ತಾಳಿಕೋಟಿ: ತಂದೆ ತಾಯಿಗಳಿಗೆ ಪಾದ ಪೂಜೆಯನ್ನು ಅರ್ಪಿಸುವುದು ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ ಇದು ಭಾರತದಲ್ಲಿ ಹುಟ್ಟಿದರೂ ಇಂದು ಇಂಡೋನೇಷ್ಯಾದಲ್ಲಿ ಹೆಚ್ಚು ಪ್ರಸಿದ್ಧಿಯನ್ನು ಪಡೆದಿದೆ ಎಂದು ಜಾಲಹಳ್ಳಿ ಸಂಸ್ಥಾನ ಬ್ರಹನ್ಮಠದ ಪೂಜ್ಯ ಶ್ರೀ ಷ.ಬ್ರ.ಜಯಶಾಂತಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು. ಶನಿವಾರ ಮೈಲೇಶ್ವರದ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಬ್ರಿಲಿಯಂಟ್ ಕಲಾ ವೈಭವ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಈ ಸಂಸ್ಥೆ ಪಾದ ಪೂಜೆ ಅಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ನೋಡಿದರೆ ಇಲ್ಲಿ ಗುಣಮಟ್ಟದ ಶಿಕ್ಷಣದೊಂದಿಗೆ ಮಕ್ಕಳಿಗೆ ಒಳ್ಳೆಯ ಸಂಸ್ಕಾರಗಳನ್ನೂ ಕೊಡಲಾಗುತ್ತಿದೆ ಇದು ಬಹಳ ಸಂತೋಷದ ವಿಷಯ, ಈ ಸಂಸ್ಥೆ ಇನ್ನೂ ಎತ್ತರಕ್ಕೆ ಬೆಳೆಯಲೆಂದು ಹಾರೈಸುತ್ತೇನೆ ನಮ್ಮ ಆಶೀರ್ವಾದ ಈ ಸಂಘದ ಆಡಳಿ ಮಂಡಳಿಯ ಸದಸ್ಯರು ಹಾಗೂ ಸಿಬ್ಬಂದಿಗಳೊಂದಿಗೆ ಸದಾ ಇರಲಿದೆ ಎಂದರು. ಸಮಾರಂಭ ಉದ್ಘಾಟಿಸಿ ಡಾ.ಭರಮಣ್ಣ ಕಾಮನ್ ಮಾತನಾಡಿ ನಮ್ಮ ಶಿಕ್ಷಣ ಸಂಸ್ಥೆಗಳಿಂದ ಸಿಗುವ ಶಿಕ್ಷಣದಿಂದ ಮಕ್ಕಳು ಸಂಸ್ಕಾರವಂತರಾಗಿ, ಹೆತ್ತವರನ್ನು ಗೌರವಿಸುವಂಥವರಾಗಿ, ಸಮಾಜದ ಒಳ್ಳೆಯ ಜವಾಬ್ದಾರಿಯುತ ನಾಗರಿಕರಾಗಲು ಸಾಧ್ಯವಾಗಬೇಕು ಅಂತಹ ಕೆಲಸವನ್ನು ಬ್ರಿಲಿಯಂಟ್ ಸಂಸ್ಥೆ ಮಾಡುತ್ತಿದೆ ನಿಮ್ಮೆಲ್ಲರ ಸಹಕಾರ ಇವರಿಗೆ ಇರಲಿ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಾರ್ಕಳದ ಉಪನ್ಯಾಸಕಿ ಅಕ್ಷಯಾ ಗೋಖಲೆ ಮಾತನಾಡಿ ಭಾರತ ವಿಶ್ವದಲ್ಲಿಯೇ ಶ್ರೇಷ್ಠ ಸಂಸ್ಕೃತಿ, ಪರಂಪರೆಯನ್ನು ಹೊಂದಿದ ದೇಶ ಇದನ್ನು ರಕ್ಷಿಸುವ ಕಾರ್ಯ ನಾವೆಲ್ಲರೂ ಮಾಡಬೇಕಾಗಿದೆ. ಹೆತ್ತವರು ಮಕ್ಕಳಿಗೆ ಚಿಕ್ಕಂದಿನಿಂದಲೆ ಒಳ್ಳೆಯ ಸಂಸ್ಕಾರಗಳನ್ನು ಮನೆಯಿಂದಲೇ ಕೊಡುವಂತಾಗಬೇಕು ನಮ್ಮ ಶಿಕ್ಷಣ ಸಂಸ್ಥೆಗಳಿಂದಲೂ ಈ ಕಾರ್ಯ ಆಗಬೇಕು ಇದನ್ನು ಬ್ರಿಲಿಯಂಟ್ ಸಂಸ್ಥೆ ಮಾಡುತ್ತಿರುವುದು ಸಂತೋಷದ ವಿಷಯ ಎಂದರು. ಇದೇ ಸಂದರ್ಭದಲ್ಲಿ ಸಂಸ್ಥೆ ವತಿಯಿಂದ ಮೈಲೇಶ್ವರ ಗ್ರಾಮದ ಗಣ್ಯರಿಗೆ, ಪತ್ರಕರ್ತರಿಗೆ,ಆರಕ್ಷಕ ಸಿಬ್ಬಂದಿ, ಆರೋಗ್ಯ ಇಲಾಖೆ, ವಿದ್ಯುತ್ ನಿಗಮ ಮಂಡಳಿ, ಹಾಗೂ ಸಾಧನೆಗೈದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಮತ್ತು ಅತಿಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಶ್ರೀ ಮಾರುತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎನ್.ಬಿ. ನಡುವಿನಮನಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಸಿದ್ದು ಕರಡಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸಿ ಆರ್ ಸಿ ಸಂಗಮೇಶ್ ಪಾಲ್ಕಿ, ಮು.ಗು. ಡಾ.ವಿನಾಯಕ ಪಟಗಾರ, ಬಿ.ಜಿ.ಕರಕಳ್ಳಿ, ಆಡಳಿತ ಮಂಡಳಿ ಉಪಾಧ್ಯಕ್ಷ ಆರ್ ಬಿ ನಡುವಿನಮನಿ, ಕಾರ್ಯದರ್ಶಿ ಎಮ್ ಬಿ ಮಡಿವಾಳರ, ನಿರ್ದೇಶಕರಾದ ಎಸ್ ಎಚ್ ಪಾಟೀಲ, ಶಶಿಧರ್ ಎಂ ಬಿರಾದಾರ, ನಿರ್ದೇಶಕಿ ಎಲ್ಎಂ ಬಿರಾದಾರ, ಎನ್.ಎಸ್.ಗಡಗಿ, ಮುಖ್ಯೋಪಾಧ್ಯಾಯರು, ಬೋಧಕ ಭೋದಿಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು. ವೇದಿಕೆ ಕಾರ್ಯಕ್ರಮದ ನಂತರ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

