ರಾಯಚೂರು: ಭಗವಾನ್ ಶ್ರೀ ಸತ್ಯ ಸಾಯಿಬಾಬಾ ಅವರ ಶತಮಾನೋತ್ಸವದಂಗವಾಗಿ ದಕ್ಷಿಣ ಮಧ್ಯ ರೈಲ್ವೆಯ ಬೆಂಗಳೂರು ವಲಯದಿಂದ ವಿಶೇಷ ಎಕ್ಸ್ ಪ್ರೆಸ್ ಓಡಿಸಲಾಗುತ್ತಿದೆ ಎಂದು ರೈಲ್ವೆ ಸಲಹಾ ಸಮಿತಿ ಮಾಜಿ ಸದಸ್ಯ ಡಾ.ಬಾಬುರಾವ್ ಅವರು ತಿಳಿಸಿದ್ದಾರೆ.
ಸಿಕಂದರ್ ಬಾದ್ ರೈಲ್ವೆ ನಿಲ್ದಾಣದಿಂದ ನ.22 ರಂದು ಶನಿವಾರ ಸಂಜೆ 6.05 ನಿಮಿಷಕ್ಕೆ ಹೊರಡುವ 07413 ನಂಬರಿನ ರೈಲು ಭಾನುವಾರ ಬೆಳಿಗ್ಗೆ 10.45 ಕ್ಕೆ ಬೆಂಗಳೂರು ಕಂಟೋನ್ಮೆಂಟ್ ತಲುಪಲಿದೆ. ಅದೇ ರೀತಿಯಾಗಿ ಬೆಂಗಳೂರು ಕಂಟೋನ್ಮೆಂಟ್ ನಿಂದ ನ.24 ರಂದು ಸೋಮವಾರ ಸಂಜೆ 5ಗಂಟೆಗೆ ಹೊರಡುವ 07414 ಬೆಂಗಳೂರು ಕಂಟೋನ್ಮೆಂಟ್ ನಿಂದ ಹೊರಟು ಮಂಗಳವಾರ 7.45 ಕ್ಕೆ ಸಿಕಂದರ್ ಬಾದ್ ತಲುಪಲಿದೆ. ಈ ರೈಲು ಲಿಂಗಂಪಲ್ಲಿ, ವಿಕರಬಾದ್ ಜಂಕ್ಷನ್, ತಂದೂರು, ನವಂದಗಿ, ಸೇರಂ, ಯಾದಗಿರಿ, ಕೃಷ್ಣ, ರಾಯಚೂರು ಜಂಕ್ಷನ್, ಮಂತ್ರಾಲಯಂ ರೋಡ್, ಆದೋನಿ, ಗುಂತಕಲ್ ಜಂಕ್ಷನ್, ಅನಂತಪುರ, ಧರ್ಮಾವರಂ ಜಂಕ್ಷನ್, ಮತ್ತು ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ ನಲ್ಲಿ ಎರಡು ಮಾರ್ಗಗಳ ರೈಲುಗಳು ನಿಲುಗಡೆಯಾಗಲಿವೆ. ಈ ರೈಲು 24 ಕೋಚ್ ಗಳನ್ನು ಹೊಂದಿರುತ್ತದೆ.
ಸತ್ಯ ಸಾಯಿಬಾಬಾ ಅವರ ಜನ್ಮ ಶತಾಬ್ದಿ ಅಂಗವಾಗಿ ಉಂಟಾಗುವ ಜನದಟ್ಟಣೆ ನಿಬಾಯಿಸುವ ಹಿನ್ನಲೆಯಲ್ಲಿ ಈ ವಿಶೇಷ ಎಕ್ಸ್ ಪ್ರೆಸ್ ರೈಲನ್ನು ಓಡಿಸಲಾಗುತ್ತದೆ ಎಂದು ರೈಲ್ವೆ ಇಲಾಖೆಯ ಪ್ರಕಟಣೆ ತಿಳಿಸಿದ್ದು, ಹೆಚ್ಚಿನ ಮಾಹಿತಿಗಾಗಿ ಪ್ರಯಾಣಿಕರು www.enquiry.indianrail.gov.in ಸಂಪರ್ಕಿಸಬಹುದೆಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
