ರಾಯಚೂರು.ನ.20-ಜಮಾಅತೆ ಇಸ್ಲಾಮಿ ಹಿಂದ್ ಜಿಲ್ಲಾ ಘಟಕದ ವತಿಯಿಂದ ನೆರೆ ಹೊರೆಯವರ ಹಕ್ಕುಗಳ ರಕ್ಷಣೆ ಮತ್ತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನ. 21 ರಿಂದ ಮಾದರಿ ನೆರೆಹೊರೆ-ಮಾದರಿ ಸಮಾಜ’ ರಾಷ್ಟ್ರವ್ಯಾಪಿ ಅಭಿಯಾನ ಆಯೋಜಿಸಲಾಗಿದೆ ಎಂದು ಜಮಾತೆ ಇಸ್ಲಾಂ ಹಿಂದ್ ಜಿಲ್ಲಾ ಘಟಕದ ಮುಖಂಡ ಸಲೀಂ ಪಾಶ ಅವರು ಹೇಳಿದರು.
ನಗರದಪತ್ರಿಕಾಭವನದಲ್ಲಿಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಈ ಆಧುನಿಕ ಯುಗದಲ್ಲಿ ಒಂದೇ ಒಡಲಿ
ನಲ್ಲಿ ಹುಟ್ಟಿದವರ ನಡುವೆಯೇ ಬಿರುಕು ಮೂಡುವ ಬೆಳವಣಿಗೆ ಆಗುತ್ತಿದೆ. ನಮಗೆ ಕಷ್ಟ ಬಂದಾಗ ಸಂಬಂಧಿಕರಿಗಿಂತ ಮೊದಲು
ನೆರೆಹೊರೆಯವರೇ ಸಹಾಯಕ್ಕೆ ಬರುತ್ತಾರೆ. ಪ್ರವಾದಿ ಮುಹಮ್ಮದ್ ಅವರು ಹೇಳಿದಂತೆ ಒಬ್ಬ ವ್ಯಕ್ತಿಯ ನಡೆತೆ, ಅವನು ಉತ್ತಮವಾಗಿದ್ದಾನೆ
ಇಲ್ಲ ಎಂದು ನೋಡಬೇಕಾದರೆ ಅವನ ನೆರೆಹೊರೆಯವರ ಜೊತೆಗೆ ಬೆಳೆಸಿಕೊಂಡ ಸಂಬಂಧದಿಂದಲೇ
ತಿಳಿಯುತ್ತದೆ ಹಾಗೂ ಉತ್ತಮ ನೆರೆ ಹೊರೆ ಹಿಂದಿದವನೇ ಸ್ವರ್ಗಕ್ಕೆ ಹೋಗುತ್ತಾನೆ ಎಂದು ಅಭಿಪ್ರಾಯ ಪಟ್ಟಿರುವುದು ಸ್ಮರಣೀಯ ಎಂದರು.
ಈ ಅಭಿಯಾನದ ಅಂಗವಾಗಿ 20 ರಂದು ಕಿರು ಹೊತ್ತಿಗೆ ಪುಸ್ತಕ. ಕರಪತ್ರವನ್ನು ಎಲ್ಲ ಧರ್ಮದ ಸಾರ್ವಜನಿಕರಿಗೆ ವಿತರಿಸುವುದು. ಎಲ್ಲ ಮಸೀದ್‌ಗಳಲ್ಲಿ ಮುಸ್ಲಿಂ ಬಾಂಧವರಿಗೆ ಜುಮ್ಮಾ ಪ್ರವಚನ. ಓಣಿಗಳಲ್ಲಿ ಮನೆ-ಮನೆಗೆ ತೆರಳಿ ಜಾಗೃತಿ, ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಉಪನ್ಯಾಸ ಕಾರ್ಯಕ್ರಮ ನೆರೆಹೊರೆಯವರ ಹಕ್ಕುಗಳ ಕುರಿತು ಸಮಾವೇಶ ನಡೆಸಲಾಗುವುದು.
ಉತ್ತಮ ನೆರೆಹೊರೆಯ ಅಭಿಯಾನದ ಭಾಗವಾಗಿ ವಾಹನಗಳ ಸರಿಯಾದ ಪಾರ್ಕಿಂಗ್, ಕಷ್ಟದಲ್ಲಿರುವ ನೆರೆಹೊರೆಯವರಿಗೆ ಸಹಾಯ ಮಾಡುವುದು. ಒಳ್ಳೆಯ ನಡತೆ ಬೆಳೆಸಿಕೊಳ್ಳುವುದು ಇತ್ಯಾದಿ ನೈತಿಕತೆ ಬೋಧನೆ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಮಾತೆ ಇಸ್ಲಾಂ ಹಿಂದ್ ಜಿಲ್ಲಾಧ್ಯಕ್ಷ ಅಸಿಮುದ್ದೀನ್ ಅಕ್ತರ್, ಮಹಮ್ಮದ್ ಸಮದ್ ಪಾಶ ಸೇರಿದಂತೆ ಉಪಸ್ಥಿತರಿದ್ದರು.

