ಗಂಗಾವತಿಯ ಜೈಭೀಮ ನಗರದ ಮಹ್ಮದ ತಂದೆ ಆಲಂಬಾಷ (27) ಕಾಣೆಯಾಗಿದ್ದು, ಗಂಗಾವತಿ ನಗರ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರು ತಿಳಿಸಿದ್ದಾರೆ.
ಕಾಣೆಯಾದ ವ್ಯಕ್ತಿಯ ಪತ್ನಿ ರೇಷ್ಮಾ ಬಾನು ಅವರು.ಪೊಲೀಸ್ ಠಾಣೆಗೆ ದೂರು ನೀಡಿದ್ದು, ಗಂಗಾವತಿ ನಗರ .ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ.207/2025 ರಡಿ ಪ್ರಕರಣ ದಾಖಲಾಗಿದೆ.

ಕಾಣೆಯಾದ ವ್ಯಕ್ತಿ ಚಹರೆ ವಿವರ: ಮಹ್ಮದ ತಂದೆ ಆಲಂಬಾಷ ವಯಸ್ಸು 27 ವರ್ಷ, 5.5 ಎತ್ತರ, ಗೋದಿ ಮೈಬಣ್ಣ, ದುಂಡನೇಯ ಮುಖ, ಸಾಧಾರಣ ಮೈಕಟ್ಟು ಹೊಂದಿದ್ದಾನೆ. ಕಾಣೆಯಾದಾಗ ತಿಳಿ ಹಸಿರು ಬಣ್ಣದ ಶರ್ಟ್ ಮತ್ತು ಪ್ಯಾಂಟ್ ಧರಿಸಿದ್ದು, ಕನ್ನಡ ಮತ್ತು ಹಿಂದಿ ಭಾಷೆ ಮಾತನಾಡಲು ಬರುತ್ತದೆ.

ಈ ವ್ಯಕ್ತಿ ಯಾರಿಗಾದರು ಕಂಡುಬಂದಲ್ಲಿ ಅಥವಾ ಇತನ ಬಗ್ಗೆ ಮಾಹಿತಿ ದೊರೆತಲ್ಲಿ ಕೊಪ್ಪಳ ಎಸ್.ಪಿ. ದೂ.ಸಂ: 08539-230111, ಗಂಗಾವತಿ ಡಿವೈಎಸ್ಪಿ ದೂ.ಸಂ: 08533-230853, ಗಂಗಾವತಿ ನಗರ .ಪೊಲೀಸ್ ಠಾಣೆಯ .ಪೊಲೀಸ್ ಇನ್ಸಪೆಕ್ಟರ್ ಮೊ.ಸಂ: 9480803752 ಹಾಗೂ ದೂ.ಸಂ: 08533-230633, 08533-230100 ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಗಂಗಾವತಿ ನಗರ .ಪೊಲೀಸ್ ಠಾಣೆಯ ತಿಳಿಸಿದೆ.

Leave a Reply

Your email address will not be published. Required fields are marked *