ಕನ್ನಡಕ್ಕಾಗಿ ಕೈ ಎತ್ತು, ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಎಂಬ ಕುವೆಂಪು ಅವರ ವಾಣಿಯನ್ನು ಅಕ್ಷರಸಹ ಪಾಲಿಸುತ್ತಿರುವ ಮಂಜುನಾಥ ಗಾಣಗೇರ (ಅಧ್ಯಕ್ಷರು ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿಗಳು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಸಿಂಧನೂರು) ಇವರ ಕನ್ನಡ ಪ್ರೇಮ ಅನುಕರಣಿಯ. ಕನ್ನಡ ಭಾಷೆಗಾಗಿ, ಕನ್ನಡಿಗರಿಗಾಗಿ ಹಗಲಿರುಳು ಪ್ರೀತಿಯಿಂದ ದುಡಿಯುತ್ತಿರುವ ಇವರನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು,ಮೈಸೂರು ಸಾವಿತ್ರಿಬಾಯಿ ಬಾಪುಲೆ ಟ್ರಸ್ಟ್ (ರಿ) ಸಾವಿತ್ರಿಬಾಯಿ ವೃದ್ಧಾಶ್ರಮ,ಮಂಡ್ಯ ೭೦ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಪ್ರಶಸ್ತಿ ಪ್ರಧಾನ ಸಮಾರಂಭ ಸಾವಿತ್ರಿಬಾಯಿ ಬಾಫುಲೆ / ಹೆಮ್ಮೆಯ ಕನ್ನಡಿಗ /ಕನ್ನಡತಿ ರಾಜ್ಯ ಪ್ರಶಸ್ತಿ-2025 ರಾಜ್ಯಮಟ್ಟದಲ್ಲಿ ಗುರುತಿಸಿ ಸಾವಿತ್ರಿಬಾಯಿ ಬಾಫುಲೆ ಪ್ರಶಸ್ತಿ ನೀಡಿರುವುದು. ಖುಷಿತಂದಿದೆ ದಿನಾಂಕ 22-11-2025 ರಂದು ಸಾವಿತ್ರಿಬಾಯಿ ವೃದ್ಧಾಶ್ರಮ, ಮಂಡ್ಯ ದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ ಇವರ ಕನ್ನಡ ಪ್ರೇಮದ ಕಂಪು ರಾಜ್ಯಮಟ್ಟದಲ್ಲಿ ಪಸರಿಸಿರುವುದು ಹೆಮ್ಮೆಯ ಸಂಗತಿ. ಇನ್ನಷ್ಟು ಹೆಚ್ಚಿನ ಸ್ಥಾನಮಾನ ಸಿಗಲೆಂದು ಹರಸುತ್ತೇವೆ. ಈ ಪ್ರಶಸ್ತಿ ದೊರಕಿರುವುದು ನಮ್ಮ ಸಿಂಧನೂರಿಗೆ ಹಾಗೂ ಎಲ್ಲಾ ಕನ್ನಡ ಪ್ರೇಮಿಗಳಿಗೆ ಕೀರ್ತಿ ತಂದಿದೆ ಇವರ ಕನ್ನಡ ಪ್ರೇಮ ಇಂದಿನ ಯುವಕರಿಗೆ ಇನ್ನೂ ಮಾದರಿಯಾಗಲಿ ಎಂದು ಆಶಿಸುತ್ತೇವೆ ಹಾಗೂ ನಮ್ಮ ನೈಜ್ಯ ದೆಸೆ ಕನ್ನಡ ದಿನಪತ್ರಿಕೆಯ ವತಿಯಿಂದ ತುಂಬು ಹೃದಯದ ಅಭಿನಂದನೆಗಳು ಶುಭವಾಗಲಿ…
