ಪ್ರತಿನಿತ್ಯ ಮೋಸ, ವಂಚನೆ, ಸುಲಿಗೆ ಮಾಡುವ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಕಾಣುತ್ತಿದ್ದೇವೆ, ಅವುಗಳನ್ನು ತಡೆಯಲು ಮತ್ತು ಯಾವ ರೀತಿಯಾಗಿ ಯಾವ-ಯಾವ ಸಂದರ್ಭದಲ್ಲಿ ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ಹೇಳುತ್ತಾ ಮನೆಯಲ್ಲಿ ಬಂಗಾರ ಬೆಳ್ಳಿ, ಹಣ ಇಡಬೇಡಿ, ಮನೆ ಕೀಲಿ ಹಾಕಬೇಡಿ ಒಂದು ವೇಳೆ ಹೋಗಲೆಬೇಕಾದ ಸಂದರ್ಭದಲ್ಲಿ ಮನೆ ಕೀಲಿ ಹಾಕಿದ ವಿಷಯ ಪೋಲಿಸ್ ಠಾಣೆಗೆ ಮಾಹಿತಿ ತಿಳಿಸಿ, ಎನ್ನುತ್ತಾ ಅನೇಕ ಉದಾಹರಣೆ ಹೇಳುವ ಮೂಲಕ ಯಾವ ರೀತಿಯಾಗಿ ನಾವು ಮುಂಜಾಗೃತೆ ನಾವು ವಹಿಸಬೇಕು ಎನ್ನುತ್ತಾ, ಫೋನಿನಲ್ಲಿ ಯಾರಿಗೂ ನಿಮ್ಮ ಕೆ.ವೈ.ಸಿ. ಮತ್ತು ಓ.ಟಿ.ಪಿ ಕೊಡಬೇಡಿ ಪಾರ್ಸಲ್ ಮತ್ತು ಕೋರಿಯರ್ ಕರೆಗಳಿಗೆ ಸ್ಪಂದಿಸಬೇಡಿ ಒಂದುವೇಳೆ ಸ್ಪಂದಿಸುವಂತಹ ಸಂದರ್ಭ ಬಂದರೆ ಅವರೊಂದಿಗೆ ಕನ್ನಡ ಭಾಷೆಯಲ್ಲೆ ಮಾತನಾಡಿ ಎಂದು ಎಂ.ಬಿ. ನಗರ ಪೋಲಿಸ್ ಠಾಣೆಯ ಸರ್ಕಲ್ ಪೋಲಿಸ್ ಇನ್ಸ್ಪೆಕ್ಟರ್ ಖಾಜಾ ಹುಸೇನ್‌ರವರು, ಬೇರೆ ಬೇರೆ ಭಾಷೆಗಳಲ್ಲಿ ಮಾತನಾಡಿ ಸುಳ್ಳು ಭರವಸೆ ನೀಡುತ್ತಾ ಮೋಸ ಮಾಡುತ್ತಿರುವ ಬಹುಸಂಖ್ಯಾ ಬಹುಭಾಷಾ ವಂಚಕರಿಗೆ ಕನ್ನಡ ಭಾಷೆ ತಿಳಿಯುವುದಿಲ್ಲ. ಅಂತಹವರೊಂದಿಗೆ ಕನ್ನಡದಲ್ಲೆ ಮಾತನಾಡುವುದರಿಂದ ವಂಚನೆಯಿಂದ ತಪ್ಪಿಸಿಕೊಳ್ಳಬಹುದು ಎನ್ನುತ್ತಾ ದಿನಾಂಕ: ೧೬.೦೧.೨೦೨೬ರಂದು ವಿದ್ಯಾನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ನಡೆದ ಎಂ.ಬಿ. ನಗರ ಪೋಲಿಸ್ ಠಾಣೆಯ ವತಿಯಿಂದ ಹಮ್ಮಿಕೊಂಡ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರಿಗೆ ಹೇಳಿದ ಮಾತು ಬಹಳ ಅಭಿಮಾನದ ಮಾತು ಎಂದು ವಿದ್ಯಾನಗರ ವೆಲ್‌ಫೇರ್ ಸೊಸೈಟಿ ಕಾರ್ಯದರ್ಶಿ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿಯರವರು ಮೆಚ್ಚುಗೆ ವ್ಯಕ್ತಪಡಿಸುತ್ತಾ ಇಂತಹ ನಾಡು, ನುಡಿ, ಭಾಷೆ ಭಾಷಾಭಿಮಾನ ಇರುವಂತಹ ಅಧಿಕಾರಿಗಳ ಕೈಯಲ್ಲಿ ಅಧಿಕಾರವಿದ್ದರೆ ಆಡಳಿತ ಸುಧಾರಣೆ ಆಗುವುದರಲ್ಲಿ ಸಂದೇಹವಿಲ್ಲ ಎಂದು ದೇವಸ್ಥಾನಕ್ಕೆ ಪ್ರಪ್ರಥಮವಾಗಿ ಆಗಮಿಸಿದ ಸಿ.ಪಿ.ಐ ಸಾಹೇಬರಿಗೆ ಸನ್ಮಾನಿಸಿ ಗೌರವಿಸಿದರು.
ಸೊಸೈಟಿಯ ಅಧ್ಯಕ್ಷರಾದ ಮಲ್ಲಿನಾಥ ದೇಶಮುಖ ರವರು ನಮ್ಮ ಕಾಲೋನಿಯಲ್ಲಿ ರಾತ್ರಿ ೧೧ ಗಂಟೆಗೆ ಪೊಲೀಸರ ಬೀಟ್ ಸಮಯವಿದೆ ಅದನ್ನು ಹೆಚ್ಚಿಸಬೇಕು, ಮಧ್ಯಾಹ್ನ ದೇವಸ್ಥಾನದ ಎದುರುಗಡೆ ಇರುವ ಉದ್ಯಾನವನದಲ್ಲಿ ಅನಾಮಿಕ ವ್ಯಕ್ತಿಗಳು ಬಂದು ಗಂಟೆಗಟ್ಟಲೆ ಕಾಲಹರಣ ಮಾಡುತ್ತಾ ಅನುಮಾನಾಸ್ಪದವಾಗಿ ತಿರುಗಾಡುತ್ತಿರುವುದು ಬೇಜಾರದ ಸಂಗತಿ ಹಾಗೂ ನಮ್ಮ ಕಾಲೋನಿ ಮುಖ್ಯ ದ್ವಾರದ ಅಕ್ಕಪಕ್ಕದಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ನಿಲ್ಲಿಸುವ ಟ್ರಾಫಿಕ್ ವ್ಯವಸ್ಥೆ ಸರಿಪಡಿಸಬೇಕೆಂದು ಮನವಿ ಮಾಡಿದರು.
ವಿಶೇಷವಾಗಿ ಮಹಿಳೆಯರು ತಮ್ಮ ಶ್ರೀಮಂತಿಕೆ ತೋರಿಸಲು ಮೈಮೇಲೆ ಬೆಲೆ ಬಾಳುವಂತಹ ಬೆಳ್ಳಿ ಬಂಗಾರ ಧರಿಸಬೇಡಿ ಅದರಿಂದ ನಿಮ್ಮ ಜೀವಕ್ಕೆ ಅಪಾಯವಿದೆ, ಇಂಥಹ ವಿಷಯದ ಬಗ್ಗೆ ಮಹಿಳೆಯರು ಹೆಚ್ಚಿನ ಮುಂಜಾಗೃತೆ ವಹಿಸುವುದು ಅನಿವಾರ್ಯವಿದೆ ಎಂದು ಪಿ.ಎಸ್.ಐ. ಅನಿತಾ ಗುತ್ತೇದಾರ ಮಾತನಾಡಿದರು. ಸಭೆಯಲ್ಲಿ ಕಾಲೋನಿಯ ಹಿರಿಯರಾದ ಬಿ.ಎನ್. ಪುಣ್ಯಶೆಟ್ಟಿ, ಸುಭಾಷ ಮಂಠಾಳೆ, ಗುರುಲಿಂಗಯ್ಯ ಮಠಪತಿ, ಎಸ್.ಜಿ. ಬಿರಾದಾರ, ಸಲಹೆ ನೀಡಿದರು.
ಸಾರ್ವಜನಿಕ ಸಂಪರ್ಕ ಸಭೆಯಲ್ಲಿ ಎ.ಎಸ್.ಐ. ಅಯ್ಯುಬ್, ಸಿವಿಲ್ ಪೊಲೀಸ್ ಕಾನ್ಟೇಬಲ್ ಬೀರಪ್ಪ, ಶಿವರಾಜ್ ಪಾಟೀಲ, ರೇವಣಸಿದ್ದಪ್ಪ ಜೀವಣಗಿ, ಶಾಂತಯ್ಯ ಬೀದಿಮನಿ, ನಾಗರಾಜ ಹೆಬ್ಬಾಳ, ಮಲ್ಲಿಕಾರ್ಜುನ ಕಾಳೆ, ಶರಣಯ್ಯ ಮಠಪತಿ, ನಾಗರಾಜ ಮುಗಳಿ, ಮಡಿವಾಳಪ್ಪ ಸಜ್ಜನ್, ದೇವೆಂದ್ರ ಸಲಗರ, ಮಾಣಿಕಪ್ಪ ಅತ್ತೂರ, ವಿಜ್ಞಾನಂದ ಜೋಗ, ತರುಣಶೇಖರ ಬಿರಾದಾರ ಉಪಸ್ಥಿತರಿದ್ದರು.”


