ರಾಯಚೂರು ಜ. 9 : ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ರಾಯಚೂರು ಜಿಲ್ಲಾ ಸಹಕಾರ ಒಕ್ಕೂಟ ಹಾಗೂ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಇವುಗಳ ಸಂಯುಕ್ತ ಆಶ್ರಯದಲ್ಲಿ “ಕೃಷಿ ವಿಶ್ವವಿದ್ಯಾಲಯದ ಬಿ.ಎಸ್.ಸಿ. ಅಗ್ರಿ ವಿದ್ಯಾರ್ಥಿಗಳಿಗೆ ‘ಸಹಕಾರ’ ಕುರಿತು ರಾಯಚೂರು ಜಿಲ್ಲಾ ಸಹಕಾರ ಒಕ್ಕೂಟದ ಮುಖ್ಯಕಾರ್ಯನಿರ್ವಹಣಾಧಿಕಾರಿ ಗಾಯತ್ರಿ ವೈ. ಇವರು ವಿದ್ಯಾರ್ಥಿಗಳಿಗೆ ಸಹಕಾರದ ಇತಿಹಾಸ, ಸಹಕಾರ ಸಂಘಗಳ ಉಗಮ, ನಡೆದುಬಂದ ದಾರಿ ಮುಂತಾದ ವಿಷಯಗಳ ಕುರಿತು ವಿಶೇಷ ಉಪನ್ಯಾಸದಲ್ಲಿ ತಿಳಿಸಿದರು. ಮುಂದುವರೆದು ಮಾತನಾಡಿ ಮಹಾಮಂಡಳದ ನಿರ್ದೇಶನದಂತೆ ಜಿಲ್ಲಾ ಸಹಕಾರ ಒಕ್ಕೂಟದ ಮೂಲಕ ಜರುಗುವ ಸದಸ್ಯ ಶಿಕ್ಷಣ ತರಬೇತಿ, ಸಹಕಾರ ಸಪ್ತಾಹ, ಪ್ರಬಂಧ ಹಾಗೂ ಚರ್ಚಾ ಸ್ಪರ್ಧೆ ಮುಂತಾದ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು..
ರಾಯಚೂರು ಜಿಲ್ಲಾ ಸಹಕಾರ ಒಕ್ಕೂಟದ ಜಿಲ್ಲಾ ಸಹಕಾರ ಶಿಕ್ಷಕರದ ಮಂಜುಳಾ ಮಾತನಾಡಿ ಸಹಕಾರ ಸಂಘಗಳ ರಚನೆ, ಉದ್ಧೇಶ, ಸಂಘಗಳ ಕಾರ್ಯ ಚಟುವಟಿಕೆಗಳ ಒಕ್ಕೂಟದಿಂದ ಜರುಗುವ ಕ್ಲಸ್ಟರ್ ತರಗತಿಗಳ ಕುರಿತು ಮಾಹಿತಿ ನೀಡಿದರು. ಕಾಲೇಜ್ ಉಪನ್ಯಾಸಕರಾದ ಡಾ|| ಸತೀಶ ಸರ್ವರನ್ನು ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಉಪನ್ಯಾಸಕರಾದ ವಿಜಯ ವಾಲಿ ಉಪಸ್ಥಿತರಿದ್ದರು.
ತರಬೇತಿಯಲ್ಲಿ ಕೃಷಿ ವಿಶ್ವವಿದ್ಯಾಲಯದ ಬಿ.ಎಸ್.ಸಿ. ಅಗ್ರಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತರಬೇತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.


