ರಾಯಚೂರು : ನಗರದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ದೇಶಿ ಕ್ರೀಡೆಗಳು ನಡೆದವು.
ಸ್ಪರ್ಧೆಗಳಿಗೆ ಅಪರ ಜಿಲ್ಲಾಧಿಕಾರಿ ಶಿವಾನಂದ ಅವರು ಚಾಲನೆ ನೀಡಿದರು. ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಯುವಜನರು ಲಗೋರಿ ಮತ್ತು ಚಿನ್ನಿದಾಂಡು ಸ್ಪರ್ಧೆಗಳಲ್ಲಿ ಸುಮಾರು 804 ಸ್ಪರ್ಧಿಗಳು ತಲಾ 12 ಜನರು ಇರುವಂತೆ ಒಟ್ಟು 67 ತಂಡಗಳಾಗಿ ಭಾಗವಹಿಸಿ ಸ್ಪರ್ಧೆಯ ಮೆರಗು ಹೆಚ್ಚಿಸಿದರು.
ಲಗೋರಿ ಸ್ಪರ್ಧೆಗೆ ಪುರುಷರ 17 ತಂಡಗಳು ಮತ್ತು ಮಹಿಳೆಯರ 16 ತಂಡಗಳು ಹಾಗೂ ಚಿನ್ನಿದಾಂಡು ಸ್ಪರ್ಧೆಗೆ ಪುರುಷರ 18 ತಂಡಗಳು ಹಾಗೂ ಮಹಿಳೆಯರ 16 ತಂಡಗಳು ಭಾಗಿಯಾಗಿದ್ದವು.
ಈ ಸ್ಪರ್ಧೆಗಳ ಮೇಲುಸ್ತುವಾರಿ ವಹಿಸಿದ್ಧ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ವೀರೇಶ ನಾಯಕ, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿ ರಂಗಸ್ವಾಮಿ ಸೇರಿದಂತೆ ಅನೇಕರು ಇದ್ದರು.

