ಮಸ್ಕಿ :-ಬುದುವಾರ ಬೆಳಿಗ್ಗೆ ಮಸ್ಕಿಯ ದೇವನಾಂಪ್ರಿಯ ಅಶೋಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಫಂಕ್ಷನ್ ಹಾಲ್ ನಲ್ಲಿ ಆಯೋಜಿಸಲಾಗಿದ್ದ 2025-26 ನೇ ಸಾಲಿನ ಬಿ,ಎ,ಬಿ,ಕಾಮ್,ಬಿ,ಎಸ್,ಸಿ, ಮತ್ತು ಎಮ್,ಎ,ಎಮ್,ಕಾಮ್,ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೆ,ಮರಿಯಮ್ಮನ ಹಳ್ಳಿಯ j,m,j,ಪ್ರೌಢಶಾಲೆಯ ಶಿಕ್ಷಕ ರಹೆಮಾನಸಾಬ್ ನದಾಫ್ ಹೆತ್ತವರ ಋಣ ಯಾರಿಂದಲೂ ತೀರಿಸಲಾಗದು ಅವರ ಒಡಲನ್ನು ನೋಯಿಸದಿರಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತನ್ನು ಹೇಳಿದರು.
ಉದ್ಘಾಟಕರಾಗಿ ಆಗಮಿಸಿದ್ದ ಶಾಸಕ ಆರ್,ಬಸನಗೌಡ ತುರುವಿಹಾಳ್ ಮಾತನಾಡಿ ನೀವು ವಿದ್ಯಾರ್ಜನೆ ಮಾಡಿ ಹೆತ್ತವರಿಗೆ ಉಪನ್ಯಾಸಕರಿಗೆ ಕೀರ್ತಿ ತಂದು ಉತ್ತಮ ಪ್ರಜೆಗಳಾಗಿ ಬದುಕಬೇಕು ಅಂದಾಗ ಮಾತ್ರ ನಿಮ್ಮ ಜೀವನ ಸಾರ್ಥಕವಾಗುತ್ತದೆಂದರು.
ಅಧ್ಯಕ್ಷೀಯ ನುಡಿಗಳನ್ನಾಡಿದ ಕಾಲೇಜಿನ ಪ್ರಾಂಶುಪಾಲ ಡಾ,ಮಹಾಂತಗೌಡ ಪಾಟೀಲ್ ಇದು ನಿಮ್ಮ ಬದುಕಿನ ಪರಿವರ್ತನಾ ಕೇಂದ್ರ ಇಲ್ಲಿ ಕಲಿತ ಜ್ಞಾನ ನಿಮ್ಮ ಜೀವನ ಮತ್ತು ಸಮಾಜದ ಪರಿವರ್ತನೆಗೆ ಸಾಧನವಾಗುತ್ತದೆ, ಜವಬ್ದಾರಿಯನ್ನರಿತು ವಿದ್ಯಾಭ್ಯಾಸ ಮಾಡಿ ಉತ್ತಮ ಪ್ರಜೆಗಳಾಗಿ ಎಂದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಅನಿಸಿಕೆಗಳನ್ನು ವ್ಯಕ್ತಪಡಿಸಿದರು, ನಂತರ ಶಾಸಕರಿಗೆ ಅತಿಥಿ ಉಪನ್ಯಾಸಕರ ಸಂಘದಿಂದ ಉದ್ಯೋಗ ಭದ್ರತೆ ನೀಡುವಂತೆ ಒತ್ತಾಯಿಸಿ ಚಳಿಗಾಲದ ಅಧಿವೇಷನದಲ್ಲಿ ಧ್ವನಿ ಎತ್ತುವಂತೆ ಒತ್ತಾಯಿಸಿ ಮನವಿಪತ್ರವನ್ನು ನೀಡಲಾಯಿತು.
ನಂತರ ಸ್ನಾತಕೋತ್ತರ ಪದವಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿನಿಯರಿಗೆ ಗೌರವ ಸನ್ಮಾನ ಮಾಡಲಾಯಿತು.
ಅದೇ ವೇಧಿಕೆಯಲ್ಲಿ ಶಾಸಕರಿಗೆ ಮುಖ್ಯ ಅತಿಥಿಗಳಿಗೆ ಮತ್ತು ವರ್ಗಾವಣೆಗೊಂಡ ಮತ್ತು ಹೊಸದಾಗಿ ಕಾಲೇಜಿಗೆ ಆಗಮಿಸಿದ ಸಹಾಯಕ ಮತ್ತು ಸಹಪ್ರಾಧ್ಯಾಪಕರಿಗೆ,ಅಧೀಕ್ಷಕರಿಗೆ, ಸನ್ಮಾನಿಸಲಾಯಿತು.
ನಂತರ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ವೇಧಿಕೆಯ ಮೇಲೆ ಶಾಸಕ ಆರ್,ಬಸನಗೌಡ ತುರುವಿಹಾಳ್,ಪ್ರಾಂಶುಪಾಲ ಡಾ,ಮಹಾಂತಗೌಡ ಪಾಟಿಲ್,ಮುಖ್ಯ ಅತಿಥಿ ರಹೆಮಾನಸಾಬ್ ನದಾಫ್,ಸಹ ಪ್ರಾಧ್ಯಾಪಕ ರಾಮಣ್ಣ ಜುಮ್ಮಾ,ಬಸವರಾಜ ತಡಕಲ್,ಸಹಾಯಕ ಪ್ರಾಧ್ಯಾಪಕ ಇಮಾಮ್ ಸಾಬ್,ಯಾಳಗಿ ಶ್ರೀನಿವಾಸ,ಸುರೇಶ ಬಳಗಾನೂರು ಇದ್ದರು.
ಈ ಸಂದರ್ಭದಲ್ಲಿ ಸಹಾಯಕ ಪ್ರಾಧ್ಯಾಪಕ,ಪ್ರಾಧ್ಯಾಪಕಿಯರು,ಅತಿಥಿ ಉಪನ್ಯಾಸಕ,ಉಪನ್ಯಾಸಕಿಯರು, ವಿದ್ಯಾರ್ಥಿಗಳು,ಬೋಧಕೇತರ ಸಿಬ್ಬಂಧಿ ವರ್ಗದವರಿದ್ದರು

Leave a Reply

Your email address will not be published. Required fields are marked *