ಮಸ್ಕಿ : ಮಸ್ಕಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಮಸ್ಕಿ ಪಟ್ಟಣದಲ್ಲಿ ವಕ್ಫ್ ಆಸ್ತಿಗಳ ದುರಸ್ತಿ ಜೀರ್ಣೋದ್ಧಾರ ಹಾಗೂ ನವೀಕರಣ ಸೇರಿದಂತೆ ಇನ್ನಿತರ ಕಾಮಗಾರಿಗಳಿಗೆ ರಾಜ್ಯ ಸರ್ಕಾರ ೭೦ ಲಕ್ಷ ಅನುದಾನ ಬಿಡುಗಡೆ ಮಾಡಿದೆ ಎಂದು ಗ್ಯಾರಂಟಿ ಯೋಜನೆಗಳ ಸಮಿತಿಯ ಅಧ್ಯಕ್ಷ ಮೈಬುಸಾಬ ಮುದ್ದಾಪೂರು ತಿಳಿಸಿದರು. ಈ ಕುರಿತು ಬುಧವಾರ ಪತ್ರಿಕಾ ಹೇಳಿಕೆ ನೀಡಿದ ಅವರು ಕ್ಷೇತ್ರದ ವಿವಿಧ ಗ್ರಾಮಗಳಲ್ಲಿರುವ ವಕ್ಫ್ ಅಸ್ತಿಗಳ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆ ಮಾಡುವಂತೆ ಶಾಸಕ ಆರ್. ಬಸನಗೌಡ ತುರ್ವಿಹಾಳ ಅವರು ಸರ್ಕಾರ ಹಾಟ್ಟ ಸಂಬಂಧಪಟ್ಟ ಇಲಾಖೆಯ ಸಚಿವರಿಗೆ ಅನುದಾನ ನೀಡುವಂತೆ ಒತ್ತಾಯಿಸಿದ್ದರು. ಶಾಸಕ ಒತ್ತಾಯದಂತೆ ಇದೀಗ ಮುಸ್ಲಿಂ ಸಮುದಾಯದ ವಕ್ಫ್ ಅಸ್ತಿಗಳ ಅಭಿವೃದ್ಧಿ ಕಾಮಗಾರಿಗಳಿಗೆ ಪಟ್ಟಣ ಸೇರಿದಂತೆ ಮುದ್ದಾಪೂರ, ಹಂಚಿನಾಳ(ಯು), ಸರ್ಜಾಪೂರು, ಕುಪ್ಪಿಗುಡ್ಡದಲ್ಲಿರುವ ಮಸ್ಜೀದ್‌ಗಳ ದುರಸ್ಥಿ ನವೀಕರಣಕ್ಕಾಗಿ ೭೦ಲಕ್ಷ ಹಣವನ್ನು ಬಿಡುಗಡೆ ಮಾಡಲಾಗಿದ್ದು, ಮಂಜೂರು ಮಾಡಲಾಗಿದೆ. ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಲು ಶ್ರಮ ವಹಿಸಿರುವ ಶಾಸಕ ಆರ್.ಬಸನಗೌಡ ತುರುವಿಹಾಳವರಿಗೆ ಸಮಾಜದ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಮೈಬೂಬ್ ಸಾಬ್ ಮುದ್ದಾಪು ತಿಳಿಸಿದರು.

