ಸಿಂಧನೂರು— ಅಂಬಾಜಿ ಮಹಿಳಾ ಗ್ರೂಪ್ ಕಾರಟಗಿಯ ಎಲ್ಲಾ ಮಹಿಳಾ ಪದಾಧಿಕಾರಿಗಳು ಮಕರ ಸಂಕ್ರಾಂತಿ ಹಬ್ಬದವನ್ನು ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಯಾದ ಶ್ರೀಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಆಶ್ರಯದಾತರುಗಳಿಗೆ ಉತ್ತಮ ಗುಣಮಟ್ಟದ ಬೆಡ್ ಶೀಟ್ ಗಳನ್ನು ಹಾಗೂ ಆಹಾರ ವಸ್ತುಗಳನ್ನು ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಸಂಕ್ರಾಂತಿ ಹಬ್ಬವನ್ನು ಆಚರಿಸಿದರು. ಈ ಸಮಯದಲ್ಲಿ ಎಲ್ಲಾ ವೃದ್ಧರೂ ಹಾಗೂ ವಯಸ್ಕರ ಬುದ್ಧಿಮಾಂದ್ಯದೊಂದಿಗೆ ಮನರಂಜನೆಯ ಮೂಲಕ ಗಮನ ಸೆಳೆದು ಅವರೆಲ್ಲರಿಗೂ ಆತ್ಮಸ್ಥೈರ್ಯ ತುಂಬಿದರು. ಈ ಸಮಯದಲ್ಲಿ ಆಶ್ರಮದ ಕಾರ್ಯಾಧ್ಯಕ್ಷರಾದ ಡಾ. ಚನ್ನಬಸಯ್ಯಸ್ವಾಮಿ ಹಿರೇಮಠ ಮಾತನಾಡಿ ಕೊಪ್ಪಳ ಜಿಲ್ಲೆಯ ಕಾರಟಗಿ ಪಟ್ಟಣದ ಜೈನ್ ಸಮಾಜದ ತಾಯಂದಿರು ಅಂಬಾಜಿ ಮಹಿಳಾ ಗ್ರೂಪ್ ನ ಮೂಲಕ ಕಾರುಣ್ಯ ಆಶ್ರಮಕ್ಕೆ ಮಾಡುತ್ತಿರುವ ಸಹಾಯ ಭಗವಾನ್ ಮಹಾವೀರನ ಪ್ರೀತಿಗೆ ಪಾತ್ರವಾಗಿದೆ. ಮತ್ತು ವಿಶೇಷವಾಗಿ ಎಲ್ಲಾ ತಾಯಂದಿರು ಕಾರುಣ್ಯ ಆಶ್ರಮದಲ್ಲಿ ಸಂಕ್ರಾಂತಿ ಹಬ್ಬವನ್ನು ಆಚರಣೆ ಮಾಡುತ್ತಿರುವುದು. ಮನುಕುಲದ ಮಾನವೀಯತೆಗೆ ಶೋಭೆ ತಂದಿದೆ. ಮಹಿಳೆಯರು ಕೂಡ ಈ ರೀತಿ ಒಟ್ಟುಗೂಡಿ ಸಮಾಜ ಪರ ಕಾರ್ಯಗಳನ್ನು ಮಾಡುತ್ತಿರುವುದು. ನಾಡಿನ ಮಹಿಳೆಯರಿಗೆ ಆದರ್ಶವಾಗಿದೆ. ಈ ಹಬ್ಬವು ಭಗವಂತನ ಆಶೀರ್ವಾದದಿಂದ ಇನ್ನು ಹೆಚ್ಚಿನ ಸಾಮಾಜಿಕ ಕಾರ್ಯಗಳನ್ನು ಮಾಡಲು ಸ್ಪೂರ್ತಿಯಾಗಲಿ. ಈ ಸಮಯದಲ್ಲಿ ಭಾಗವಹಿಸಿದ ಎಲ್ಲಾ ತಾಯಂದಿರಿಗೆ ಸಿಂಧನೂರಿನ ಕರುಣೆಯ ಕಾರುಣ್ಯ ಕುಟುಂಬದಿಂದ ಹೃದಯಪೂರ್ವಕ ಹೃತ್ಪೂರ್ವಕ ಧನ್ಯವಾದಗಳು ಎಂದು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಅಂಬಾಜಿ ಮಹಿಳಾ ಗ್ರೂಪ್ ನ ಅಧ್ಯಕ್ಷರಾದ ಸುಧಾದೇವಿ ಸದಸ್ಯರುಗಳಾದ ಉರ್ಮಿಳಾ ದೇವಿ. ಜಶೋಧಾ ದೇವಿ. ಇಮರ್ತಿ ದೇವಿ. ಕಮಲಾ ದೇವಿ. ಪೂನಿದೇವಿ. ಮೇತಿ ದೇವಿ. ಮೋರಿ ದೇವಿ. ಶೋಭಾದೇವಿ.ಮಮತಾದೇವಿ. ಪಿಂಕಿದೇವಿ.ಮೀರಾದೇವಿ. ಕಮಲಾದೇವಿ. ಅನಿತಾದೇವಿ ಗೀತಾದೇವಿ.ನೇನುದೇವಿ. ಇಂದ್ರಾ ದೇವಿ. ನೇನುದೇವಿ.ಜೀಮಾದೇವಿ. ಸೀತಾದೇವಿ. ಸೂರಜ್ ದೇವಿ. ಸಂತೋಷ ದೇವಿ. ಸಂಗೀತಾದೇವಿ.ಜಯಶ್ರೀ ದೇವಿ. ಹಾಗೂ ಶ್ರೀಮಠ ಸೇವಾ ಟ್ರಸ್ಟ್ ನ ಸುಜಾತ ಹಿರೇಮಠ. ಆಶ್ರಮದ ಸಿಬ್ಬಂದಿಗಳಾದ ಸುಜಾತ ಮಲದಗುಡ್ಡ.ಸಿದ್ದಯ್ಯ ಸ್ವಾಮಿ ಮರಿಯಪ್ಪ ಜ್ಯೋತಿ. ಹಾಗೂ ಕಾರಟಗಿಯ ಅಂಬಾಜಿ ಮಹಿಳಾ ಗ್ರೂಪ್ ನ ಹಲವಾರು ಮಹಿಳೆಯರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *