ಮಾನ್ವಿ : ಪಟ್ಟಣದ ಪಂಪಾ ಹೌಸಿಂಗ್ ಕಾಲೋನಿಯಲ್ಲಿನ ಶ್ರೀ ಈಶ್ವರ ದೇವಸ್ಥಾನದ 23ನೇ ವಾರ್ಷಿಕೋತ್ಸವ ಹಾಗೂ ಕಾರ್ತಿಕ ಮಾಸದ ಸಹಸ್ರ ದೀಪೋತ್ಸವ ಕಾರ್ಯಕ್ರಮವನ್ನು ಚೀಕಲಪರ್ವಿ ಶ್ರೀ ರುದ್ರಮುನೀಶ್ವರ ಮಠದ ಶ್ರೀ ಸದಾಶಿವ ಸ್ವಾಮಿಗಳು ದೀಪವನ್ನು ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ ನಮ್ಮ ಸುತ್ತಮುತ್ತಲಿನ ಪ್ರಕೃತಿ ಪಂಚಭೂತಗಳಿಂದ ಸೃಷ್ಟಿಯಾಗಿದ್ದು ನಮ್ಮ ದೇಹವು ಪಂಚ ತತ್ವಗಳಿಂದ ನಿರ್ಮಾಣವಾಗಿದೆ ನಾವು ಪ್ರಕೃತಿಯನ್ನು ಹಾಗೂ ದುಶ್ಚಟಗಳಿಂದ ದೇಹವು ಕೂಡ ಮಲಿನವಾಗುತ್ತದೆ ಅದ್ದರೆ ಪಂಚಭೂತಗಳಲ್ಲಿ ಒಂದಾಗಿರುವ ಅಗ್ನಿಯನ್ನು ಯಾರು ಕೂಡ ಮಲಿನ ಮಾಡುವುದಕ್ಕೆ ಬರುವುದಿಲ್ಲ ಅಗ್ನಿ ಅತ್ಯಂತ ಪವಿತ್ರವಾಗಿರುತ್ತದೆ ಕಾರ್ತಿಕ ಮಾಸದಲ್ಲಿ ದೇವಸ್ಥಾನದ ಆವರಣದಲ್ಲಿ ಪವಿತ್ರವಾದ ದೀಪಗಳನ್ನು ಬೆಳಗಿಸುವುದರ ಮೂಲಕ ನಮ್ಮಲಿನ ಅತ್ಮ ಚೈತನ್ಯವನ್ನು ಬೆಳಗಿಸಿಕೊಳ್ಳಬೇಕು ಪ್ರತಿಯೊಬ್ಬ ಪಾಲಕರು ಕೂಡ ತಮ್ಮ ಮಕ್ಕಳಿಗೆ ನಮ್ಮ ಹಿಂದೂ ಧರ್ಮದ ಪಂಚಾಂಗಗಳ ಬಗ್ಗೆ ಮಾಸಗಳ ಬಗ್ಗೆ ನಕ್ಷತ್ರಗಳ ಬಗ್ಗೆ ,ನಮ್ಮ ಸನಾತನ ಪರಂಪರೆಯ ಬಗ್ಗೆ ಹಿಂದೂಧರ್ಮದ ಮಹಾತ್ವದ ಬಗ್ಗೆ ತಿಳಿಸಬೇಕಾಗಿದೆ ಎಂದು ತಿಳಿಸಿದರು.
ಉಪನ್ಯಾಸಕರಾದ ಬಸವರಾಜ ತಡಕಲ್ ಮಸ್ಕಿ ರವರು ಕಾರ್ತಿಕ ಮಾಸದ ಕುರಿತು ಉಪನ್ಯಾಸ ನೀಡಿದರು.
ಶ್ರೀ ಈಶ್ವರ ದೇವಸ್ಥಾನದ 23ನೇ ವಾರ್ಷಿಕೋತ್ಸವ ಹಾಗೂ ಕಾರ್ತಿಕ ಮಾಸದ ಅಂಗವಾಗಿ ಬೆಳಿಗ್ಗೆ 5ಕ್ಕೆ ಶ್ರೀ ಈಶ್ವರ ದೇವರ ಮೂರ್ತಿಗೆ ದೇವಸ್ಥಾನದ ಆರ್ಚಕರಾದ ಆಂಜನೇಯ್ಯಸ್ವಾಮಿಗಳವರ ನೇತೃತ್ವದಲ್ಲಿ ರುದ್ರಾಭಿಷೇಕ ಮತ್ತು ಸಹಸ್ರ ಬಿಲ್ವಾರ್ಚನೆ ಹಾಗೂ ರುದ್ರ ಹೋಮ ಹಾಗೂ ಪೂರ್ಣಹುತಿ ನಡೆಯಿತು.
ಸಂಜೆ ದೇವಸ್ಥಾನದ ಆವರಣದಲ್ಲಿ ಭಕ್ತರು ಸಹಸ್ರ ದೀಪೋತ್ಸವ ಆಚರಿಸಿದರು .
ವೇದಿಕೆಯಲ್ಲಿ ಪಟ್ಟಣದ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು. ವಿವಿಧ ನಾಟ್ಯ ಮಂಡಳಿಗಳವರಿಂದ ಭರತನಾಟ್ಯ ನೃತ್ಯ ಪ್ರದರ್ಶನ ನಡೆಯಿತು,
ಶ್ರೀ ಈಶ್ವರ ದೇವಸ್ಥಾನ ಮಂಡಳಿಯ ಗೌರವ ಅಧ್ಯಕ್ಷರಾದ ಶ್ರೀಧರ ಸ್ವಾಮಿ ಕೊಟ್ನೆಕಲ್,ಅಧ್ಯಕ್ಷರಾದ ಬಸವರಾಜಪ್ಪಗೌಡ ಚಿಮ್ಲಪುರ್, ತಾ. ವೀರಶೈವ .ಲಿಂಗಾಯತ ಸಮಾಜದ ಅಧ್ಯಕ್ಷರಾದ ಹರಿಹಾರ ಪಾಟೀಲ್, ಅ.ಭಾ.ವೀ.ಲಿಂ. ಮಹಾಸಭಾ ತಾ.ಅಧ್ಯಕ್ಷರಾದ ಅರುಣ್ ಚಂದಾ, ಹಿರಿಯ ವಕೀಲರಾದ ಎ,ಬಿ.ಉಪಳಮಠ, ಜೆ.ಡಿ.ಎಸ್. ರಾಜ್ಯ ಯುವಘಟಕದ ಉಪಾಧ್ಯಕ್ಷರಾದ ರಾಜಾ ರಾಮಚಂದ್ರನಾಯಕ, ರಾಜಾ ಸುಭಾಶ್ಚಂದ್ರನಾಯಕ, ರೇವಣಸಿದ್ದಯ್ಯಸ್ವಾಮಿ, ಗುಮ್ಮ ಬಸವರಾಜ,ಮೌನೇಶಗೌಡ,ಹೆಚ್,ಶ್ರೀಕಾಂತಗೂಳಿ, ಗಣೇಕಲ್ ಮಲ್ಲನಗೌಡ,ತಿಮ್ಮರೆಡ್ಡಿ ಭೋಗವಾತಿ, ವೀರನಗೌಡ ವಕೀಲರು.ಅದಮ್ ಬೇಗ್,ಡಿ,ಬಸನಗೌಡ, ಹೋಯ್ಸಳ ಸ್ವಾಮಿ,ಜಗದೀಶ ಓತ್ತೂರ್,ಮಲ್ಲಭದ್ರಗೌಡ ಸೇರಿದಂತೆ ಇನ್ನಿತರರು ಇದ್ದರು.
ಮಾನ್ವಿ : ಪಟ್ಟಣದ ಪಂಪಾ ಹೌಸಿಂಗ್ ಕಾಲೋನಿಯಲ್ಲಿನ ಶ್ರೀ ಈಶ್ವರ ದೇವಸ್ಥಾನದ 23ನೇ ವಾರ್ಷಿಕೋತ್ಸವ ಹಾಗೂ ಕಾರ್ತಿಕ ಮಾಸದ ಸಹಸ್ರ ದೀಪೋತ್ಸವ ಕಾರ್ಯಕ್ರಮವನ್ನು ಚೀಕಲಪರ್ವಿ ಶ್ರೀ ರುದ್ರಮುನೀಶ್ವರ ಮಠದ ಶ್ರೀ ಸದಾಶಿವ ಸ್ವಾಮಿಗಳು ದೀಪವನ್ನು ಬೆಳಗಿಸುವ ಮೂಲಕ ಉದ್ಘಾಟಿಸಿದರು.

