ರಾಯಚೂರು ಜನವರಿ 02 (ಕರ್ನಾಟಕ ವಾರ್ತೆ): ಶಕ್ತಿನಗರ ಪೊಲೀಸ್ ಠಾಣೆ ಗುನ್ನೆ ನಂ.38/2025 ಕಲಂ: ಮನುಷ್ಯ ಕಾಣೆ/ಗು.ನ:54/2025 ಕಲಂ: 137(2) ಬಿ.ಎನ್.ಎಸ್ ಪ್ರಕರಣದಲ್ಲಿ ಕಾಣೆಯಾದ/ಅಪಹರಣಕ್ಕೊಳಗಾದ ವ್ಯಕ್ತಿಯನ್ನು ಪತ್ತೆ ಮಾಡುವ ಕುರಿತು ರಾಯಚೂರು ಗ್ರಾಮೀಣ ವೃತ್ತದ ಆರಕ್ಷಕ ವೃತ್ತ ನಿರೀಕ್ಷಕರು ಪ್ರಕಟಣೆ ಹೊರಡಿಸಿದ್ದಾರೆ.

ಕಾಣೆಯಾದ/ಅಪಹರಣಕ್ಕೊಳಗಾದ ಜಮಶೇರ್ ಅಲಿ ತಂದೆ ಅಕ್ಟರ್ ಸಾಬ್ (ವಯಸ್ಸು 35) ಮುಸ್ಲಿಂ ಜಾತಿಗೆ ಸೇರಿದ್ದು, ಆರ್‌ಟಿಪಿಎಸ್‌ನಲ್ಲಿ ಟೇಕ್ನಿಷಿಯನ್ ಕೆಲಸ ಮಾಡುತ್ತಿದ್ದು, ಗೋಧಿ ಮೈಬಣ್ಣ, ಕೋಲು ಮುಖ ಚಹರೆ ಹೊಂದಿದ್ದಾನೆ. ಕೆಂಪು ಬಣ್ಣದ ಟಿ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾನೆ. ಹಿಂದಿ ಕನ್ನಡ ತೆಲುಗು ಮಾತನಾಡುತ್ತಾನೆ. 5.8 ಅಡಿ ಎತ್ತರ ಇದ್ದು, ತೆಳ್ಳನೆಯ ಮೈಕಟ್ಟು ಹೊಂದಿದ್ದಾನೆ. ಈತನ ಬಗ್ಗೆ ಸುಳಿವು ಸಿಕ್ಕಲ್ಲಿ

ಶಕ್ತಿನಗರ ಪೊಲೀಸ್ ಠಾಣೆ ಪಿಎಸ್‌ಐ ಮೊಬೈಲ್ ಸಂಖ್ಯೆ: 9480803868, ರಾಯಚೂರು ಗ್ರಾಮೀಣ ವೃತ್ತದ ಸಿಪಿಐ ಮೊಬೈಲ್ ಸಂಖ್ಯೆ: 9480803832ಗೆ ಸಂಪರ್ಕಿಸುವಂತೆ ಗ್ರಾಮೀಣ ವೃತ್ತದ ಆರಕ್ಷಕ ವೃತ್ತ ನಿರೀಕ್ಷಕರ ಕಚೇರಿಯ ಪ್ರಕಟಣೆ ತಿಳಿಸಿದೆ.

ಪ್ರಕರಣದ ಹಿನ್ನೆಲೆ: ದಿನಾಂಕ 10.10.2025 ರಂದು ರಾತ್ರಿ 11.00 ಗಂಟೆಗೆ ಮುಂದುವರೆದು ಪುನಃ ಫಿರ್ಯಾದಿರರಾದ ಶ್ರೀಮತಿ ಶಾಜಿಯಾ ಗಂಡ ಜೇಮಶೇರ್ ಅಲಿ, ವಯಾ: 30 ವರ್ಷ, ಜಾತಿ: ಮುಸ್ಲಿಂ, ಉ, ಮನೆಕೆಲಸ, ಸಾ: ಪಾರ್ವತಿ ನಗರ ದೇವಸ್ಗೂರು, ಇವರು ಠಾಣೆಗೆ ಹಾಜರಾಗಿ ಒಂದು ಲಿಖಿತ ದೂರನ್ನು ಹಾಜರು ಪಡಿಸಿ ಈ ಮೊದಲು ಫಿರ್ಯಾದಿದಾರರು ದಿನಾಂಕ: 22.06.2025 ರಂದು ತಮ್ಮ ಗಂಡ ಜೇಮಶೀರ ಅಲಿ ಕಾಣೆಯಾಗಿರುತ್ತಾನೆ ಅಂತಾ ನೀಡಿದ ದೂರಿನ ಮೇರೆಗೆ ಠಾಣಾ ಗುನ್ನ ಸಂಖ್ಯೆ ನಂ 38/2025 ಕಲಂ ಮನುಷ್ಯ ಕಾಣೆ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ನಂತರ ಫಿರ್ಯಾದಿದಾರರಿಗೆ ಸಾಕ್ಷಿದಾರರಿಂದ ಬಂದ ಮಾಹಿತಿಯ ಆಧಾರದ ಮೇಲಿಂದ ದಿನಾಂಕ: 20.06.2025 ರಂದು ರಾತ್ರಿ ಕಾಣೆಯಾದ ವ್ಯಕ್ತಿಯನ್ನು ಆರೋಪಿತನೇ ತನ್ನ ಬೈಕ್ ಮೇಲೆ ಕೃಷ್ಣಾ ನದಿಯ ಬ್ರಿಜ್ ಮೇಲೆ ಕುಡಿಯಲು ಕರೆದುಕೊಂಡು ಹೋಗಿದ್ದು ಇಬ್ಬರು ಕೂಡಿ ಕುಡಿದ ನಂತರ ಇದ್ದಕ್ಕಿದ್ದಂತೆ ಆರೋಪಿತನಿಗೆ ಕಾಣೆಯಾದ ವ್ಯಕ್ತಿ ಕಾಣಲಿಲ್ಲ ಅಂತಾ ಅಸಂಬದ್ಧವಾಗಿ ಮಾತಾನಾಡಿದ್ದರಿಂದ ಆರೋಪಿತನು ಯಾವುದೋ ದುರುದ್ದೇಶದಿಂದ ಕಾಣೆಯಾದ ವ್ಯಕ್ತಿಯನ್ನು ಅಪಹರಣ ಮಾಡಿಕೊಂಡು ಹೋಗಿದ್ದು ಈ ಆರೋಪಿತನ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ಕಾಣೆಯಾದ ವ್ಯಕ್ತಿಯನ್ನು ಹುಡುಕಿಕೊಡಲು ವಿನಂತಿ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಶ್ರೀ ನಾರಾಯಣ ಪಿ.ಎಸ್.ಐ. ಶಕ್ತಿನಗರ ಪೊಲೀಸ್ ಠಾಣೆ ಅವರು ಠಾಣಾ ಗುನ್ನೆ ಸಂಖ್ಯೆ 54/2025 ಕಲಂ-137(2) ಬಿ.ಎನ್.ಎಸ್ -2025 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. ಶಕ್ತಿನಗರ ಪೊಲೀಸ್ ಠಾಣೆ ಅಪರಾಧ ಸಂ.38/2025 ಕಲಂ:ಮನುಷ್ಯ ಕಾಣೆ ಹಾಗೂ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಗುನ್ನೆ ನಂ.54/2025 ಕಲಂ:137(2) ಬಿ.ಎನ್.ಎಸ್. ಪ್ರಕರಣದಲ್ಲಿ ಅಪಹರಣಕ್ಕೊಳಗಾದ ಜಮಶೇರ್ ಅಲಿ ತಂದೆ ಅಕ್ಟರ್ ಸಾಬ್, ವಯಾ: 35 ವರ್ಷ, ಉ: ಕೆಪಿಸಿಯಲ್ಲಿ ಟೇಕ್ನಿಷಿಯನ್, ಸಾ: ಪಾರ್ವತಿ ನಗರ ದೇವಸೂರು ಈತನಿಗೆ ಸಂಬಂಧಿಸಿದಂತೆ ಮಾನ್ಯ ಉಚ್ಚ ನ್ಯಾಯಾಲಯ ಕಲಬುರಗಿ ಅವರ ನ್ಯಾಯಾಲಯದಲ್ಲಿ ರಿಟ್ ಪಿಟಿಷನ್ ನಂ:ಡಬ್ಲ್ಯೂಯಪಿಎಚ್‌ಸಿ/0200017/2025 ರ ಪ್ರಕಾರ ಹೇಬಿಯಸ್ ಕಾರ್ಪಸ್ ಹಾಕಿಕೊಂಡಿದ್ದು, ಮಾನ್ಯ ನ್ಯಾಯಾಲಯವು ಸದರಿಯವರನ್ನು ಪತ್ತೆ ಮಾಡಿ ಕರೆತಂದು ಹಾಜರುಪಡಿಸುವಂತೆ ಆದೇಶಿಸಿದ್ದು ಇರುತ್ತದೆ. ಆದ್ದರಿಂದ ಕಾಣೆಯಾಗಿರುವ/ಅಪಹರಣಕ್ಕೊಳಗಾದ ಜಮಶೀರ್ ಅಲಿ ಈತನ ಪತ್ತೆ ಮಾಡುವ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದೆ ಎಂದು ರಾಯಚೂರು ಗ್ರಾಮೀಣ ವೃತ್ತದ ಆರಕ್ಷಕ ವೃತ್ತ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Leave a Reply

Your email address will not be published. Required fields are marked *