ಮಸ್ಕಿ ತಾಲೂಕಿನ ಹಾಲಾಪೂರದ ಜನನಿ ಪದವಿ ಪೂರ್ವ ಕಾಲೇಜಿನಲ್ಲಿ ಭಾರತದ ಮೊದಲ ಮಹಿಳಾ ಶಿಕ್ಷಕಿ, ಶಿಕ್ಷಣದ ಪಿತಾಮಹಿ ಸಾವಿತ್ರಿಬಾಯಿ ಫುಲೆ ರವರ ಜನ್ಮದಿನಾಚರಣೆ ಕಾರ್ಯಕ್ರಮ ಮಾಡಲಾಯಿತು. ಸಾವಿತ್ರಿಬಾಯಿ ಫುಲೆ ರವರು ಸಮಾಜ ಸುಧಾರಕರಾಗಿ ಸೇವೆ ಸಲ್ಲಿಸಿದ ಕೊಡುಗೆಗಳು ಅಪಾರ, ವಿಶೇಷವಾಗಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಅತ್ಯಂತ ಉತ್ಸಾಹದಾಯಕವಾಗಿ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದರು, ಸತಿ ಪದ್ಧತಿ, ಬಾಲ್ಯ ವಿವಾಹ, ಅಸ್ಪೃಶ್ಯತೆ, ಜಾತಿ ತಾರತಮ್ಯದ ವಿರುದ್ಧ ಹೋರಾಡಿ ಸಮಾಜದಲ್ಲಿ ನ್ಯಾಯಕ್ಕಾಗಿ ದುಡಿದು ಅವಿರುತ ಶ್ರಮ ನೀಡಿ, ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿ ಸಾಮಾಜಿಕ ಅಂಕುಡೊಂಕುಗಳನ್ನು ಎದುರಿಸಿದ ಅಕ್ಷರಮಾತೆ ಸಾವಿತ್ರಿಬಾಯಿ ಬಾಪುಲೆ ಆದರ್ಶ ಪ್ರಾಯರು. ಈ ಸಂದರ್ಭದಲ್ಲಿ ಪ್ರಾಚಾರ್ಯ ನಾಗೇಶ ಜಂಗಮರಹಳ್ಳಿ, ಉಪನ್ಯಾಸಕರಾದ ಸಿದ್ದಾರ್ಥ್ ಪೊ.ಪಾ, ಮರಿಸ್ವಾಮಿ, ದುರಗೇಶ ಹಾಗೂ ವಿದ್ಯಾರ್ಥಿಗಳು ಇದ್ದರು.

