒಟ್ಟಾರೆ ಆರೋಗ್ಯ ತಪಾಸಣಾ ಶಿಬಿರವು ಅತ್ಯಂತ ಯಶಸ್ವಿಯಾಗಿ ಜರುಗಿತು.



