ಎಂ. ಎಲ್. ಸಿ ಬಸನಗೌಡ ಬಾದರ್ಲಿಗೂ ನಮ್ಮ ಕುಟುಂಬಕ್ಕೆ ಯಾವ ಸಂಬಂಧವಿಲ್ಲ : ಬಾಬುಗೌಡ ಬಾದರ್ಲಿ
ಸಿಂಧನೂರು : ಬಸನಗೌಡ ಬಾದರ್ಲಿ ಎಂ. ಎಲ್. ಸಿ ಆಗುವ ಮುಂಚೆ ನಮ್ಮ ಕುಟುಂಬದಲ್ಲೇ ಬೆಳೆದು ನಮ್ಮ ಕುಟುಂಬದಿಂದಲೇ ಅನೇಕ ಸಹಾಯ ಪಡೆದು ಈಗ ಎಂ. ಎಲ್. ಸಿ ಆಗಿದ್ದೇನೆ ಎಂದು ಕ್ಷೇತ್ರದ ಹಿರಿಯ ಶಾಸಕರಾದ ನಮ್ಮ ಚಿಕ್ಕಪ್ಪ ಹಂಪನಗೌಡ ಬಾದರ್ಲಿ ವಿರುದ್ಧ ನಾಲಿಗೆ ಹರಿ ಬಿಟ್ಟು ಮಾತನಾಡುತ್ತಿದ್ದಾನೆ.ಅವನನ್ನು ನಾವು ನಮ್ಮ ಕುಟುಂಬದವರು ಅಪ್ಪಿಕೊಂಡಿದ್ದು ಮೊದಲನೇ ತಪ್ಪು.
ಹಾಗಾಗಿ ಅವನು ಉಪ್ಪು ತಿಂದ ಮನೆಗೆ ದ್ರೋಹ ಮಾಡಿದ್ದಾನೆ.ಎಂ. ಎಲ್. ಸಿ ಬಸನಗೌಡ ಬಾದರ್ಲಿಗೂ ನಮ್ಮ ಕುಟುಂಬಕ್ಕೆ ಯಾವ ಸಂಬಂಧವಿಲ್ಲ ಎಂದು ಸುಡಾ ಅಧ್ಯಕ್ಷ ಬಾಬುಗೌಡ ಬಾದರ್ಲಿ ಹೇಳಿದರು
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರರಂದು ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿ ಅವನು ನಮ್ಮ ಕುಟುಂಬದ ಮತ್ತು ನಮ್ಮ ಚಿಕ್ಕಪ್ಪನವರ ಹೆಸರು ಹೇಳಿಕೊಂಡು ರಾಜಕಾರಣಕ್ಕೆ ಬಂದವನು. ಅವನು ಬಳ್ಳಾರಿಯಲ್ಲಿ ವಿದ್ಯಾಭ್ಯಾಸ ಮಾಡುವಾಗ ನಾವೇ ಅವನಿಗೆ ಹಣದ ಸಹಾಯ ಮಾಡಿದ್ದೇವೆ. ಲ್ಯಾಬ್ ಟೆಕ್ನಿಷಿಯನ್ ಮುಗಿಸಿ ಸಿಂಧನೂರಿಗೆ ಬಂದಮೇಲೆ ನಮ್ಮ ಮಾವನವರ ಆಸ್ಪತ್ರೆ ಲ್ಯಾಬ್ ನಲ್ಲೇ ಬಸನಗೌಡ ಬಾದರ್ಲಿಗೆ ಕೆಲಸ ಕೊಟ್ಟಿದ್ದೇವು. ನಂತರ ನಮ್ಮ ಮಾವನವರು ಯಾಕ ಅವನನ್ನು ಕೆಲಸದಿಂದ ತಗೆದು ಹಾಕಿದರೋ ಗೊತ್ತಿಲ್ಲ. ಒಂದು ವರ್ಷ ಮಾತ್ರ ಲೆಕ್ಕ ಕೊಟ್ಟ ಆಮೇಲೆ 30ರಿಂದ 35 ಲಕ್ಷ ನಮ್ಮ ಹಣ ಲಪಟಾಯಿಸಿ ಬಿಟ್ಟ. ನಮ್ಮನೆ ಹುಡುಗ ಅಂತ ಸುಮ್ಮನಾದರೂ. ನಂತರ ಬ್ಲೆಡ್ ಬ್ಯಾಂಕ್ ಮಾಡ್ತೀನಿ ಅಂತ ಬಂದಾಗ ನಮ್ಮ ಹೋಟಲ್ ನಲ್ಲಿ ಕೆಳಗೆ ಒಂದು ಫ್ಲೋರ್ ಎಂಟು ವರ್ಷಗಳ ಕಾಲ ಉಚಿತವಾಗಿ ಬಿಟ್ಟು ಕೊಟ್ಟಿದ್ದೇವು. ನಂತರ ಮತ್ತೆ ಮೆಡಿಕಲ್ ಶಾಪ್ ಮಾಡ್ತೀನಿ ಅಂತ ಬಂದ ಪಾಟ್ನರ್ ಶಿಪ್ ಮೇಲೆ ಹಾಗ ನಾನು ದೇವರಾಜ ಶೇಟ್ ಜೊತೆ ಮಾತನಾಡಿ ಬಸ್ ಸ್ಟ್ಯಾಂಡ್ ಮಳಿಗೆಯಲ್ಲಿ ಒಂದು ಮಳಿಗೆ ಕೊಡಿಸಿದೆ. ಜೊತೆಗೆ ಒಂದು ಲಕ್ಷ ಹಣವನ್ನು ಕೂಡ ಕೊಟ್ಟಿದ್ದೆ. ಆ ಹಣವನ್ನು ವಾಪಾಸ್ ಕೊಟ್ಟರು. ಆಮೇಲೆ ಅವನ ಅಣ್ಣಾ ನನ್ನತ್ರ ಬಂದು ತಮ್ಮ ಪರಿಸ್ಥಿತಿ ಹೇಳಿದಾಗ ಆ ಮೆಡಿಕಲ್ ಕೂಡ ಬಿಟ್ಟು ಕೊಟ್ಟೆವು.ಇವನಿಗೆ ಕಾಂಗ್ರೆಸ್ ಪಕ್ಷದ ದ್ವಾರ ಬಾಗಿಲು ತೆರೆದು ರಾಜ್ಯ ಯುವ ಘಟಕದ ಅಧ್ಯಕ್ಷ ಸ್ಥಾನ ಸಿಗುವಾಗೆ ಮಾಡಿದ್ದೆ ನಮ್ಮ ಚಿಕ್ಕಪ್ಪ ಹಂಪನಗೌಡ ಬಾದರ್ಲಿ. ಸರಳ ಸೌಮ್ಯತೆ ಹೊಂದಿರುವ ನಮ್ಮ ಹಂಪನಗೌಡ ಬಾದರ್ಲಿ ವಿರುದ್ಧ ಹಗುರವಾಗಿ ಮಾತನಾಡಿದರೆ ಇನ್ನೂ ಮುಂದೆ ಸುಮ್ಮನಿರುವ ಪ್ರಶ್ನೆಯೇ ಇಲ್ಲ.ನಾನು ಎಲ್ಲದಕ್ಕೂ ರೆಡಿ ಆಗಿದ್ದೇನೆ ಎಂದು ಶಾಸಕ ಹಂಪನಗೌಡ ಬಾದರ್ಲಿ ವಿರುದ್ಧ ಎಂ.ಎಲ್.ಸಿ ಬಸನಗೌಡ ಬಾದರ್ಲಿ ಹೇಳಿಕೆಗೆ ಪ್ರತ್ಯುತ್ತರ ನೀಡಿ ಆಕ್ರೋಶ ವ್ಯಕ್ತಪಡಿಸಿ ಅವರು ಈ ಸಮಯದಲ್ಲಿ ಎಚ್ಚರಿಕೆ ನೀಡಿದರು
ಕಾಂಗ್ರೆಸ್ ಪಕ್ಷ ಮತ್ತು ಪಕ್ಷದ ಚಿಹ್ನೆ ಇಲ್ಲದೆ ಹಂಪನಗೌಡ ಬಾದರ್ಲಿ ಚುನಾವಣೆಗೆ ನಿಂತರೆ ಕ್ಷೇತ್ರದಲ್ಲಿ ಠೇವಣಿ ಕಳೆದುಕೊಳ್ಳುತ್ತಾರೆ ಎಂದು ಹೇಳಿದ್ದಾನೆ. ಇವನoತ ವಂಚಕ ಯಾರು ಇಲ್ಲ. ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ಯಾವುದೇ ಕ್ಷೇತ್ರದಿಂದ ನನ್ನ ವಿರುದ್ಧ ಸ್ಪರ್ಧೆ ಮಾಡಲಿ ನೋಡೋಣ. ನಾನು ಸೋತರೆ ಸುಡಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಅವನು ಸೋತರೆ ಎಂ. ಎಲ್. ಸಿ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ನೇರ ಸವಾಲ್ ಹಾಕಿದರು.ಎಂ. ಎಲ್. ಸಿ ಆದವನಿಗೆ ಬುದ್ದಿಯಿಲ್ಲ ಅಂದಮೇಲೆ ಅವನ ಹಿಂದಿರುವ ಮುಖಂಡರಿಗೆ ಎಲ್ಲಿಂದ ಬುದ್ದಿ ಬರಬೇಕು? ಎಂದರು .
ಶಾಸಕ ಹಂಪನಗೌಡ ಬಾದರ್ಲಿ ಪ್ರತಿಯೊಂದು ಸರ್ಕಾರದ ಕಾರ್ಯಕ್ರಮಗಳಲ್ಲಿ ಎಂ. ಎಲ್. ಸಿ. ಬಸನಗೌಡ ಬಾದರ್ಲಿಯನ್ನು ಕಡಗಣನೆ ಮಾಡಿಲ್ಲ. ಅವನು ಮಾಡುವ ಸರ್ಕಾರದ ಕಾರ್ಯಕ್ರಮಗಳಲ್ಲಿ ಶಾಸಕರನ್ನು ಕಡಗಣನೆ ಮಾಡಿದ್ದಾನೆ.ಶಾಸಕ ಹಂಪನಗೌಡ ಬಾದರ್ಲಿ ಹೆಸರೇಳಿ ರಾಜಕಾರಣಕ್ಕೆ ಬಂದಿದ್ದಾನೆ.ಅವನಿಗೂ ಮತ್ತು ನಮ್ಮ ಕುಟುಂಬಕ್ಕೆ ಯಾವುದೇ ಸಂಬಂಧವಿಲ್ಲ ಎಂದು ತಿರುಗೇಟು ನೀಡಿದರು. ವಿದ್ಯಾರ್ಥಿ ರಥ ಬಸ್ ಗಳಿಗೆ ಚಾಲನೆ ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅಪಾರ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಬಿಸಿಲಲ್ಲಿ ನಿಂತಿದ್ದರು. ಅದು ಭಾಷಣ ಬಿಗಿಯುವ ಕಾರ್ಯಕ್ರಮ ಆಗಿರಲಿಲ್ಲ. ಸಮಯದ ಅಭಾವದಿಂದ ಎಂ. ಎಲ್. ಸಿ ಬಸನಗೌಡ ಬಾದರ್ಲಿ ಅವನಿಗೆ ಮಾತನಾಡಲು ಅವಕಾಶ ಸಿಗಲಿಲ್ಲ ಅಷ್ಟೇ. ಅಭಿವೃದ್ಧಿ ಕೆಲಸಕ್ಕಿಂತ ಅವನಿಗೆ ಪ್ರಚಾರದ ಹುಚ್ಚು ಜಾಸ್ತಿಯಿದೆ. ಶಾಸಕ ಹಂಪನಗೌಡ ಬಾದರ್ಲಿ ಅನುದಾನದಲ್ಲಿ ವಿದ್ಯಾರ್ಥಿ ರಥ 14 ಬಸ್ ಗಳನ್ನು ಬಿಡಲಾಗಿದೆ. ತಾಲೂಕಿನ ಗಣೇಶ ಕ್ಯಾಂಪಿಗೆ ನಾನೇ ಬಸ್ ಬಿಡಿಸಿದ್ದೇನೆ ಎಂದು ಬಾಣಕ್ಕೆ ಅವನೇ ಹಣ ಕೊಟ್ಟು ಬಾಣ ಬಿಡಿಸಿ ವಿಡಿಯೋ ಮಾಡಿಸಿ ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡ್ಸಿದ್ದಾನೆ ಎಂದು ಗೇಲಿ ಮಾಡಿದರು
ಶಾಸಕ ಹಂಪನಗೌಡ ಬಾದರ್ಲಿ ಅಭಿವೃದ್ಧಿ ವಿಚಾರದಲ್ಲಿ ಯಾವತ್ತು ಹೊಂದಾಣಿಕೆ ರಾಜಕಾರಣ ಮಾಡಿಲ್ಲ. ಮತ್ತು ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಮಾಡಿಲ್ಲ.ಹಾಗೂ ಯಾವತ್ತು ದಲಿತ ಸಮುದಾಯಕ್ಕೆ ಸೇರಿದಂತೆ ಯಾವ ಜನ ಸಮುದಾಯಕ್ಕೆ ಅವರು ಅನ್ಯಾಯ ಮಾಡಿಲ್ಲ ಆ ಕಾರಣಕ್ಕೆ ಹಂಪನಗೌಡ ಬಾದರ್ಲಿ ಕ್ಷೇತ್ರದಲ್ಲಿ 5 ಬಾರಿ ಶಾಸಕರಾಗಿದ್ದಾರೆ. ಮುಂದಿನ ದಿನಗಳಲ್ಲಿ ಕೂಡ ಹಂಪನಗೌಡ ಬಾದರ್ಲಿ ಶಾಸಕರಾಗುತ್ತಾರೆ ಎಂದು ಸ್ಪಷ್ಟ ಪಡಿಸಿದರು
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಎನ್. ಅಮರೇಶ, ಛತ್ರಪ್ಪ ಕುರುಕುಂದ, ವೈ. ನರೇಂದ್ರನಾಥ,ಲಿಂಗಪ್ಪ ದಡೆಸಗೂರು, ಪ್ರಭುರಾಜ, ವಿರೇಶ ಹಟ್ಟಿ, ಆನಂದ ಪಾಟೀಲ್ ಬೊಮ್ಮನಾಳ, ಖಾಜಿ ಮಲ್ಲಿಕ್, ಅನಿಲ್ ಕುಮಾರ. ವೈ, ಶಿವನಗೌಡ ಎಲೇಕೂಡ್ಲಿಗಿ, ರಾಮನಗೌಡ ಮಲ್ಕಾಪುರು,ಶರಣಬಸವ ಮಲ್ಲಾಪುರು, ಹನುಮೇಶ ನಾಯಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು
