ಲಿಂಗಸಗೂರು : ಜ 1 ಜಿಲ್ಲೆಯ ಸುಪ್ರಸಿದ್ಧ ದೇವಸ್ಥಾನ ನಾಡಿನ ಆರಾಧ್ಯ ದೈವ ಶ್ರೀ ಅಮರೇಶ್ವರ ದೇವಸ್ಥಾನಕ್ಕೆ ನೂರಾರು ಭಕ್ತರು ವಿವಿಧ ಜಿಲ್ಲೆಗಳಿಂದ ಹಾಗೂ ಬೇರೆ ರಾಜ್ಯದ ಭಕ್ತರು ಸಹ ಶ್ರೀ ಅಮರೇಶ್ವರ ದರ್ಶನಕ್ಕಾಗಿ ಬರುತ್ತಾರೆ. ಆದರೆ ಸರಿಯಾದ ಬಸ್‌ಗಳ ವ್ಯವಸ್ಥೆ ಇಲ್ಲದೇ ಭಕ್ತರು ಪರದಾಡುವಂತಾಗಿದೆ. ಅಮರೇಶ್ವ ದೇವಸ್ಥಾನದ ಕ್ರಾಸ್ ಬಳಿ ಬಸ್ ನಿಲುಗಡೆ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ತಾಲೂಕ ಅಧ್ಯಕ್ಷ ಜಿಲಾನಿ ಪಾಷಾ ಕೆಕೆಆರ್‌ಟಿಸಿ ಘಟಕದ ಸಾರಿಗೆ ವ್ಯವಸ್ಥಾಪಕರಿಗೆ ಮನವಿಯನ್ನು ಸಲ್ಲಿಸಿ ನಂತರ ಮಾತನಾಡಿದ ಅವರು
ಪ್ರತಿನಿತ್ಯ ಭಕ್ತರು ಹರಸಾಹಸ ಪಟ್ಟು ದೇವಸ್ಥಾನಕ್ಕೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೇವಲ 2-3 ಬಸ್‌ಗಳಿದ್ದು, ವಿದ್ಯಾರ್ಥಿಗಳ ಶಾಲಾ ಕಾಲೇಜು ಸಮಯಕ್ಕೆ ಇರುತ್ತದೆ ನಂತರ ಇರುವುದಿಲ್ಲ. ಇದ್ದರು ಅದು ಸಹ ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ಭಕ್ತರು ಸುಲಭವಾಗಿ ದೇವರ ದರ್ಶನ ಭಾಗ್ಯವನ್ನು ಪಡೆಯುವಂತಾಗಲು ಉತ್ತಮವಾದ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕಾಗಿರುವುದು ಸರ್ಕಾರದ ಕರ್ತವ್ಯವಾಗಿದೆ.
ಜಿಲ್ಲೆಯ ಪ್ರಸಿದ್ಧ ದೇವಸ್ಥಾನವಾದ ಶ್ರೀ ಅಮರೇಶ್ವರ ದೇವಸ್ಥಾನ ಕ್ರಾಸ್ ಬಳಿ ಕಲ್ಯಾಣ ಕರ್ನಾಟಕದ ಎಲ್ಲಾ ಬಸ್‌ಗಳ ನಿಲುಗಡೆ ಮಾಡಬೇಕು ಹಾಗೂ ಕೆಲ ಬಸ್‌ಗಳನ್ನು ಶ್ರೀ ಕ್ಷೇತ್ರದಕ್ಕೆ ಹೋಗಿ ಬರುವಂತಹ ವ್ಯವಸ್ಥೆ ಕಲ್ಪಿಸಬೇಕು. ಇನ್ನು 15 ದಿನಗಳೊಳಗಾಗಿ ನಮ್ಮ ಮನವಿಗೆ ಸ್ಪಂದಿಸದಿದ್ದರೆ ಶ್ರೀ ಅಮರೇಶ್ವರ ಕ್ರಾಸ್ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಲಾಗುವುದು ಎಂದು ಒತ್ತಾಯಿಸಿದರು .ಈ ಸಂದರ್ಭದಲ್ಲಿ ತಾಲೂಕು ಉಪಾಧ್ಯಕ್ಷ ತಿಮ್ಮನಗೌಡ ಪೊಲೀಸ್‌ ಪಾಟೀಲ್‌, ರವಿಕುಮಾರ ಬರಗುಡಿ, ಅಜೀಜ್ ಪಾಶಾ, ಮೊಸೀನ್ ಖಾನ್, ಅಲ್ಲಾದ್ದೀನ್ ಬಾಬಾ, ತಿಮ್ಮನಗೌಡ, ಬಸನಗೌಡ, ಮಲ್ಲಣ್ಣ, ಮಾರೆಪ್ಪ, ರಹೀಮ್, ಹರೀಫ್‌, ಪ್ರಭುಗೌಡ, ರಾಜು, ನಾಗರಾಜ, ಖಾಸೀಂಸಾಬ, ನಬೀಸಾಬ, ವೀರೇಶ ಹೀರೆಮಠ ಸೇರಿದಂತೆ ಹಲವರು ಇದ್ದರು

Leave a Reply

Your email address will not be published. Required fields are marked *