ರಾಯಚೂರು,ನ.20-ವಚನಸಿರಿ ಪಂ. ಅಂಬಯ್ಯನುಲಿ ಸಂಗೀತ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ದಿ.22 ರಂದು ಸಂಸ್ಥೆಯ 3ನೇ ವಾರ್ಷಿಕೋತ್ಸವದ ಪ್ರಯುಕ್ತ ರಾಯಚೂರು ಸಂಗೀತ ಉತ್ಸವ ಹಾಗೂ ನುಲಿ ಸಿರಿ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಗೌರವಧ್ಯಕ್ಷರಾದ ಅಂಬಯ್ಯ ನುಲಿ ಅವರು ಹೇಳಿದರು. ನಗರದ ಪತ್ರಿಕಾಭವನದಲ್ಲಿ ಸುದ್ದಿ ಗಾರಿರಂ ದಿ ಗೆ ಮಾತನಾಡುತ್ತಾ,ಕಾರ್ಯಕ್ರಮ ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ನಡೆಯಲಿದೆ. ಕಾರ್ಯಕ್ರಮದ ದಿವ್ಯಾ ಸನ್ನಿದ್ಯಾವನ್ನು ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು, ಅಭಿನವರಾಚೋಟಿವೀರ ಶಿವಾಚಾರ್ಯ ಮಹಾಸ್ವಾಮಿಗಳು, ಡಾ.ಕಲ್ಲಯ್ಯಜ್ಜನ ಅವರು ವಹಿಸಲಿದ್ದಾರೆ.ಸಾಯಿ ಕಿರಣ

ಆದೋನಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಹಿರಿಯ ಸಾಹಿತಿ ನಾಡೋಜ ಕುಂ. ವೀರಭದ್ರಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.ಮುಖ್ಯ ಅತಿಥಿಗಳಾಗಿ ಸಚಿವ ಎನ್ ಎಸ್ ಬೋಸರಾಜು, ಸಂಸದ ಜಿ. ಕುಮಾರ ನಾಯಕ, ಶಾಸಕರು ಡಾ. ಶಿವರಾಜ ಪಾಟೀಲ್, ಶಾಸಕ ಬಸನಗೌಡದದ್ದಲ್ ಅವರುಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂದರು.ಇಂದಿನ ಯುವಕರಿಗೆ ಸಂಗೀತ ಉತ್ಸವ ತುಂಬುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ಸಂಗೀತ ಉತ್ಸವ ಕಾರ್ಯಕ್ರಮದಲ್ಲಿ

ವಿವಿಧಸಾಂಸ್ಕೃತಿಕ ಕಾರ್ಯಕ್ರಮಗಳು ನಿರ್ವಹಿಸಲಾಗುತ್ತಿದೆ.ಶಿಕ್ಷಣ ಕ್ಷೇತ್ರ ಹಾಗೂ ಮಾಧ್ಯಮ ಕ್ಷೇತ್ರ ಸೇರಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಒಟ್ಟು 23 ನುಲಿ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು. ಸಂಗೀತ ಉತ್ಸವದಲ್ಲಿ ಹಿಂದೂಸ್ತಾನ್, ಸುಗಮ ಸಂಗೀತ. ವಚನ ನೃತ್ಯ ಸೇರಿ ಕಾರ್ಯಕ್ರಮ ನಡೆಯಲಿದೆ ಎಂದರು.ಈ ಸಂದರ್ಭದಲ್ಲಿ ಚಿದಾನಂದ ನುಲಿ, ದೇವೇಂದ್ರಮ್ಮ, ವೀರಣ್ಣ ಪ್ರಭುಲಿಂಗಯ್ಯ ಸೇರಿದಂತೆ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *