ಆನೆಹೊಸರು. ಜ. 16.- ಹುಟ್ಟಿದ ಮನುಷ್ಯ ತನ್ನ ಬದುಕನ್ನ ಕಟ್ಟಿಕೊಳ್ಳಲು ಹಲವಾರು ದಾರಿಗಳಿವೆ. ಆದರೆ ನಾವು ಪರೋಪಕಾರಿಯಾಗಿ ನಮ್ಮ ಬದುಕನ್ನು ಕಟ್ಟಿಕೊಳ್ಳಲು ಮುಂದಾದಾಗ ನಿಜವಾಗಿಯೂ ನಮ್ಮ ಬದುಕಿನಲ್ಲಿ ಭಗವಂತನಿದ್ದಾನೆಂದು ಭಾವಿಸಿ ಸಮಾಜಮುಖಿ ಕಾರ್ಯಗಳನ್ನು ಕೈಗೊಂಡಾಗ ಖಂಡಿತವಾಗಿ ಯಶಸ್ಸು ನಿಮ್ಮದಾಗುತ್ತದೆ ಎಂದು ಅಂಕಲಿಮಠದ ಫಕೀರೇಶ್ವರ ಶ್ರೀಗಳು ಹೇಳಿದರು.

ಆನೆಹೊಸೂರು ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ , ಬಿ ಸಿ ಟ್ರಸ್ಟ್, ಚಿತ್ತಾಪುರ್ ಹಾಗೂ ಆನೆ ಹೊಸೂರ ಪ್ರಗತಿ ಬಂದು ಸ್ವ ಸಹಾಯ ಸಂಘಗಳ ಒಕ್ಕೂಟ, ಹಮ್ಮಿಕೊಳ್ಳಲಾಗಿದ್ದ ಶ್ರೀ ಮಹಾಲಕ್ಷ್ಮಿ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಆಶೀರ್ವಚನ ನೀಡುತ್ತಾ ಮಾತನಾಡಿದ ಅವರು ಹುಟ್ಟಿದ ಪ್ರತಿಯೊಬ್ಬ ಮನುಷ್ಯ ಸಾಯುವದು ಖಚಿತ ಆದರೂ ನಾವು ಇಹಲೋಕ ತ್ಯಜಿಸುವ ಮುನ್ನ ಗುರುಗಳು ಹಾಕಿಕೊಟ್ಟ ಮಾರ್ಗದಲ್ಲಿ ನಡೆದು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಪರೋಪಕಾರಿಯಾಗಿ ಜೀವನ ನಡೆಸಿದರೇ ಅದುವೇ ಮನುಷ್ಯ ಜೀವನಕ್ಕೆ ಸಿಗುವ ನೆಮ್ಮದಿ.

ಇಂದು ಸಮಾಜದಲ್ಲಿ ಅನೇಕ ರೀತಿಯಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುತ್ತಾ ಆರ್ಥಿಕವಾಗಿ ದುರ್ಬಲರನ್ನು ಮೇಲೆತ್ತುತ್ತಾ ಅವರ ಸ್ವಾವಲಂಬಿ ಬದುಕಿಗೆ ಬೆನ್ನೆಲುಬಾಗಿ ಅನೇಕ ಅಡೆ-ತಡೆಗಳನ್ನು ಮೆಟ್ಟಿನಿಂತು ಸದಾಕಾಲ ಸಮಾಜಕ್ಕೆ ಒಳ್ಳೆಯ ಸಂಸ್ಕಾರ ನೀಡಿ ಸಮಾಜವನ್ನು ಸರಿದಾರಿಯತ್ತ ಕೊಂಡಯುವ ಸಮಾಜಮುಖಿ ಕೆಲಸವನ್ನ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯಾದ ಡಾ. ವೀರೇಂದ್ರ ಹೆಗಡೆಯವರು ಮಾಡುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ತಾಲೂಕ ಯೋಜನಾಧಿಕಾರಿ ಅಡಿವೆಯ್ಯ ಎಂ ಪ್ರಾಸ್ತಾವಿಕವಾಗಿ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಕಟ್ಟುವಾಗ ಹಲವಾರು ಆಪನಂಬಿಕೆಗಳು ಇದ್ದವು. ತದನಂತರದಲ್ಲಿ ಸಂಘದ ಆರ್ಥಿಕತೆ ಸಂಘದಲ್ಲಿ ನಡೆಯುವ ಆರ್ಥಿಕ ವ್ಯವಹಾರ ಇವೆಲ್ಲವನ್ನೂ ಗಮನಿಸಿದಾಗ ನಂತರದ ದಿನಮಾನಗಳಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್ ಮೇಲೆ ಜನರಿಗೆ ವಿಶ್ವಾಸ ಮೂಡಿದಾಗ ಸಂಘದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಮಹಿಳೆಯರು ಮುಂದಾದರು.

ಸಂಘದ ಯಾವುದೇ ವಹಿವಾಟು 6 ರಾಷ್ಟ್ರೀಕೃತ ಬ್ಯಾಂಕ್ ಗಳ ಮುಖಾಂತರ ನಡೆಯುತ್ತಿವೆ. ತಾಲೂಕಿನಲ್ಲಿ ಇಂದು 2300 ಮಹಿಳಾ ಸಂಘಗಳಿವೆ. ಮಹಿಳೆಯರ ಸಾವಲಂಬಿ ಜೀವನ ನಡೆಸುವದಕ್ಕೋಸ್ಕರವಾಗಿ ವಿವಿಧ ರೀತಿಯಲ್ಲಿ ಸ್ವ ಉದ್ಯೋಗ ಕೈಗೊಳ್ಳಲು ಸುಮಾರು 32 ಕೋಟಿ ರೂಪಾಯಿ ನೀಡಲಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗಡೆಯವರು ಶಿಕ್ಷಣ ಮತ್ತು ಆರೋಗ್ಯ ಹೆಚ್ಚು ಹೊತ್ತು ನೀಡುತ್ತಿದ್ದು ಇದಕ್ಕಾಗಿ ಹಲವಾರು ಯೋಜನೆಗಳನ್ನ ನಮ್ಮ ಸಂಘದಲ್ಲಿ ಜಾರಿಗೊಳಿಸಲಾಗಿದೆ ಎಂದು ಅವರು ಹೇಳಿದರು.

ಜಿಲ್ಲಾ ನಿರ್ದೇಶಕರಾದ ರಾಘವೇಂದ್ರ ಪಟಗಾರ್ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್ ನ ಹಲವಾರು ಯೋಜನೆಗಳನ್ನ ವಿವರಿಸಿದರು.

ಕಾರ್ಯಕ್ರಮವನ್ನು ಗ್ರಾಮದ ಹಿರಿಯ ಮುಖಂಡರಾದ ಭೀಮಸೇನ್ ರಾವ್ ಕುಲಕರ್ಣಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ ವೀರಣ್ಣ ಅಂಗಡಿ ವಹಿಸಿದ್ದರು. ಕಾರ್ಯಕ್ರಮ ಕುರಿತು ಹಿರಿಯ ಮುಖಂಡರಾದ ಡಿ ಜಿ ಗುರಿಕಾರ್, ಜೀವಲೆಪ್ಪ ನಾಯಕ್, ಗ್ಯಾನಪ್ಪ ಕಟ್ಟಿಮನಿ, ಮಾತನಾಡಿದರು.

ಕಾರ್ಯಕ್ರಮದಲ್ಲಿ ಹಾನೆಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಅಮಿನಾಬಿ ಇಸ್ಮಾಯಿಲ್ ಸಾಬ್ ಹುಬ್ಬಳ್ಳಿ, ಮಹಾದೇವಪ್ಪ ಸೂಗೂರು, ದೊಡ್ಡನಗೌಡ ಮಾಲಿ ಪಾಟೀಲ್, ಶ್ರೀಮತಿ ರೇಣುಕಾ ಮೌನೇಶ್ ನಾಯಕ್, ನರಕಲದಿನ್ನಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಮತಿ ಶಾಕಿರ ಹುಸೇನ್ ಸಾಬ್, ಚಿತ್ತಾಪುರ ಗ್ರಾಮ ಪಂಚಾಯತ್ ಅಧ್ಯಕ್ಷ ದೇವಪ್ಪ, ಶರಣಪ್ಪ ಕಟಗಿ, ಈಚನಾಳ್ ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀಮತಿ ಗಂಗಮ್ಮ ಉಮೇಶ್ ಚವ್ಹಾಣ್, ಪಿಡಿಒ ಗದ್ದೆಪ್ಪ ಸೂಗೂರು, ಮಹಾಲಿಂಗಪ್ಪ ಬಿರಾದಾರ್, ಹನುಮಂತ ನಗಾರಿ, ರಮೇಶ್ ತೊಗರಿ, ನಾಗರಾಜ್ ಮಡಿವಾಳರ್, ರಾಮಲಿಂಗಪ್ಪ ತುಪ್ಪದೂರು, ಬಂದೇ ನವಾಜ್ ಕೋಳೂರು,ಸಂಗಣ್ಣ ಹೊಸಮನಿ ಸೇರಿದಂತೆ ಹಲವಾರು ಮುಖಂಡರು ಆನೆ ಹೊಸೂರು, ಚಿತ್ತಾಪೂರ, ಸ್ವ ಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷರು ಸದಸ್ಯರು, ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಪ್ರಾರ್ಥನ ಗೀತೆಯನ್ನು ತೋಟಮ್ಮ ಹಾಡಿದರು, ಕೊಲಯ ಮೇಲ್ವಿಚಾರಕಿ ಪವಿತ್ರ ಸ್ವಾಗತಿಸಿದರು ಮಹಮ್ಮದ್ ಅಲಿ ವಂದಿಸಿದರು.

Leave a Reply

Your email address will not be published. Required fields are marked *