ಕಲ್ಯಾಣ ಕರ್ನಾಟಕದ ಬೀದರ್, ಕಲ್ಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ ಈ 7 ಜಿಲ್ಲೆಗಳಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯ ಫಲಿತಾಂಶ ಬಹಳಷ್ಟು ಕಡಿಮೆ ಮಟ್ಟದಲ್ಲಿದೆ. ಇದು ಆಘಾತಕಾರಿ ವಿಷಯವಾಗಿದೆ ಎಂದು ರಾಜ್ಯ ಕಾರ್ಯದರ್ಶಿ ಅಬೂಬಕರ್ ಸಿದ್ದಿಕಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಓಫ್ ಇಂಡಿಯಾದ ರಾಜ್ಯ ಘಟಕದ ವತಿಯಿಂದ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಡಿ.15 ರಿಂದ ಫೆ.15 ರವರೆಗೆ ಕಲ್ಯಾಣ ಕರ್ನಾಟಕ ಶೈಕ್ಷಣಿಕ ಬಿಕ್ಕಟ್ಟು ನಿವಾರಣೆಗೆ ಕರ್ನಾಟಕ ರಾಜ್ಯ ಘಟಕವು ಸೆಂಟರ್ ಫಾರ್ ಎಜುಕೇಷನಲ್ ರಿಸರ್ಚ್ ಮತ್ತು ಅನಾಲಿಸಿಸ್ ಸಹಯೋಗದೊಂದಿಗೆ ಎರಡು ತಿಂಗಳ ಕಾಲ ಅಭಿಯಾನ ಪ್ರಾರಂಭಿಸುತ್ತಿದ್ದು, ಈ ಅಭಿಯಾನಕ್ಕೆ ‘ಕಲಿಕೆಯೇ ಕಲ್ಯಾಣ’ ಎಂದು
ಹೆಸರಿಡಲಾಗಿದೆ.

ಈ 7 ಜಿಲ್ಲೆಗಳು ಭೌಗೋಳಿಕವಾಗಿ ಪ್ರಮುಖವಾದರೂ ಸಹ ಶಿಕ್ಷಣದಲ್ಲಿ ಮಾತ್ರ ರಾಜ್ಯದ ಇತರೆ ಜಿಲ್ಲೆಗಳ ಮತ್ತು ಪ್ರದೇಶಗಳಿಗಿಂತ ಅತ್ಯಂತ ತೀವ್ರವಾಗಿ ಹಿಂದುಳಿದಿದ್ದು, ಕಳೆದ ವರ್ಷದ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಗಳ ವಿದ್ಯಾರ್ಥಿಗಳ ಕಾರ್ಯಕ್ಷಮತೆ ಆತಂಕಕಾರಿ ಮಟ್ಟದಲ್ಲಿ ಫಲಿತಾಂಶ ಬಂದಿದೆ. ಈ ಭಾಗದಲ್ಲಿ ತೀವ್ರ ಶಿಕ್ಷಕರ ಕೊರತೆ, ಏಕ-ಶಿಕ್ಷಕ ಶಾಲೆಗಳ ಹೆಚ್ಚಿನ ಸಾಂದ್ರತೆ, ಕಲ್ಯಾಣ ಕರ್ನಾಟಕದ ಅನೇಕ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕಡಿಮೆ ದಾಖಲಾತಿ ಕಂಡು ಬಂದಿದೆ.

2025 ರಲ್ಲಿ ಸರ್ಕಾರದಿಂದ ನೇಮಕಗೊಂಡ ತಜ್ಞರ ಸಮಿತಿಯು ಕಲ್ಬುರ್ಗಿ ಜಿಲ್ಲೆಯಲ್ಲಿ ಮಾತ್ರ ಖಾಯಂ ಶಿಕ್ಷಕರು 21 ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇರುವುದು ಸೇರಿದಂತೆ ವಿವಿಧ ಅಂಶಗಳು ಅವರ ಗಮನಕ್ಕೆ ಬಂದಿದೆ. ಶಿಕ್ಷಣವು ಸಾಮಾಜಿಕ ಮತ್ತು ಆರ್ಥಿಕ ಉನ್ನತಿಗೆ ಅಡಿಪಾಯವಾಗಿದೆ. ಇಂತಹ ಬಿಕ್ಕಟ್ಟನ್ನು ತುರ್ತಾಗಿ ಪರಿಹರಿಸುವುದು ಅತ್ಯಗತ್ಯ.

ಕಲ್ಯಾಣ ಕರ್ನಾಟಕ ಪ್ರದೇಶಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ಖಚಿತಪಡಿಸಿಕೊಳ್ಳದೆ ದೀರ್ಘಕಾಲಿನ ಅಭಿವೃದ್ಧಿ ಬದಲಾವಣೆಗಳನ್ನು ಸಾಧಿಸಲು ಸಾಧ್ಯವಿಲ್ಲ. ಅಭಿಯಾನದ ಉದ್ದೇಶ ಸರ್ಕಾರಿ ಮತ್ತು ಮೌಲಾನಾ ಆಜಾದ್ ಶಾಲೆಗಳ ಮೇಲೆ ಗಮನಹರಿಸಿ ಸಮುದಾಯ ಕೇಂದ್ರಿತ ಕಾರ್ಯತಂತ್ರ ಹೊಂದಿದೆ. ತಕ್ಷಣ ಸುಸ್ಥಿರ ಬದಲಾವಣೆ ತರುವ ಗುರಿಯೊಂದಿಗೆ ಈ ಅಭಿಯಾನ ರೂಪಿಸಲಾಗಿದೆ ಎಂದರು.

“ಅಭಿಯಾನದ ಪ್ರಮುಖ ಉದ್ದೇಶಗಳು”

ಶಿಕ್ಷಣದ ಮಹತ್ವ, ವ್ಯಕ್ತಿ ಹಾಗೂ ಸಮುದಾಯಗಳಿಗೆ ಅರಿವು ಮೂಡಿಸುವುದು, ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳ ಅನ್ನುತ್ತೀರ್ಣದ ಸಂಖ್ಯೆ ಕಡಿಮೆ ಮಾಡುವುದು, ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಸಮಸ್ಯೆಗಳನ್ನು  ಮುಖ್ಯವಾಹಿನಿ ಮಾಧ್ಯಮ ಮತ್ತು ರಾಜಕೀಯ ಚರ್ಚೆಗೆ ತರುವುದು, ಯುವಕರ ಉತ್ತಮ ಭವಿಷ್ಯಕ್ಕಾಗಿ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತದೆ
ಎಂದು (ಎಸ್.ಐ.ಓ) ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಹೊಂದಿದೆ ಎಂದರು.

ಈ ವೇಳೆ: ಜಿಲ್ಲಾ ಅಧ್ಯಕ್ಷ ಇಮ್ತಿಯಾಜ್, ತಾಲೂಕು ಅಧ್ಯಕ್ಷ ಅಬ್ದುಲ್ ಹುಸೇನ್, ಉಪ ಕಾರ್ಯದರ್ಶಿ ಅಮೀರ್ ಸೋಯಿಲ್, ಸದಸ್ಯರಾದ ನೂಮಾನ್, ಸಮೀರ್ ಅಲಿ, ಸಮಿಹುದ್ದೀನ್, ಎಯಾಜ್, ಸೇರಿದಂತೆ ಅನೇಕರಿದ್ದರು.

Leave a Reply

Your email address will not be published. Required fields are marked *