ತಾಳಿಕೋಟೆ: ದೃಶ್ಯಬಿಂಬ ಕಲಾ ಪ್ರತಿಷ್ಠಾನ (ರಿ) ಸಂಸ್ಥೆಯ ಅಧ್ಯಕ್ಷ ಸತೀಶ ಕೇಮಶೆಟ್ಟಿ ಅವರಿಗೆ “ಯುವ ನಾಯಕ ಪುರಸ್ಕಾರ – 2026” ದೊರೆತಿದೆ.
‘ರಾಷ್ಟ್ರೀಯ ಯುವ ದಿನಾಚರಣೆ’ ಅಂಗವಾಗಿ ನಾಗರಮುನ್ನೊಳ್ಳಿಯ ಕವಿತ್ತ ಕರ್ಮಮಣಿ (ರಿ) ಫೌಂಡೇಶನ್ ವತಿಯಿಂದ ಪ್ರತಿ ವರ್ಷ ಕಲೆ, ಸಾಹಿತ್ಯ, ಶಿಕ್ಷಣ ಮತ್ತು ಸಾಮಾಜಿಕ ಸೇವೆಗಳಲ್ಲಿ ವಿಶಿಷ್ಟ ಸಾಧನೆ ಮಾಡಿರುವ ಯುವ ಪ್ರತಿಭಾವಂತರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮ ನಡೆಯುತ್ತದೆ. ಈ ಹಿನ್ನೆಲೆಯಲ್ಲಿ ಇದೆ ಜ.25ರಂದು ನಾಗರಮುನ್ನೊಳ್ಳಿಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಯುವ ಪೀಳಿಗೆಯಲ್ಲಿ ಕಲೆ–ಸಂಸ್ಕೃತಿ ಅರಿವು ಬೆಳೆಸುವುದು, ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಕಲಾ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುವುದು, ಶಾಲಾ–ಕಾಲೇಜುಗಳಲ್ಲಿ ತರಬೇತಿ ಶಿಬಿರಗಳು ಮತ್ತು ಪ್ರದರ್ಶನಗಳು ಆಯೋಜಿಸುವುದು ಸೇರಿದಂತೆ ಹಲವು ಸಾಮಾಜಿಕ–ಶೈಕ್ಷಣಿಕ ಕಾರ್ಯಕ್ರಮಗಳ ಮೂಲಕ ಕೇಮಶೆಟ್ಟಿ ಅವರ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ಗೌರವ ನೀಡಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *