ಸಿಂಧನೂರು : 6 ಲಕ್ಷ ರು. ಖರ್ಚು ಮಾಡಿ ಕೊಟ್ಟ ಮಾತಿನಂತೆ ಅಪ್ಪ- ಅಮ್ಮರನ್ನು ಹೆಲಿಕ್ಯಾಪ್ಟರ್‌ನಲ್ಲಿ ಸುತ್ತಾಡಿಸಿದ ಸುಪುತ್ರ ಎಲ್ಲರ ಗಮನ ಸೆಳೆದಿದ್ದಾರೆ. ಸ್ಥಳೀಯ ಅಬ್ದುಲ್ ಜನತಾ ಕಾಲೋನಿಯ ಯುವಕ ತಮ್ಮ ತಂದೆ ತಾಯಿಯವರು ಹಿಂದೆ ನಾವು ಬೆಂಗಳೂರು ಮುಖಾಂತರ ಸಿಂಧನೂರಿನಲ್ಲಿ ಹೆಲಿಕ್ಯಾಪ್ಟರ್ ಮುಖಾಂತರ ಮೇಲುಗಡೆ ಸುತ್ತಾಡಬೇಕು ಎಂಬ ಆಸೆ ಇಟ್ಟಿದ್ದರು ಎಂದು ಮಗನ ಬಳಿ ಹೇಳಿದ್ದಾರೆ.ಪೋಷಕರ ಆಸೆಯಂತೆ ಖಾಸಗಿ ಉದ್ಯೋಗಿ, ಜನತಾ ಕಾಲೋನಿ ನಿವಾಸಿ ಅಬ್ದುಲ್ ತಮ್ಮ ತಂದೆ ತಾಯಿಯವರನ್ನು ಸೇರಿಕೊಂಡು ತಮ್ಮ ಕುಟುಂಬದವರನ್ನು ಹೆಲಿಕ್ಯಾಪ್ಟರ್ ಮುಖಾಂತರ ಸಿಂಧನೂರು ತುಂಬಾ ಸುತ್ತಾಡಿರುವುದು ಶನಿವಾರ ಕಂಡು ಬಂತು.6 ಲಕ್ಷ ರೂಪಾಯಿ ಖರ್ಚು ವಾರ್ಡ್ ನಂಬರ್ 25 ರ ಜನತಾ ಕಾಲೋನಿಯ ನಿವಾಸಿಗಳಾದ ಶರೀಫ್ ಸಾಬ್ ಇವರ ಧರ್ಮಪತ್ನಿ ಸಜಾದಿ ಬೇಗ ಇವರನ್ನು ಇವರ ಮೊದಲ ಮಗ ಅಬ್ದುಲ್ 6 ಲಕ್ಷ ರೂಪಾಯಿ ಖರ್ಚು ಮಾಡಿ ಇವರ ಆಸೆಯಂತೆ ಬೆಂಗಳೂರಿನಿಂದ ಸಿಂಧನೂರುವರೆಗೆ ಹೆಲಿಕ್ಯಾಪ್ಟರ್ ಮುಖಾಂತರ ಆಗಮಿಸಿ, ಇಲ್ಲಿಯ ಸ್ಥಳೀಯ ಎಲ್ಲಾ ತಾಣಗಳನ್ನು ತಂದೆ-ತಾಯಿ ಹಾಗೂ ಅವರ ಕುಟುಂಬದವರಿಗೆ ತೋರಿಸಿ ಆಸೆಯನ್ನು ಈಡೇರಿಸಿದ ಮಗ ಆಗಿದ್ದಾನೆ. ಇವರ ಪ್ರೀತಿಗೆ ಸಿಂಧನೂರು ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಅಬ್ದುಲ್ ಇವರು ಸಣ್ಣಪುಟ್ಟ ಕೆಲಸ ಮಾಡಿಕೊಂಡು ರಿಯಲ್ ಎಸ್ಟೇಟ್‌ನಲ್ಲಿ ತಮ್ಮ ಸಾಮರ್ಥ್ಯ ತೋರಿಸ್ಕೊಂಡು ಜೀವನ ಸಾಗಿಸುವ ಕೆಲಸದಲ್ಲಿ ಇದ್ದಾರೆ, ಇವರ ತಂದೆ ತಾಯಿಯವರು ಆಸೆ ಪಟ್ಟಂತೆ ಹೆಲಿಕ್ಯಾಪ್ಟರ್ ನಲ್ಲಿ ಸುತ್ತಾಡಿಸಿದ್ದು ಇತರರಿಗೆ ಮಾದರಿ ಆಗಿದ್ದಾರೆ.

Leave a Reply

Your email address will not be published. Required fields are marked *