ಮಸ್ಕಿ: ತಾಲೂಕಿನ ರಂಗಾಪೂರು ಗ್ರಾಮದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಎಸ್‌ಡಿಎಂಸಿಯನ್ನು ರಚಿಸಲಾಗಿದೆ ಎಂದು ಶಾಲೆಯ ಮುಖ್ಯ ಶಿಕ್ಷಕ ಗಂಗನಗೌಡ ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿಯಾದ ಬಸವಲಿಂಗಪ್ಪ ನೂತನ ಎಸ್‌ಡಿಎಂಸಿ ಅಧ್ಯಕ್ಷರನ್ನಾಗಿ ತಿಮ್ಮಣ್ಣ ನಾಯಕ, ಉಪಾಧ್ಯಕ್ಷರನ್ನಾಗಿ ಗೀತಾ ಶರಣಪ್ಪ ಅವರನ್ನು ಆಯ್ಕೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಗೋವಿಂದಪ್ಪ ನಾಯಕ, ರಾಮಣ್ಣ, ಬಸವರಾಜ, ತಿಮ್ಮಯ್ಯ, ಕುಭೇರಪ್ಪ ಸೇರಿದಂತೆ ಶಾಲೆಯ ಸಹ ಶಿಕ್ಷಕರಿದ್ದರು.
ಮಸ್ಕಿ ತಾಲೂಕಿನ ರಂಗಾಪೂರು ಗ್ರಾಮದ ಸರ್ಕಾರಿ ಶಾಲೆಯ ನೂತನ ಎಸ್‌ಡಿಎಂಸಿ ರಚಿಸಲಾಗಿದೆ.

