ಲಿಂಗಸಗೂರು : ಜ 3 .
ಜನರ ಆರೋಗ್ಯ ರಕ್ಷಣೆಯೇ ವೈದ್ಯರ ಕರ್ತವ್ಯ ಎಂಬ ನಿಟ್ಟಿನಲ್ಲಿ ಬೈಪಾಸ್ ರಸ್ತೆ, ಲಿಂಗಸಗೂರ ಪಟ್ಟಣದಲ್ಲಿ ರುವ ಸೋಹನ್ ಕುಮಾರ್ ಹಲ್ಲಿನ ದವಾಖಾನೆ ಇವರ ವತಿಯಿಂದ “ಜನರು–ಜನರಿಗಾಗಿ–ಜನರಿಗೋಸ್ಕರ ದಂತ ಸುರಕ್ಷಾ ಯೋಜನೆ”ಯನ್ನು ಜಾರಿಗೆ ತರಲಾಗಿದೆ ಎಂದು ದಂತ ವೈದ್ಯರಾದ ಡಾ. ಜಗನ್ನಾಥ ರವರು ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು .
ಅವರು ಕಳೆದ 10 ವರ್ಷಗಳಿಂದ ಲಿಂಗಸಗೂರು ವ್ಯಾಪ್ತಿಯಲ್ಲಿ ದಂತ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದು, 2026ರ ಹೊಸ ವರ್ಷದ ಪ್ರಯುಕ್ತ ಜನರಿಗೆ ಕೈಗೆಟುಕುವ ದರದಲ್ಲಿ ಉತ್ತಮ ದಂತಚಿಕಿತ್ಸೆ ಒದಗಿಸುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ ಎಂದರು.
ಈ ಯೋಜನೆಯಡಿ ಸಾರ್ವಜನಿಕರು ಕೇವಲ 3999 ರೂ. ಪಾವತಿಸಿ ದಂತ ಸುರಕ್ಷಾ ಕಾರ್ಡ್ ಪಡೆದುಕೊಂಡಲ್ಲಿ, ಸಾಮಾನ್ಯವಾಗಿ ಸಾವಿರಾರು ರೂಪಾಯಿ ವೆಚ್ಚವಾಗುವ ಹಲವು ದಂತಚಿಕಿತ್ಸೆಗಳನ್ನು ಉಚಿತವಾಗಿ ಪಡೆಯಬಹುದಾಗಿದೆ. “ಇನ್ನು ಹಲ್ಲುನೋವು ಇದ್ದರೂ ಹಣದ ಕೊರತೆಯಿಂದ ಚಿಕಿತ್ಸೆ ಮುಂದೂಡುವ ಪರಿಸ್ಥಿತಿ ಇರಬಾರದು. ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಲಭ್ಯವಿಲ್ಲದ ಕೆಲ ಚಿಕಿತ್ಸೆಗಳು ಈ ಯೋಜನೆಯಲ್ಲಿ ಸೇರಿವೆ” “ಈ ಯೋಜನೆ ಜನರ ಆರೋಗ್ಯದ ಭದ್ರತೆಗೆ ದೊಡ್ಡ ಸಹಾಯವಾಗಲಿದೆ. ಎಲ್ಲರೂ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು” ಎಂದು ಡಾ. ಜಗನ್ನಾಥ
ಪತ್ರಿಕಾ ಗೋಷ್ಠಿಯಲ್ಲಿ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು ಈ ಸಂದರ್ಭದಲ್ಲಿ ರಿಯಾಜ್ ಉಪಸ್ಥಿತರಿದ್ದರು

