ಮಾನ್ವಿ : ಮಾನಸಿಕವಾಗಿ ಕುಗ್ಗವುದು ಇತ್ತೀಚಿನ ಯುವಕರ ಮನೋಧೋರಣೆಯಾಗಿದೆ ಅನಾವಶ್ಯಕ ವಿಷಯಗಳು ಸರಿಯಾದ ಮಾರ್ಗದರ್ಶನ ಇಲ್ಲದ್ದು, ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲತೆ ಯುವಕರಲ್ಲಿ ದಾರಿ ತಪ್ಪುವುದು ಕಂಡುಬರುತ್ತಿದೆ ಇದಕ್ಕೆ ಪರಿಹಾರ ಮಾರ್ಗದರ್ಶನ ಇದನ್ನು ಬುದ್ದಿಜೀವಿಗಳಾದ ನಾವು ನೀವುಗಳು ಗಮನಹರಸಿ ತಿಳಿದುಕೊಂಡು ತಿಳಿಹೇಳುವುದು ಅವಶ್ಯಕವಾಗಿದೆ ಇಲ್ಲವಾದಲ್ಲಿ ಯುವಕರು ಚಿಂತಿಸಿ ಹೆಣಗಳಾಗುತ್ತಿದ್ದಾರೆ ಚಿತೆಗಿಂತ ಚಿಂತೆಗೆ ಬಲಿಯಾಗುತ್ತಿದ್ದಾರೆ ಎಂದು ಸಂಪನ್ಮೂಲ ವ್ಯಕ್ತಿ ಮಹಿಬೂಬ್ ಮದ್ಲಾಪುರ ವಿಶೇಷ ಉಪನ್ಯಾಸದಲ್ಲಿ ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮತ್ತು ವೆಂಕಟೇಶ್ವರ ಪದವಿ ಮಹಾವಿದ್ಯಾಲಯ ಮಾನವಿ ಸಂಯೋಜನೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ದುಶ್ಚಟ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯಲ್ಲಿ ಆಂಜನೇಯ ನಸಲಾಪುರ ಮಾತಡನಾಡುತ್ತಾ “ಯುವಕರು ಫ್ಯಾಶನ್, ಚಟಗಳಿಗೆ, ಆಡಂಬರ ತೋರ್ಪಡಿಗೆ ಬಲಿಯಾಗಿ ಜೀವನ ಹಾಳುಮಾಡಿಕೊಳ್ಳದಿರಿ ಹುಟ್ಟಿದ್ದೇ ಸಾಧಿಸಲು ಕುಟುಂಬಕ್ಕೆ ಹೊರೆಯಾಗುವುದಕ್ಕಿಂತ ಆಸರೆಯಾಗುವ ಹಾಗೆ ಬದುಕಿ ಗುಟ್ಕಾ, ತಂಬಾಕು, ಮದ್ಯಪಾನ, ಧೂಮಪಾನ ಆರೋಗ್ಯ ಅಷ್ಟೆ ಕೆಡಿಸುವುದಲ್ಲ ಇವು ಮಾನಸಿಕ, ದೈಹಿಕ, ಆರ್ಥಿಕವಾಗಿ ಕುಗ್ಗಿಸುತ್ತವೆ ಎಂದರು.
ವೇಧಿಕೆಯಲ್ಲಿ ಧರ್ಮಸ್ಥಳದ ಸುಪ್ರಾವೈಸರ್ ರವಿಚಂದ್ರ ಪ್ರಾಚಾರ್ಯ ಶಂಕ್ರಪ್ಪ ಅಂಗಡಿ, ಉಪನ್ಯಾಸಕಿ ಆಫೀಯಾ ಅಂಜುಮ್, ಶೈಲಜಾ, ಮಹೆಬೂಬ್ ಮಾನ್ವಿ ಇದ್ದರು.
ನಿರೂಪಣೆ ವರದರಾಜ್ ಸ್ವಾಗತ ನರೇಶ ಪ್ರಾರ್ಥನೆ ರಾಜೇಶ್ವರಿ ಸ್ನೇಹಾ ಮತ್ತು ವಿದ್ಯಾರ್ಥಿಗಳು ಇದ್ದರು.
ಮಾನ್ವಿ ಪಟ್ಟಣದ ವೆಂಕಟೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಮಹಿಬೂಬ್ ಮದ್ಲಾಪುರ ಮಾತನಾಡಿದರು.


