ಲಿಂಗಸಗೂರು,ಜ.09 –
ಸರಕಾರ ವಿವಿಧ ಇಲಾಖೆಗಳಿಗೆ ಅಭಿವೃದ್ಧಿ ಕಾಮಗಾರಿಗಳಿಗಾಗಿ ಬಿಡುಗಡೆ ಮಾಡಿದ ಅನುದಾನ ವನ್ನು ಅಧಿಕಾರಿಗಳು ನಿಗದಿತ ಅವಧಿ ಯೊಳಗೆ ಗುರಿ ಸಾಧಿಸಬೇಕೆಂದು ಜಿಲ್ಲಾ ಪಂಚಾಯ್ತಿ ಮುಖ್ಯ ಲೆಕ್ಕಾಧಿ ಕಾರಿ ಹಾಗೂ ಲಿಂಗಸಗೂರ ತಾ.ಪಂ ಆಡಳಿತಾಧಿಕಾರಿ ಡಾ.ವಿಜಯ ಶಂಕರ ಸೂಚಿಸಿದರು.
ಸ್ಥಳೀಯ ತಾಪಂ ಸಭಾಂಗಣ ದಲ್ಲಿ ಇಲಾಖಾವಾರು ಪ್ರಗತಿ ಪರಿಶೀಲನಾ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕು ಪಂಚಾಯ್ತಿಯಿಂದ ಮಂಜೂರಾದ ಅನುದಾನವನ್ನು ಅಗತ್ಯಕ್ಕೆ ತಕ್ಕಂತೆ ಖರ್ಚು ಮಾಡುವ ಮೂಲಕ ನಿಗದಿತ ಅವಧಿಯೊಳಗೆ ಗುರಿ ಸಾಧಿಸಬೇಕು. ವಿನಾಕಾರಣ ವಿಳಂಬ ಧೋರಣೆ ತೋರುವುದು ಸರಿಯಲ್ಲ. ತಾಪಂ ಇಲಾಖೆ ಆರೋಗ್ಯ ಇಲಾಖೆಗೆ ನೀಡಿರುವ 13 ಲಕ್ಷ ರೂ. ಅನುದಾನ ಕಟ್ಟಡ ಮತ್ತು ಸಲಕರಣೆಗೆ ಬಳಕೆ ಮಾಡಬೇಕು. ರೋಗಿಗಳಿಗೆ ಅನುಕೂಲವಾಗುವ ಸಾಮಗ್ರಿಗಳನ್ನು ಖರೀದಿಸಬೇಕು. ತಾಲೂಕಿನ ಈಚನಾಳ, ನಾಗರಹಾಳ, ಸಜ್ಜಲಗುಡ್ಡ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹೊಸ ಕಟ್ಟಡ ನಿರ್ಮಿಸಲಾಗಿದ್ದರೂ ದುರಸ್ತಿಗಾಗಿ ಪ್ರಸ್ತಾವನೆ ಸಲ್ಲಿಸಿರುವುದು ಸರಿಯಲ್ಲ, ಕೂಡಲೇ ಕಾಮಗಾರಿ ಬದಲಿಸುವಂತೆ ಟಿಎಚ್‌ಒ ಡಾ.ಅಮರೇಶ ಪಾಟೀಲರಿಗೆ ತಾಕೀತು ಮಾಡಿದರು.
ಸಿಡಿಪಿಒ ನಾಗರತ್ನ ಮಾತನಾಡಿ, ಇತ್ತೀಚಿಗೆ ನಾನು ಅಧಿಕಾರ ವಹಿಸಿ ಕೊಂಡಿದ್ದು, ಈ ಹಿಂದೆ ಕಳುಹಿಸಿದ ಪ್ರಸ್ತಾವನೆಗಳಲ್ಲಿ ಕೆಲವು ಬದಲಾವಣೆ ಮಾಡಬೇಕಿದೆ. ನರಕಲದಿನ್ನಿ, ಚಿತ್ತಾ ಪುರ, ಬ್ಯಾಲಿಹಾಳ, ಕನ್ನಾಪುರ ಹಟ್ಟಿ, ಆನೆಹೊಸೂರು, ಕಾಲಳೇರದೊಡ್ಡಿ, ಗೊಲ್ಲರದೊಡ್ಡಿ, ನಾಗರಹಾಳ, ಯರಜಂತಿ, ಗೌಡೂರು ತಾಂಡಾ, ಗುಡದನಾಳ ಅಂಗನವಾಡಿ ಕೇಂದ್ರಗ ಳಿಗೆ ಕಂಪೌಂಡ್ ನಿರ್ಮಾಣ, ಗೇಟ್ ಅಳವಡಿಕೆ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದೆ.
ಮಾಚನೂರು ತಾಂಡಾ, ಯರ ಜಂತಿ ಅಂಗನವಾಡಿ ಕೇಂದ್ರಗಳ ಶೌಚಗೃಹ ನಿರ್ಮಾಣ ಕಾಮಗಾರಿ ಬದಲಾವಣೆ ಮಾಡಬೇಕಿದೆ. ಕಡೋಣಿ, ಜಾಲಿಬೆಂಚಿ, ರೋಡಲ ಬಂಡಾ, ಕೇಂದ್ರಗಳಿಗೆ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಬಿಇಒ ಸುಜಾತಾ ಹೂನೂರು ಮಾತನಾಡಿ, ತಾಲೂಕಿನ ಗುಂತಗೋಳ, ಹಿರೇಹೆಸ ರೂರು, ಮಾಚನೂರು, ಬೆಂಚಲ ದೊಡ್ಡಿ, ಹಾಲಬಾವಿ, ಗೊಲಪಲ್ಲಿ, ರಾಮತ್ನಾಳ, ಹಲ್ಕಾವಟಗಿ, ನವಲಿ, ಉಳಿಮೇಶ್ವರ, ಹನೂರು, ರಾಯದುರ್ಗ, ಟಣಮನಕಲ್, ಬಾರಿಗಿಡ ದರದೊಡ್ಡಿ ಪ್ರಾಥಮಿಕ ಶಾಲೆಗಳಲ್ಲಿ ನೆಲಹಾಸು, ಕಿಟಕಿ, ಬಾಗಿಲುಗಳ
ದುರಸ್ತಿಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ದೇವರಭೂಪುರ ಪ್ರಾಥಮಿಕ ಶಾಲೆ ದುರಸ್ತಿ ಕಾಮಗಾರಿ ಬದಲಾವಣೆ ಮಾಡಲು ತಿಳಿಸಲಾಗಿದೆ ಎಂದು ಹೇಳಿದರು.
ಕೃಷಿ ಇಲಾಖೆ ಅನುದಾನದಲ್ಲಿ ಲಿಂಗಸಗೂರು ರೈತಸಂಪರ್ಕ ಕೇಂದ್ರಕ್ಕೆ ಕಂಪೌಂಡ್ ಗೋಡೆ ನಿರ್ಮಿ ಸಲು ಪ್ರಸ್ತಾವನೆ ಸಲ್ಲಿಸಲಾಗಿತು. ಈಗಾಗಲೇ ಕಾಮಗಾರಿ ಪೂರ್ಣ ಗೊಂಡಿದೆ ಎಂದು ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ಮಲ್ಲಿ ಕಾರ್ಜುನ ತಿಳಿಸಿದರು. ಸಮಾಜ ಕಲ್ಯಾಣ ಇಲಾಖೆಯಲ್ಲಿ ನ್ಯಾಯಾಲ ಯದ ಆದೇಶದ ಮೇರೆಗೆ ಹೊರಗುತ್ತಿಗೆ ಆಧಾರದಲ್ಲಿ ನೇಮಕವಾದ ಸಿಬ್ಬಂದಿಗಳಿಗೆ ಎರಡು ದಿನದಲ್ಲಿ ವೇತನ ಪಾವತಿಸುವಂತೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗೆ ಜಿಪಂ ಮುಖ್ಯ ಲೆಕ್ಕಾಧಿಕಾರಿ ಡಾ.ವಿಜಯ ಶಂಕರ ಸೂಚಿಸಿದರು. ಈ ವೇಳೆ ತಾಪಂ ಇಒ ಉಮೇಶ ಇದ್ದರು.

