ತಾಳಿಕೋಟಿ: ಅಯ್ಯಪ್ಪ ಸ್ವಾಮಿಯ ಮಹಾಪೂಜೆಗೆ ನನ್ನನ್ನು ಆಮಂತ್ರಿಸುವುದರ ಜೊತೆಗೆ ಇದೀಗ ಸನ್ನಿಧಿ ಅವರ ಮಹಾಪ್ರಸಾದವನ್ನು ನನಗೆ ತಂದು ಕೊಟ್ಟಿರುವುದು ನನ್ನ ಸೌಭಾಗ್ಯವೆಂದು ಭಾವಿಸುತ್ತೇನೆ ಎಂದು ಬಿಜೆಪಿ ಮುಖಂಡ ಬಸನಗೌಡ ಪಾಟೀಲ ಎಡಿಯಾಪೂರ ಹೇಳಿದರು. ಶನಿವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅಯ್ಯಪ್ಪ ಸ್ವಾಮಿಯ ಸನ್ನಿಧಿಗೆ ಹೋಗಿ ಮರಳಿದ ಭಕ್ತಾದಿಗಳು ಪ್ರಸಾದ ನೀಡಿ ತಮ್ಮನ್ನು ಗೌರವಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು. ಮುಂದಿನ ವರ್ಷ ನಡೆಯುವ ಮಹಾ ಪೂಜೆಯ ಎಲ್ಲ ಕಾರ್ಯಕ್ರಮಗಳು ಇನ್ನಷ್ಟೂ ಅದ್ದೂರಿಯಾಗಿ ನಡೆಯಲು ನಾನು ನಿಮ್ಮೊಂದಿಗೆ ಇದ್ದು ಸಹಕರಿಸುತ್ತೇನೆ ಎಂದರು. ಈ ಸಮಯದಲ್ಲಿ ಅಯ್ಯಪ್ಪ ಸ್ವಾಮಿ ಬಳಗದ ಸದಸ್ಯರಾದ ಬಸವರಾಜ ಸಜ್ಜನ,ಗುರು ಕಲಾಲ, ಸಂಧೀಪ ದೇಸಾಯಿ,ಚಂದ್ರಶೇಖರ ವಿಜಾಪೂರ, ಗಣ್ಯರಾದ ಕೆ.ಸಿ.ದೇಸಾಯಿ (ಶಳ್ಳಗಿ), ವಿಶ್ವನಾಥರೆಡ್ಡಿ ಪಾಟೀಲ(ಲಕ್ಕುಂಡಿ), ಶರಣಗೌಡ ಪಾಟೀಲ (ಕರಿಭಾವಿ). ಗುತ್ತಿಗೆದಾರ ಶ್ರೀನಿವಾಸರೆಡ್ಡಿ ಬಳ್ಳಾರಿ ಮತ್ತಿತರರು ಇದ್ದರು.

