ರಾಯಚೂರು ಜನವರಿ 02 (ಕರ್ನಾಟಕ ವಾರ್ತೆ): ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಉದ್ಬಾಳ (ಯು) ಗ್ರಾಮದಲ್ಲಿ 3-1-2026ರಂದು ಜರುಗುವ ಶ್ರೀಅಂಬಾದೇವಿ ಪುರಾಣ ಮತ್ತು ಕಳಸ ಮೆರವಣಿಯನ್ನು ಸಾರ್ವಜನಿಕವಾಗಿ ಆಚರಿಸುವುದು ಹಾಗೂ ಮರವಣಿಗೆ ಮಾಡುವದನ್ನು ನಿಷೇಧಿಸಿರುವ ಆದೇಶವನ್ನು ಹಿಂಪಡೆಯಲಾಗಿದೆ ಎಂದು ಜಿಲ್ಲಾ ದಂಡಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ತಿಳಿಸಿದ್ದಾರೆ.

ಮಸ್ಕಿ ತಹಶೀಲ್ದಾರರು ದಿನಾಂಕ 31-12-2025 ರಂದು ಖುದ್ದಾಗಿ ಹಾಗೂ ಬಳಗಾನೂರು ಪಿ.ಎಸ್.ಐ. ಅವರೊಂದಿಗೆ ಬಳಗಾನೂರು ಠಾಣಾ ವ್ಯಾಪ್ತಿಯ ಉದ್ಬಾಳ ಗ್ರಾಮಕ್ಕೆ ತೆರಳಿ ಗ್ರಾಮದ ಹಿರಿಯ ಮುಖಂಡರು ಹಾಗೂ ಜನಗಳೊಂದಿಗೆ ಶಾಂತಿ ಸಭೆ ನಡೆಸಿ ಶ್ರೀ ಅಂಬಾದೇವಿ ಪುರಾಣ ಹಾಗೂ ಕಳಸ ಮರವಣಿಗೆ ಜರುಗುವ ಸಂದರ್ಭದಲ್ಲಿ ಯಾವುದೇ ಗಲಾಟೆಯಾಗದಂತೆ ಹಾಗೂ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ತಿಳಿ ಹೇಳಿದ್ದಾರೆ. ಜನ ಪ್ರತಿನಿಧಿಗಳ ಸಮ್ಮುಖದಲ್ಲಿ ಗ್ರಾಮದಲ್ಲಿನ ನಾನಾ ಪಕ್ಷಗಳ ಕಾರ್ಯಕರ್ತರಿಗೆ ಮನವೊಲಿಸಿ ಮುಖಂಡರಿಗೆ ಸದ್ವರ್ತನೆಯಿಂದಿರುವಂತೆ ಸೂಚಿಸಿದ್ದಾರೆ. ಉದ್ಬಾಳ (ಯು) ಗ್ರಾಮಸ್ಥರಿಂದ ಒಪ್ಪಿಗೆ ಪ್ರಮಾಣ ಪತ್ರವನ್ನು ಬರೆಸಿಕೊಳ್ಳಲಾಗಿದೆ. ಶಾಂತಿ ಒಪ್ಪಂದ ನಡೆಸಿ ಇಬ್ಬರ ಕಡೆಯಿಂದಲೂ ಒಪ್ಪಿತ ರೀತಿಯಲ್ಲಿ ಜಾತ್ರಾ ಮಹೋತ್ಸವ ನಡೆಸುವಂತೆ ಊರಿನ ಮುಖಂಡರ ಸಮ್ಮುಖದಲ್ಲಿ ಸಂಧಾನ ನಡೆಸಿ ಜಾತ್ರಾ ಮಹೋತ್ಸವ ನಡೆಸುವಂತೆ ತಿಳಿ ಹೇಳಲಾಗಿದೆ. ಆದ್ದರಿಂದ ಶ್ರೀ ಅಂಬಾದೇವಿಯ ಜಾತ್ರಾ ಮಹೋತ್ಸವ ನಡೆಸಲು ಸಾರ್ವಜನಿಕರ ಹಿತದೃಷ್ಟಿಯಿಂದ, ಈ ಗ್ರಾಮದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ, ಮುಂಜಾಗ್ರತಾ ಕ್ರಮದ ದೃಷ್ಟಿಯಿಂದ ದಿನಾಂಕ: 03-01-2026 ರಂದು ಜಾತ್ರಾ ಮಹೋತ್ಸವವನ್ನು ನಡೆಸುವಂತೆ ಅನುಮತಿ ನೀಡಲು ವರದಿಯನ್ನು ಸಲ್ಲಿಸಿರುತ್ತಾರೆ. ಆದ್ದರಿಂದ ಮಸ್ಕಿ ತಹಸೀಲ್ದಾರರ ವರದಿಯನ್ವಯ ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಉದ್ಬಾಳ (ಯು) ಗ್ರಾಮದಲ್ಲಿ ದಿನಾಂಕ: 03-01-2026 ರಂದು ಜರುಗುವ ಶ್ರೀ ಅಂಬಾದೇವಿ ಪುರಾಣ ಮತ್ತು ಕಳಸ ಮೆರವಣಿಯನ್ನು ಸಾರ್ವಜನಿಕವಾಗಿ ಗುಂಪು ಗುಂಪಾಗಿ ಆಚರಿಸುವುದು ಹಾಗೂ ಸಾರ್ವಜನಿಕವಾಗಿ ಮೆರವಣಿಗೆಯನ್ನು ನಡೆಸುವುದನ್ನು ನಿಷೇಧಿಸಿ ಹೊರಡಿಸಿದ ಆದೇಶವನ್ನು ಹಿಂಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ. ಜಿಲ್ಲಾ ಪೊಲೀಸ್ ಅಧೀಕ್ಷಕರು, ರಾಯಚೂರು ಮತ್ತು ತಹಶೀಲ್ದಾರ ಮಸ್ಕಿ ಅವರು ಯಾವುದೇ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಮುಂಜಾಗ್ರತಾ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳು ಆದೇಶದಲ್ಲಿ ಸೂಚಿಸಿರುತ್ತಾರೆ.

Leave a Reply

Your email address will not be published. Required fields are marked *