ರಾಯಚೂರು: ಸೈಯದ್ ಶಮ್ಸ್ ಆಲಂ ಹುಸೇನಿ ಅಲಿಯಾಸ್ ಸೈಯದ್ ನಸೀಮ್ ಅಶ್ರಫ್ ಹುಸೇನಿ (49 ವರ್ಷ) ಶನಿವಾರ ಬೆಳಿಗ್ಗೆ ಹೃದಯಾಘಾತದಿಂದಾಗಿ ನಿಧನರಾದರು.
ಅವರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ. ಮೃತರ ಅಂತ್ಯಕ್ರಿಯೆ ಸೈಯದ್ ಶಮ್ಸ್ ಆಲಂ ಹುಸೇನಿ ರಹೇಮತುಲ್ಲಾ ಅಲ್ಲೆಹೆ ದರ್ಗಾ ಆವರಣದ ಕಬರಸ್ತಾನದಲ್ಲಿ ನಡೆಯಿತು.
ಅಶ್ರಫ್ ಹುಸೇನಿ ಅವರು ಸಿಸಾಯತ್ ಉರ್ದು ದಿನಪತ್ರಿಕೆ, ಈಟಿವಿ ಉರ್ದು, ನ್ಯೂಸ್ 18 ಉರ್ದು, ದೂರದರ್ಶನದ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದರು.
