ಮಾನ್ವಿ: ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕು ಆಡಳಿತ ಹಾಗೂ ವಿಶ್ವಕರ್ಮ ಸಮುದಾಯದ ವತಿಯಿಂದ ಅಮರ ಶಿಲ್ಪಿ ಜಕಣಾಚಾರಿ ಜಯಂತಿಯ ಅಂಗವಾಗಿ ಅಮರ ಶಿಲ್ಪಿ ಜಕಣಾಚಾರಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ತಹಸೀಲ್ದಾರ್ ಭೀಮರಾಯ ಬಿ.ರಾಮಸಮುದ್ರ ಮಾತನಾಡಿ ನಮ್ಮ ನಾಡಿನ ಹೆಸರಂತ ಶಿಲ್ಪ ಕಲೆಗಳ ನೆಲೆವೀಡಾಗಿರುವ ಬೇಲುರು ಹಾಗೂ ಹಳೆ ಬೀಡುಗಳಲ್ಲಿನ ಭವ್ಯವಾದ ಸುಂದರ ,ದೇವಸ್ಥಾನಗಳಲ್ಲಿ ಅಮರ ಶಿಲ್ಪಿ ಜಕಣಾಚಾರಿಯವರ ಅದ್ಬುತ ಕಲೆಯನ್ನು ನಾವು ಕಣಬಹುದಾಗಿದೆ ವಿಶ್ವಕರ್ಮ ಸಮುದಾಯದವರು ತಮ್ಮ ಪಂಚಕಲೆಗಳಿ0ದ ಜನರಿಗೆ ಅಗತ್ಯವಾದ ಸಲಕರಣೆಗಳನ್ನು ಹಾಗೂ ಸುಂದರವಾದ ಮೂರ್ತಿಗಳನ್ನು ನೀಡುತ್ತ ಬಂದಿದ್ದಾರೆ ವಿಶ್ವಕರ್ಮ ಸಮುದಾಯದವರು ತಮ್ಮ ಪರಂಪರಿಕವಾದ ಕಲೆಯಜೋತೆಗೆ ತಮ್ಮ ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ನೀಡುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವಿಶ್ವಕರ್ಮ ಸಮುದಾಯದ ಸಾಧಕರಾದ ದೇವರಾಜ ಆಚಾರ್ ಶಿಲ್ಪಿ ಸಂಗಪುರ, ಕಾಳಪ್ಪಚಾರ್ ಬಡಿಗೇರ ಮಾನ್ವಿ, ಅಯ್ಯಪ್ಪ ವಿಶ್ವಕರ್ಮ, ಶಿವಪ್ಪಚಾರ್ ವಿಶ್ವಕರ್ಮ, ಜಿ.ಸಿ, ಅಂಬ0ಣ್ಣಚಾರ್ ರವರನ್ನು ತಾಲೂಕು ಆಡಳಿತವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹಿದ್, ಗುಮ್ಮ ಬಸವರಾಜ, ವಿಶ್ವಕರ್ಮ ಸಮುದಾಯದ ಮುಖಂಡರಾದ ಮನೋಹರ್ ವಿಶ್ವಕರ್ಮ ವಕೀಲರು,ಮೋಹನಾಚಾರಿ, ವೀರೇಶಚಾರಿ, ಮೌನೇಶಚಾರಿ ಹಾಲ್ವಿ, ಸತೀಶ ಆಚಾರಿ, ಷಣ್ಮುಖಚಾರಿ, ಮಹೇಶಚಾರಿ, ಗವಿಯಪ್ಪಾಚಾರಿ, ಶ್ರೀಶೈಲಮಾಸ್ಟರ್,ಪಂಡುರ೦ಗ ವಿಶ್ವಕರ್ಮ, ಧನುಂಜಯ್ಯ ಆಚಾರಿ,ಗದ್ವಲ ವೇಂಕಟೇಶ,ಸೇರಿದ೦ತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದರು.

