ಅರಕೇರಾ
ರಾಷ್ಟ್ರವಾದಿ ಶರಣ ಹರ್ಡೇಕರ ಮಂಜಪ್ಪನವರು ಸಮ ಸಮಾಜದ ಕನಸ್ಸು ಕಂಡ ಧೀಮಂತ,ಮಾನವತಾವಾದಿ ಕಷ್ಟದಲ್ಲೂ ಹಸಿವಿನಲ್ಲು ಊಟವಿಲ್ಲದೆಯೊ ರಾಷ್ಟ್ರೀಯತೆಯನ್ನೆ ಉಸಿರಾರಾಗಿಸಿಕೊಂಡು ಬದುಕಿದವರು.ಮೊಟ್ಟಮೊದಲ ಸಾರ್ವಜನಿಕವಾಗಿ ಬಸವ ಜಯಂತಿ ಆಚರಿಸಿದ ಸ್ತ್ರೀ ಸಮಾಜದ ಜಾಗೃತಿಗಾಗಿ ಅಕ್ಕಮಾದೇವಿ ಜಯಂತಿಯನ್ನು ಆರಂಭಿಸಿದ ಮಹಾತ್ಮರು ಶ್ರೇಯಸ್ಸು ಹರ್ಡೇಕರ್ ಮಂಜಪ್ಪನವರಿಗೆ ಸಲ್ಲುತ್ತದೆ ಎಂದು ಲೋಕೇಶ ಎನ್ ಮಾನ್ವಿ ಹೇಳಿದರು
ಅವರು ಅರಕೇರಾ ತಾಲ್ಲೂಕಿನ ಜಾಗಿರಜಾಡಲದಿನ್ನಿ ಗ್ರಾಮದಲ್ಲಿ ನೀಲಾಂಭಿಕ ಬಸವ ಯೋಗಾಶ್ರಮ ಬಡಿಗೇರ ಮರ್ಚಗುಡ್ಡದಲ್ಲಿ ಹಮ್ಮಿಕೊಂಡಿದ್ದ 82 ನೇ ಬಸವ ತತ್ವ ಚಿಂತನ ಗೋಷ್ಟಿಯಲ್ಲಿ ಮಾತನಾಡಿ ಹರ್ಡೇಕರ ಮಂಜಪ್ಪನವರು ಬಸವಣ್ಣನವರ ದಾಸಿಪುತ್ರನಾಗಲಿ,ವೇಶಾಪುತ್ರನಾಗಲಿ ಎಂಬ ವಚನದಿಂದ ಪ್ರಭಾವಿತರಾಗಿ ಲಿಂಗಧೀಕ್ಷೆಯನ್ನು ಪಡೆದುಕೊಂಡು ಜೀವನದ್ದಕ್ಕೂ ಬಸವತತ್ವ ಪ್ರಸಾರ ಮಾಡಿದ ಮಹಾನುಭಾವರು ಎಂದು ಹೇಳಿದರು.
ಮೊಟ್ಟಮೊದಲಿಗೆ ಬಸವದಳ ಸ್ಥಾಪನೆ ಮಾಡಿದ ಮಂಜಪ್ಪನವರು,ಮಹಾತ್ಮಗಾಂಧೀಜಿಯವರಿಗೆ ಬಸವಣ್ಣನವರ ಜೀವನ ಸಂದೇಶ ಪರಿಚಯಿಸಿದರು.ಸುಮಾರು 88 ಪುಸ್ತಕಗಳನ್ನು ಬರೆದಿದ್ದ ಅವರು ತಾವೇ ಹಳ್ಳಿಗಳಲ್ಲಿ ವಿತರಿಸುವ ಮೂಲಕ ಬಸವಪ್ರಜ್ಞೆ ಮತ್ತು ರಾಷ್ಟ್ರಭಕ್ತಿ ಬೆಳೆಸುವ ಮಹಾ ಕಾರ್ಯವನ್ನು ಮಾಡಿದ್ದಾರೆಂದರು.ಸÀಮಾಜಸೇವೆಕ ಮತ್ತು ಸಾಹಿತ್ಯಿ ಚಿಂತಕ ಸ್ವಾತಂತ್ರ್ಯ ಹೋರಾಟಗಾರ,ಪತ್ರಕರ್ತ ಕರ್ನಾಟಕ ಗಾಂಧಿ ಎಂದು ಹೆಸರಿಸಲಾಗುತ್ತದೆ. ಅವರು ತಮ್ಮ ಜೀವನವನ್ನು ಸಮಾಜ ಸುಧಾರಣೆ,ಸ್ವಾತಂತ್ರ ಚಳವಳಿ ಮತ್ತು ಗಾಂಧಿವಾದ ತತ್ವಗಳ ಪ್ರಸಾರಕ್ಕೆ ಸಮರ್ಪಿಸಿದರು.
ಶ್ರೀ ವೀರಭದ್ರಸ್ವಾಮಿಗಳು ನೀಲಾಂಬಿಕ ಬಸವ ಯೋಗ ಆಶ್ರಮ ಅಧ್ಯಕ್ಷರುಮಾತನಾಡಿ ಶತ ಶತಮಾನಗಳಿಂದ ಜ್ಞಾನದ ಬೆಳಕು ಚಲ್ಲಿದ ಕಯಕಯೋಗಿ ಬಸವಣ್ಣ ಕಾಯಕತ ಮಹತ್ವವನ್ನು ವಿಶ್ವಕ್ಕೆ ಸಾರಿದರು ಮತ್ತು 12 ನೇ ಶತಮಾನದ ಪ್ರಮುಖ ವಚನಕಾರರು ಬಸವಣ್ಣ,ಅಲ್ಲಮಪ್ರಭು, ಅಕ್ಕಮಹಾದೇವಿ.ಸಿದ್ದರಾಮೇಶ್ವರ,ಮಡಿವಾಲಮಚಯ್ಯ.ಅಂಬಿಗರಚೌಡಯ್ಯ, ಚೆನ್ನಬಸವಣ್ಣ,ಗಂಗಾಂಬಿಕೆ ಮುಂತಾದವರು ಇವರ ವಚನಗಳ ಮೂಲಕ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಣಾಗಾಗಿ ಶ್ರಮಿಸಿ ಕಾಂiÀiಕವೇ ಕೈಲಾಸ,ಜಾತಿ ಇಲ್ಲದ ಭಕ್ತಿ ಮುಂತಾದ ತತ್ವಗಳನ್ನು ಸಾರಿದರು.
ಮುಂದಿನ ದಿನಗಳಲ್ಲಿದುಶ್ಚಟಗಳಾದ ಮದ್ಯಪಾನ, ಗುಟ್ಕಾ, ಬೀಡಿ, ಸೀಗರೇಟ್ ತಂಬಾಕ ಚೀಟುಗಳು, ದಾಸರಾಗಿರುವ ಜನರು ಜಾಗೃತಿ ಮೂಡಿಸಲು ಪತ್ರಿ ಮನೆ ಮನೆಗೆ ಹೋಗಿ ಸಂಚರಿಸಿ ಸ್ವಾಮಿಗಳು ಜೋಳಿಗೆ ಒಡ್ಡಿ ದುಶ್ಚಟಗಳನ್ನು ಬೀಡಿಸಲು ಜೋಳಿಗೆ ಅಭಿಯಾನ ಪ್ರಾರಂಭಿಸುವುದಾಗಿ ಸ್ವಾಮಿಗಳು ಹೇಳಿದರು.
ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಉಪಾಧ್ಯಕ್ಷರಾದ ಸೂಗೂರೇಶ್ವರ ಎಸ್ ಗುಡಿ, ಲೋಕೇಶ ಮಾನ್ವಿ ಇವರುಗಳಿಗೆ ನೀಲಾಂಭಿಕ ಬಸವ ಯೋಗಾಶ್ರಮದವತಿಯಿಂದ ಸನ್ಮಾನಸಿಗೌರವಿಸಲಾಯಿತು.ಸಂದರ್ಭದಲ್ಲಿ. ಅಮರೇಶ ಗವಿಗಟ್ಟಿ ಬೆಟ್ಟಪ್ಪ ಕಸ್ತೂರಿ ಅತ್ತನೂರು, ಚನ್ನಪ್ಪ ಅರಸುರ ಗಲಗ,ಮಸ್ತಾನಸಾಬ ಸಿರವಾರ,ಅಮರಪ್ಪಶಾಖಾಪೂರು ಹನುಮಂತಪ್ಪ ಮಾಸ್ಟರ್ ವಾಲೇಕರ್ ಜಾಗಿರಜಾಡಲದಿನ್ನಿ, ನಾಗಯ್ಯಸ್ವಾಮಿ ಚಿಕ್ಕಮಠ,ಅಮರೇಶಬಳೆಗಾರ, ಶಿವಕುಮಾರ ಎಸ್ ಗುಡಿ,ದಾಸೂಹದ ವ್ಯವಸ್ಥೆ ಮೌನೇಶ ಬುಡಿಗಿ ಸೇರಿದಂತೆ ಸುತ್ತಮುತ್ತಲ್ಲಿನ ಶರಣ ಶರನಿಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *