ಸಿಂಧನೂರು: ನಗರದ ಸರ್ಕ್ಯೂಟ್ ಹೌಸ್ ನಲ್ಲಿ ದೇವರಾಜ ಅರಸು ಅವರ ದಾಖಲೆ ಹಿಂದಿಕ್ಕಿ 2,7,99 ದಿನಗಳ ಸುದೀರ್ಘ ಸೇವೆಯಲ್ಲಿ ಮುಂದುವರೆಯುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತುರ್ವಿಹಾಳ ಸಿದ್ದರಾಮಯ್ಯ ಅಭಿಮಾನಿ ಬಳಗ ಮತ್ತು ಕುರಿಗಾಯಿಗಳಿಂದ ಕೇಕ್ ಕತ್ತರಿಸುವ ಮೂಲಕ ಅಭಿನಂದಿಸಿದರು.
ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಾ.ನಾಗವೇಣಿ ಎಸ್.ಪಾಟೀಲ್ ಮಾತನಾಡಿ, ಹಿಂದುಳಿದ ವರ್ಗದ ನಾಯಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಾಖಲೆ ಮುರಿದಿದ್ದಾರೆ. ಸೋಲಿಲ್ಲದ ಸರದಾರ ಹಳ್ಳಿಯಲ್ಲಿ ಹುಟ್ಟಿ ಬೆಳೆದು ದಿಲ್ಲಿಯವರೆಗೂ ಹೆಸರುವಾಸಿಯಾದ ಸಿದ್ದರಾಮಯ್ಯನವರು ಹಾಲುಮತ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಕುರಿಗಾಯಿಗಳ ಮೇಲಾಗುವ ದೌರ್ಜನ್ಯ, ತಡೆ ಗಟ್ಟುವ ನಿಟ್ಟಿನಲ್ಲಿ ಗುಡ್ಡಗಾಡಿನಲ್ಲಿ ಕುರಿ ಕಾಯುವವರಿಗೆ ಬಂದೂಕಿನ ವ್ಯವಸ್ಥೆ ಮಾಡಿದ್ದಾರೆ. ಮುಂದಿನ ದಿನಮಾನಗಳಲ್ಲಿ ಕುರುಬ ಸಮಾಜವನ್ನು ಎಸ್.ಟಿ.ಮೀಸಲಾತಿಗೆ ಹೋರಾಡಲು ಮನವಿ ಮಾಡಲಾಗುವುದು ಎಂದರು.
ಈ ವೇಳೆ: ಶಿವರಾಯಪ್ಪ ಮೊದಲಗುಂದಿ, ಶರಣಪ್ಪ ಬೇರ್ಗಿ, ರಾಮಣ್ಣ ಕಾನಿಹಾಳ, ನಿಂಗಪ್ಪ ಚಂಚರ, ನಿರುಪಾದಿ ಕಾನಿಹಾಳ, ಅಂಬಣ್ಣ ಕುಂಟೋಜಿ, ಮುತ್ತು ನವಲಿ, ಯಮನೂರು ಐರಾಣಿ, ಹನುಮಂತ ಹಳ್ಳೂರು, ಗರ್ಜಪ್ಪ ಗುಡಿಸಲಿ, ಸೇರಿದಂತೆ ಹಲವಾರು ಜನರು ಕುರಿಗಾಯಿಗಳು ಹಾಗೂ ಸಿದ್ದರಾಮಯ್ಯ ಅವರ ಅಭಿಮಾನಿಗಳು ಉಪಸ್ಥಿತರಿದ್ದರು.

