ಸಿಂಧನೂರು:ನ.20-ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆ ವತಿಯಿಂದ ನ.22 ( ಶನಿವಾರ) ರಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಹಾಗೂ ಸರಿಗಮಪ ಖ್ಯಾತಿಯ ಬಾಳು ಬೆಳಗುಂದಿ ಶಿವಾನಿ,ರಮೇಶ ಲಮಾಣಿ ಹಲವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ಜರುಗಲಿದ್ದು ಕನ್ನಡ ಅಭಿಮಾನಿಗಳು, ಸಾರ್ವಜನಿಕರುಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿ ಎಂದು ಸಂಘಟನೆ ರಾಜ್ಯ ಕಾರ್ಯಾಧ್ಯಕ್ಷ ಉಮೇಶಗೌಡ ಅರಳಹಳ್ಳಿ ಮನವಿ ಮಾಡಿದರು. ಗುರುವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿ ಗೋಷ್ಟಿ ನಡೆಸಿ ಮಾತನಾಡಿದರು.ನ.22 ಶನಿವಾರಬೆಳಿಗ್ಗೆ
10 ಗಂಟೆಗೆ ತಹಶಿಲ್ದಾರ ಕಛೇರಿಯಿಂದ ಪ್ರಾರಂಭವಾಗುವಮೆರವಣಿಗೆಗೆ ಸಂಘಟನೆ ರಾಜ್ಯ ಅಧ್ಯಕ್ಷ ಅರುಣ್ ಕುಮಾರ್ ಚಾಲನೆ ನೀಡುವರು ಮತ್ತು ಸ್ಥಳೀಯ ಹಾಲಿ ಮಾಜಿ ಜನಪ್ರತಿನಿಧಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಮೆರವಣಿಗೆ ಪ್ರಾರಂಭವಾಗಿ ಹಿಂದು ಮಹಾಗಣಪತಿ ಪ್ರತಿಷ್ಠಾನ ಆದವೇದಿಕೆ ಸಿದ್ದಗೊಂಡ ಜಾಗದವರೆಗೆ ಕನ್ನಡ
ತಿಕ ಭವನ
ತಾಯಿ ಭುವನೇಶ್ವರಿ ಭಾವಚಿತ್ರ ಮೆರವಣಿಗೆ, ಕಲಾ ತಂಡಗಳು ಭಾಗವಹಿಸಲಿವೆ ಸಂಜೆಗೆ ಸಂಗೀತ ರಸಮಂಜರಿ ಕಾರ್ಯಕ್ರಮಜರುಗಲಿದ್ದು ಕಾರ್ಯಕ್ರಮಕ್ಕೆ ಬಂದಂತಹ ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಮತ್ತು ಎಲ್ಲಾ ಕನ್ನಡ ಪರ ಸಂಘಟನೆ ಗಳ ಜಿಲ್ಲಾ,ತಾಲೂಕ ಪದಾಧಿಕಾರಿಗಳಿಗೆ ಸನ್ಮಾನಿಸಿ ಗೌರವಿಸಲಾಗುತ್ತದೆ.
ಈ ಸಂದರ್ಭದಲ್ಲಿ ಸಂಘಟನೆ ಉತ್ತರ ಕರ್ನಾಟಕ ಉಸ್ತುವಾರಿ ಖಾಜಾ ಬನ್ನಿಗನೂರು ಜಿಲ್ಲಾಧ್ಯಕ್ಷ ಲಕ್ಷ್ಮಣ್ ಬೋವಿ ತಾಲೂಕ ಅಧ್ಯಕ್ಷ ರಫಿ ಕುನ್ನಟಗಿ, ಮಹಿಬೂಬ ಕುನ್ನಟಗಿ ಮಹಿಬೂಬಮುಳ್ಳುರು,ವಿಜಯಕುಮಾರ, ಸಿದ್ದಣ್ಣ ಸುಲ್ತಾನಪುರ,ಗಣಿ ಪಾಷಾ ಜಾಫರ್, ಮಲ್ಲಿಕಾರ್ಜುನ ಕುನ್ನಟಗಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *