ಮಾನ್ವಿ: ಪಟ್ಟಣದ ಕೆ.ಪಿ.ಎಸ್.ವಿ.ಎಸ್. ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಹಾಗೂ ಆಸ್ಪತ್ರೆ ವತಿಯಿಂದ ವಿಶ್ವ ಮೂಲವ್ಯಾಧಿ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡ ಉಚಿತ ಮೂಲವ್ಯಾಧಿ ತಪಾಸಣೆ ಶಿಬಿರವನ್ನು ಪ್ರಾಚಾರ್ಯರು ಡಾ. ಜೀವನೇಶ್ವರಯ್ಯ, ಉದ್ಘಾಟಿಸಿ ಮಾತನಾಡಿ ಮೂಲವ್ಯಾಧಿ ರೋಗದ ಬಗ್ಗೆ ಸಮಾಜದಲ್ಲಿ ಹಿಂಜರಿಕೆ ಇರುವುದರಿಂದ ಚಿಕಿತ್ಸೆ ಪಡೆಯದೆ ನೋವನ್ನು ಅನುಭವಿಸುತ್ತಾರೆ ಅದ್ದರಿಂದ ಮೂಲೌಯಾಧಿ ಕಾಯಿಲೆಯುಳ್ಳವರು ಮುನ್ನೆಚ್ಚರಿಕೆಯ ಜೊತೆಗೆ ಸಮಗ್ರ ಆಯುರ್ವೇದ ಚಿಕಿತ್ಸೆಯನ್ನು ಪಡೆದುಕೊಂಡು ನಿವಾರಣೆ ಮಾಡಿಕೊಳ್ಳಬಹುದು. ಇಂದಿನ ಬದಲಾದ ಆಹಾರ ಪದ್ದತಿ ಹಾಗೂ ಜೀವನ ಶೈಲಿಯಿಂದ ಹೆಚ್ಚಿನ ಜನರಲ್ಲಿ ಇಂದು ಮೂಲವ್ಯಾಧಿ ಕಾಯಿಲೆ ಕಾಣಿಸಿಕೊಳ್ಳುತ್ತಿದೆ. ಆಯುರ್ವೇದ ವೈದ್ಯ ಪದ್ದತಿಯಲ್ಲಿ ಶಲ್ಯತಂತ್ರದ ಮೂಲಕ ಅಗತ್ಯ ಔಷಾಧಿಗಳಿಂದ ಚಿಕಿತ್ಸೆಯಿಂದ ಮೂಲವ್ಯಾದಿ ಕಾಯಿಲೆಯನ್ನು ಗುಣಪಡಿಸಿಕೊಳ್ಳಬಹುದಾಗಿದೆ ಅದ್ದರಿಂದ ಆಸ್ಪತ್ರೆಯ ಶಲ್ಯತಂತ್ರ ವಿಭಾಗದ ವತಿಯಿಂದ ನ.30 ರವರೆಗೆ 10 ದಿನಗಳ ಕಾಲ ಉಚಿತ ಮೂಲವ್ಯಾಧಿ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಈ ಶಿಬಿರದ ಸದುಪಯೊಗ ಪಡೆದುಕೊಳ್ಳುವಂತೆ ಕೋರಿದರು.
ಶಲ್ಯತಂತ್ರ ವಿಭಾಗದ ತಜ್ಞವೈದ್ಯರಾದ ಡಾ. ಶಂಕರಾನಂದ ಮತ್ತು ಡಾ. ಅಂಜುಮ್ ಪರ್ವೀನ್ ಶಿಬಿರದಲ್ಲಿ ರೋಗಿಗಳಿಗೆ ತಪಾಸಣೆ ನಡೆಸಿ ಜೀವನಶೈಲಿ ಮಾರ್ಗದರ್ಶನ ಹಾಗೂ ಅಗತ್ಯದ ಪ್ರಕಾರ ಔಷಧೋಪಚಾರಗಳನ್ನು ಸಲಹೆಗಳನ್ನು ನೀಡಿದರು.
ಕೆ.ಪಿ.ಎಸ್.ವಿ.ಎಸ್. ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಹಾಗೂ ಆಸ್ಪತ್ರೆಯ ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು. ಸಿಬ್ಬಂದಿಗಳು ಇದ್ದರು.
ಮಾನ್ವಿ: ಪಟ್ಟಣದ ಕೆ.ಪಿ.ಎಸ್.ವಿ.ಎಸ್. ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ,ಆಸ್ಪತ್ರೆಯಲ್ಲಿ ಉಚಿತ ಮೂಲವ್ಯಾಧಿ ತಪಾಸಣೆ ಶಿಬಿರಕ್ಕೆ ಡಾ. ಜೀವೇಶ್ವರಯ್ಯ ಚಾಲನೆ ನೀಡಿದರು.

