ಸಿಂಧನೂರು : ಕೋಲಕಾರ ಫ್ಯಾಮಿಲಿ ಟ್ರಸ್ಟ್ ಪ್ರಕಾಶನ ಜಾಲಹಳ್ಳಿ ರವರ ವತಿಯಿಂದ ಲೇಖಕ ಡಾ. ಮಲ್ಲಿಕಾರ್ಜುನ ಕಮತಗಿ ರವರು ರಚಿಸಿದ ಜವಾರಿ ಜರ್ನಿ ಕೃತಿ ಜ 11 ರವಿವಾರದಂದು ಸಿಂಧನೂರಿನ ಎಲ್. ಬಿ. ಕೆ ಮತ್ತು ನೊಬಲ್ ಪದವಿ ಪೂರ್ವ ಕಾಲೇಜಿನಲ್ಲಿ ಬೆಳಗ್ಗೆ 10:00 ಗಂಟೆಗೆ ಲೋಕಾರ್ಪಣೆಗೊಳ್ಳಲಿದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಕಾರ್ಯಕ್ರಮವನ್ನು ಸಿದ್ದಯ್ಯ ಪುರಾಣಿ ಟ್ರಸ್ಟ್ ಕೊಪ್ಪಳ ಇದರ ಅಧ್ಯಕ್ಷರಾದ ಶ್ರೀ ಅಜ್ಮೀರ್ ನಂದಾಪುರ ರವರು ಉದ್ಘಾಟಿಸಲಿದ್ದಾರೆ. ಪುಸ್ತಕ ಪ್ರಕಾಶಕರಾದ ಶ್ರೀ ರಾಘವೇಂದ್ರ ಕೋಲ್ಕಾರ್ ಜಾಲಹಳ್ಳಿ ರವರು ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಸಾಹಿತ್ಯ ಅಕ್ಯಾಡೆಮಿ ಸದಸ್ಯರಾದ ಡಾ.ಸಿ. ಬಿ. ಚಿಲ್ಕರಾಗಿ ಗೌರವ ಉಪಸ್ಥಿತರಿರುವರು ವಿಜಡಮ್ ಕಾಲೇಜಿನ ಪ್ರಾಂಶುಪಾಲರು ಹಾಗೂ ಸಾಹಿತಿಗಳಾದ ಡಾ. ಶರೀಫ್ ಹಸಮಲ್ ರವರು ತೃತೀಯ ಬಗ್ಗೆ ಮಾತನಾಡಲಿದ್ದಾರೆ. ಮುಖ್ಯ ಅತಿಯಾಗಿ ಶ್ರೀ ವೀರಭದ್ರಯ್ಯ ಜಿ. ಎಂ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಸಿಂಧನೂರು,ಆಕ್ಸಫರ್ಡ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸತ್ಯನಾರಾಯಣ ಶ್ರೇಷ್ಠಿ, ಕನ್ನಡ ಸಾಹಿತ್ಯ ಸಿಂಧನೂರಿನ ಅಧ್ಯಕ್ಷರಾದ ಶ್ರೀ ಎಚ್ಎಫ್ ಮಸ್ಕಿ, ಸುರಪುರದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀ ಶರಣಬಸವ ಯಾಳವಾರ ದಲಿತ ಸಾಹಿತ್ಯ ಪರಿಷತ್ತು ಸಿಂಧನೂರು ತಾಲೂಕು ಘಟಕದ ಅಧ್ಯಕ್ಷರಾದ ಶ್ರೀ ಹುಸೇನಪ್ಪ ಅಮರಾಪುರ, ಶ್ರೀ ಹೊಳೆಪ್ಪ ಕಮತಗಿ ರವರು ಅತಿಥಿಗಳಾಗಿ ಆಗಮಿಸುತ್ತಿದ್ದಾರೆ. ಡಾಕ್ಟರ್ ಅರುಣ್ ಕುಮಾರ್ ಬೇರಗಿ ಕನ್ನಡ ಉಪನ್ಯಾಸಕರು ಪ್ರಾಸ್ತಾವಿಕ ಮಾತನಾಡಲಿದ್ದಾರೆ. ಆದಕಾರಣ ಎಲ್ಲಾ ಸಾಹಿತ್ಯ ಆಸಕ್ತರು ಈ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಕೋರಲಾಗಿದೆ.

Leave a Reply

Your email address will not be published. Required fields are marked *