ತಾಳಿಕೋಟಿ: ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನದ ಕೊರತೆ ಇದ್ದರೂ ಶಕ್ತಿಮೀರಿ ಪ್ರಯತ್ನಪಟ್ಟು ಅನುದಾನ ತಂದು ಮೂಲ ಸೌಕರ್ಯಗಳಿಗಾಗಿ ಆದ್ಯತೆ ನೀಡಿ ಕೆಲಸ ಮಾಡುತ್ತಿದ್ದೇನೆ ಉಳಿದ ಕಾರ್ಯಗಳನ್ನೂ ಹಂತ ಹಂತವಾಗಿ ಮಾಡುತ್ತೇನೆ ಅಭಿವೃದ್ಧಿ ಕಾರ್ಯಗಳಲ್ಲಿ ನನಗೆ ನಿಮ್ಮೆಲ್ಲರ ಸಹಕಾರದ ಅಗತ್ಯವಿದೆ ಎಂದು ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ(ಕು.ಸಾಲವಾಡಗಿ) ಹೇಳಿದರು. ಮಂಗಳವಾರ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ನೂತನ ಗ್ರಾಮ ಪಂಚಾಯತ್ ಕಾರ್ಯಾಲಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕ್ಷೇತ್ರದ ಅಭಿವೃದ್ಧಿ ಕಾರ್ಯಗಳನ್ನು ಕಾರ್ಯ ರೂಪದಲ್ಲಿ ತರಲು ಗ್ರಾಮ ಪಂಚಾಯತ್ ಪ್ರಮುಖ ಪಾತ್ರ ವಹಿಸುತ್ತದೆ, ಇಲ್ಲಿ ಸುಸಜ್ಜಿತವಾದ ಕಾರ್ಯಾಲಯ ನಿರ್ಮಾಣವಾಗಿದೆ ಇದರ ಮೂಲಕ ಅಭಿವೃದ್ಧಿ ಕಾರ್ಯಗಳಾಗಿ ಇದರ ವ್ಯಾಪ್ತಿಗೆ ಬರುವ ಗ್ರಾಮಗಳ ಜನರಿಗೆ ಅನಕೂಲವಾಗಬೇಕಾಗಿದೆ. ಕಾರ್ಯಾಲಯ ನಿರ್ಮಾಣಕ್ಕೆ ಭೂದಾನ ಮಾಡಿದ ದಿ.ತಿಮ್ಮವ್ವ ಯಮನಪ್ಪ ಮಸರಕಲ್ಲ ಹಾಗೂ ಅವರ ಕುಟುಂಬದ ಸದಸ್ಯರಿಗೆ ಅಭಿನಂದಿಸುತ್ತೇನೆ ಎಂದರು. ಕಾಂಗ್ರೆಸ್ ಮುಖಂಡ ಸುರೇಶಗೌಡಧಣಿ ನಾಡಗೌಡ ( ಬಿಂಜಲಭಾವಿ) ಮಾತನಾಡಿ ಪಂಚಾಯತ್ ಕಾರ್ಯಾಲಯಕ್ಕೆ ಭೂಮಿ ದಾನಮಾಡಿದ ದಾನಿಗಳು ಇಂದು ನಮ್ಮ ಮಧ್ಯೆ ಇಲ್ಲದಿದ್ದರೂ ಅವರನ್ನು ಸದಾ ಸ್ಮರಿಸುವಂತಹ ಕಾರ್ಯ ಮಾಡಿ ಹೋಗಿದ್ದಾರೆ, ಇಂದು ಸಮಾಜದಲ್ಲಿ ಶ್ರೀಮಂತರ ಕೊರತೆ ಇಲ್ಲ ಶ್ರೀಮಂತ ಮನಸ್ಸುಗಳ ಕೊರತೆ ಇದೆ. ಎಲ್ಲರೂ ಒಂದಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಅಗತ್ಯವಿದೆ ಎಂದರು. ಜೆಡಿಎಸ್ ಜಿಲ್ಲಾಧ್ಯಕ್ಷ ಬಸನಗೌಡ ಮಾಡಗಿ ಮಾತನಾಡಿ ಶಾಸಕ ರಾಜುಗೌಡರು ಆಯ್ಕೆಯಾದ ನಂತರ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ ಅವರೊಬ್ಬ ಸರಳ ಸಜ್ಜನ ರಾಜಕಾರಣಿ ಅವರು ಇನ್ನೂ ಹೆಚ್ಚಿನ ಕೆಲಸ ಮಾಡಲು ನಮ್ಮೆಲ್ಲರ ಸಹಕಾರ ಅವರಿಗೆ ಅಗತ್ಯವಿದೆ ಎಂದರು. ಪಿಡಿಒ ಪ್ರಭು ಚನ್ನೂರ ಪ್ರಾಸ್ತಾವಿಕವಾಗಿ ಮಾತನಾಡಿದರು.ಇದೇ ಸಂದರ್ಭದಲ್ಲಿ ಕಾರ್ಯಾಲಯಕ್ಕೆ ಭೂದಾನ ಮಾಡಿದ ದಿವಂಗತ ತಿಮ್ಮವ್ವ ಯಮನಪ್ಪ ಮಸರಕಲ್ಲ ಅವರ ಪುತ್ರಿ ಬಸಮ್ಮ ಯಮನಪ್ಪ ಮಸರಕಲ್ಲ ಇವರನ್ನು ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು. ತಾಪಂ ಇಓ ಅನಸೂಯಾ ಚಲವಾದಿ, ಗ್ರಾಪಂ ಅಧ್ಯಕ್ಷೆ ಸರೋಜಾಬಾಯಿ ಮ.ಮಸರಕಲ್ಲ, ಉಪಾಧ್ಯಕ್ಷೆ ಭರಮವ್ವ ಸಿ.ಕಾಳಗಿ, ಜೆಡಿಎಸ್ ತಾಲೂಕ ಅಧ್ಯಕ್ಷ ಮಡು ಸಾಹುಕಾರ ಬಿರಾದಾರ, ಪಿಕೆಪಿಎಸ್ ಅಧ್ಯಕ್ಷ ಶಿವಣ್ಣ ಕಲ್ಬುರ್ಗಿ, ಗ್ರಾಪಂ ಸದಸ್ಯ ಯಮನಪ್ಪ ಮಸರಕಲ್ಲ,ಜೆ.ಡಿ.ಎಸ್ ಜಿಲ್ಲಾ ಉಪಾಧ್ಯಕ್ಷ ಸಾಹೇಬಗೌಡ ಬಿರಾದಾರ(ಲಕ್ಕುಂಡಿ),ಸಂಗನಗೌಡ ಅಸ್ಕಿ, ಕರವೇ ಜಿ.ಸಂ.ಕಾರ್ಯದರ್ಶಿ ಜೈಭೀಮ್ ಮುತ್ತಗಿ, ಪ್ರಭುಗೌಡ ನಾಡಗೌಡ(ಶಳ್ಳಗಿ), ನಿಂಗನಗೌಡ ಬಿರಾದಾರ, ನಿಂಗಪ್ಪ ಕಲ್ಬುರ್ಗಿ, ಸಂಗಮೇಶ ದೇಸಾಯಿ, ವೀರೇಶ ಕಾರಗನೂರ, ಜಗನ್ನಾಥ್ ಮಸರಕಲ್ಲ, ಗ್ರಾಪಂ ಸದಸ್ಯರಾದ ಮಲ್ಲನಗೌಡ ಪಾಟೀಲ, ಸಾಬವ್ವ ಹರಿಜನ್, ಕರೇಮ್ಮ ಬಿರಾದಾರ, ಶಿವಶಂಕರ್ ಕಟ್ಟಿಮನಿ, ಭಾಗಿರತಿ ಬಿರಾದಾರ, ಜಂಗಮಯ್ಯ ಹಿರೇಮಠ, ಕಸ್ತೂರಿಬಾಯಿ ಹೆಬ್ಬಾಳ, ಶಂಕ್ರಮ್ಮ ರಂಜಣಗಿ, ಬಾಗಣ್ಣ ಮೇಟಿ, ಚೆನ್ನಮ್ಮ ನಾಟಿಕಾರ, ಕಾರ್ಯದರ್ಶಿ ಹಣಮಂತ್ರಾಯ ಚೌಧರಿ ಹಾಗೂ ತಾಪಂ ಸಿಬ್ಬಂದಿಗಳು ಇದ್ದರು. ಶಿಕ್ಷಕ ಸಿದ್ದು ಕರಡಿ ನಿರೂಪಿಸಿದರು.

Leave a Reply

Your email address will not be published. Required fields are marked *