ಸಿರವಾರ.ನ.20-ಕರ್ನಾಟಕ ರಾಜ್ಯ ರೈತ ಸಂಘದ ಗ್ರಾಮ ಘಟಕವನ್ನು ತಾಲೂಕಿನ ಹುಣಿಬೇಡ ಗ್ರಾಮದಲ್ಲಿ ಬುಧವಾರ ಉದ್ಘಾಟಿಸಲಾಯಿತು. ಸಂಘಟನೆಯ ರಾಜ್ಯ ಘಟಕದ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ ನೇತೃತ್ವದಲ್ಲಿ ಹುಣಿಬೇಡ ಗ್ರಾಮ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು ರೈತರ ಏಳಿಗೆಗಾಗಿ, ರೈತರ ಪರವಾಗಿ ಕೆಲಸ ಮಾಡುವ ಸದುದ್ದೇಶದಿಂದ
ಸಂಘಟನೆಯನ್ನು ಸ್ಥಾಪಿಸಲಾಗಿದೆ. ರೈತ ಪರವಾದ ಹೋರಾಟಗಳಲ್ಲಿ, ಸಂಘಟನೆಯಲ್ಲಿ ಕಾರ್ಯಕರ್ತರು ಸಕ್ರಿಯವಾಗಿ ಕಾರ್ಯನಿರ್ವಹಿಸುವ ಮೂಲಕ ಸಂಘಟನೆಯ ಹೆಸರನ್ನು, ಗೌರವವನ್ನು ಕಾಪಾಡಬೇಕು ಎಂದು ಹೇಳಿದರು.ಸಂಘಟನೆಯ ರಾಜ್ಯ ಉಪಾಧ್ಯಕ್ಷ ಬಸನಗೌಡ ಬಲ್ಲಟಗಿ, ರಾಜ್ಯ ಕಾರ್ಯದರ್ಶಿ ಸೂಗೂರಯ್ಯ ಆರ್ ಎಸ್ ಮಠ,ವಿಭಾಗೀಯ ಕಾರ್ಯದರ್ಶಿ ಯಂಕಪ್ಪ ಕಾರಬಾರಿ, ಜಿಲ್ಲಾಧ್ಯಕ್ಷ
ಪ್ರಭಾಕರ ಪಾಟೀಲ, ಜಿಲ್ಲಾ ಕಾರ್ಯಾಧ್ಯಕ್ಷ ಬಸವರಾಜ ಮಾಲಿ ಪಾಟೀಲ, ತಾಲೂಕು ಘಟಕದ ಅಧ್ಯಕ್ಷ ಎಚ್ ಶಂಕರಪ್ಪಗೌಡ ದೇವತಗಲ್ ಸೇರಿದಂತೆ ಬಸವರಾಜ ನವಲಕಲ್,ಗ್ರಾಮ ಘಟಕದ ಗೌರವಾಧ್ಯಕ್ಷಗಟ್ಟೆನಾಗಪ್ಪ, ಅಧ್ಯಕ್ಷ ಹನುಮೇಶ, ಕಾರ್ಯಾಧ್ಯಕ್ಷ ಜೆ ನಾಗರಾಜ.ಉಪಾಧ್ಯಕ್ಷ ದೇವಪ್ಪ ಪ್ರ.ಕಾರ್ಯದರ್ಶಿ ಮಹಾದೇವ, ನಿಂಗಪ್ಪ,ಹನುಮಂತ,ಸೇರಿದಂತೆ ಸದಸ್ಯರು ಇದ್ದರು.

Leave a Reply

Your email address will not be published. Required fields are marked *