ಸಂಗೀತ ಪ್ರತಿಯೊಬ್ಬರ ಮನಸ್ಸು ಸೆರೆ ಹಿಡಿಯುವುದರ ಜತೆಗೆ ಅದ್ಭುತ ಶಕ್ತಿ ಹೊಂದಿದೆ. ಸಂಗೀತದ ಗಾನಯಾನದಲ್ಲಿ ನೂರಾರು ಸಂಗೀತ ಪ್ರೇಮಿಗಳು ತೇಲಿದಂತಾಯಿತು. ಇಂತಹದೊAದು ಅವಕಾಶ ದೊರಕಿದ್ದು ಈ ಭಾಗದ ಸ್ವಾತಂತ್ರ್ಯ ಯೋಧ-ಹುತಾತ್ಮ ಅಪ್ಪಾರಾವ ಪಾಟೀಲ ಮಹಾಗಾಂವ್ ಜನ್ಮ ಶತಮಾನೋತ್ಸವ ನಿಮಿತ್ತ ಹುತಾತ್ಮ ಅಪ್ಪಾರಾವ ಪಾಟೀಲ ಮಹಾಗಾಂವ ಫೌಂಡೇಶನ್ ವತಿಯಿಂದ ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಅಂಗಳದಲ್ಲಿ ಶುಕ್ರವಾರ ಸುಮಾರು ಎರಡು ಗಂಟೆಗಳ ಕಾಲ ನಡೆದ ಕನ್ನಡ ಗೀತೆಗಳ ಗಾನ ಮಾಧುರ್ಯದಲ್ಲಿ ಪ್ರೇಕ್ಷಕರಿಗೆ ರಸದೌತಣ ಉಣಬಡಿಸಿದಂತಾಯಿತು.ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಸ್ವಾತಂತ್ರö್ಯ ಸಂಗ್ರಾಮ ಹಾಗೂ ನಿಜಾಮನ ವಿರುದ್ಧ ತೊಡೆತಟ್ಟಿ ಭಾರತೀಯ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ಅಪ್ಪಾರಾವ್ ಪಾಟೀಲ್ ಮುಂಚೂಣಿ ನಾಯಕರು.
ಅವರ ತ್ಯಾಗ, ಹೋರಾಟದ ಕಿಚ್ಚು ಈ ಭಾಗದ ಜನ ಶಾಶ್ವತವಾಗಿ ಸ್ಮರಿಸುತ್ತಾರೆ ಎಂದರು.ಫೌಂಡೇಷನ್ ಕಾರ್ಯದರ್ಶಿಗಳೂ ಆದ ವಿಜ್ಞಾನ ಡಾ.ಬಿ.ಎ.ಪಾಟೀಲ ಮಹಾಗಾಂವ ಮಾತನಾಡಿ, ಚಿಕ್ಕ ವಯಸ್ಸಿನಲ್ಲಿ ದೇಶದ ರಕ್ಷಣೆಗೆ ಹೋಗಿ ತನ್ನ ಅಮೂಲ್ಯವಾದ ಪ್ರಾಣವನ್ನೇ ಕೊಟ್ಟ ಧೀಮಂತ ವೀರ ಅಪ್ಪಾರಾವ ಪಾಟೀಲ ಮಹಾಗಾಂವ. ಇಂತಹ ದೇಶ ಸೇವಕನನ್ನು ಇಂದಿನ ಯುವಜನತೆ ಪ್ರೇರಣೆಯಾಗಿಸಿಕೊಳ್ಳಬೇಕೆಂದು ಹೇಳಿದರು.ಫೌಂಡೇಶನ್ ಅಧ್ಯಕ್ಷರೂ ಆದ ಸ್ವಾತಂತ್ರ್ಯ ಯೋಧ ದಯಾನಂದ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಸಂಗೀತ ಕಲಾವಿದ ಮಧುಸೂಧನ್ ಮಲ್ಲಾಬಾದಿ, ಜಿಲ್ಲಾ ಕಸಾಪದ ಧರ್ಮಣ್ಣ ಧನ್ನಿ, ಶರಣರಾಜ ಛಪ್ಪರಬಂದಿ, ಪರಮಾನಂದ ಸರಸಂಬಿ ಮಾತನಾಡಿದರು. ಧರ್ಮರಾಜ ಜವಳಿ, ಮಹಾಲಿಂಗಯ್ಯ ಸ್ವಾಮಿ, ಮಹಾಂತಗೌಡ ಪಾಟೀಲ ಹರವಾಳ, ಲಲಿತಾ ಪಾಟೀಲ್ ಇತರರಿದ್ದರು. ”
ಕಲ್ಯಾಣ ಕರ್ನಾಟಕ ಪ್ರದೇಶದ ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆ ಶಾಲಾ ಪಠ್ಯದಲ್ಲಿ ಸೇರ್ಪಡೆ ಮಾಡುವುದು ಇಂದಿನ ಜರೂರಿ.
ವಿಜಯಕುಮಾರ ಪಾಟೀಲ್ ತೇಗಲತಿಪ್ಪಿ, ಅಧ್ಯಕ್ಷ, ಕಸಾಪ ಕಲಬುರಗಿ.

