ಸಿಂಧನೂರು ಡಿಸೆಂಬರ. 30 : ಸಿಂಧನೂರು ತಾಲೂಕಿನ ಸಮೀಪದ ಅರಗಿನ ಮರ ಕ್ಯಾಂಪ್ ನಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರು ಪ್ರಾಥಮಿಕ ಆರೋಗ್ಯ ಕೇಂದ್ರ ಜವಳಗೇರಾ ಮತ್ತು ಆರೋಗ್ಯ ಮತ್ತು ಕ್ಷೇಮ ಮಂದಿರ ಅರಗಿನ ಮರ ಇವರ ಸಂಯುಕ್ತ ಆಶ್ರಯದಲ್ಲಿ ಅರಗಿನ ಮರ ಕ್ಯಾಂಪ್ ನಲ್ಲಿ ಚಳಿಗಾಲದಲ್ಲಿ ಮಕ್ಕಳಲ್ಲಿ ಕಂಡುಬರುವ ನ್ಯೂಮೊನಿಯಾ ಕಾಯಿಲೆ ಕುರಿತು ಅಂಗನವಾಡಿ ಕೇಂದ್ರದಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮದ ಕುರಿತು ಹಮ್ಮಿಕೊಳ್ಳಲಾಗಿತ್ತು ನಂತರ ಮಾತನಾಡಿದ
ಕ್ಷೇತ್ರ ಆರೋಗ್ಯ ಶಿಕ್ಷಣಧಿಕಾರಿ ಬಾಲಪ್ಪ ನಾಯಕ ಅವರು ಮಾತನಾಡಿ ಚಳಿಗಾಲದಲ್ಲಿ ಹೆಚ್ಚಾಗಿ ಮಕ್ಕಳಲ್ಲಿ ನಿರಂತರ ಜ್ವರ ಕೆಮ್ಮು ಹಾಗೂ ಕಫ ಕಟ್ಟುವುದು ಮಕ್ಕಳಲ್ಲಿ ನ್ಯೂಮೋನಿಯಾ ಖಾಯಿಲೆಗೆ ಕಾರಣವಾಗುತ್ತದೆ ನ್ಯೂಮೋನಿಯಾ ತಡೆಗಟ್ಟಲು ರಕ್ಷಣೆ ಮತ್ತು ತಡೆಗಟ್ಟುವ ಚಿಕಿತ್ಸೆ ಮುಖ್ಯವಾಗಿದೆ ಮಗುವಿಗೆ ನ್ಯೂಮೊನಿಯಾ ಬರೆದ ಹಾಗೆ ಆರು ತಿಂಗಳವರೆಗೆ ಪೌಷ್ಟಿಕವಾಗಿರುವಂತ ಎದೆಹಾಲನ್ನು ಮಗುವಿಗೆ ಕೊಡಬೇಕಾದದ್ದು ಮುಖ್ಯವಾಗಿದೆ ಚಳಿಗಾಲದಲ್ಲಿ ಮಕ್ಕಳಿಗೆ ಶೀತ ಹೆಚ್ಚಾಗದಂತೆ ಬೆಚ್ಚನೆಯ ಉಡುಪುಗಳನ್ನು ಧರಿಸಬೇಕು ಚಳಿಯಿಂದ ಮಕ್ಕಳ ರಕ್ಷಣೆ ಮತ್ತು ಆರೈಕೆ ಮುಖ್ಯವಾಗಿದೆ ಮಕ್ಕಳಲ್ಲಿ ತೀವ್ರ ಉಸಿರಾಟದ ತೊಂದರೆಗಳು ಪಕ್ಕೆ ಸೆಳೆತಾ ಬಾಯಿಯಿಂದ ಉಸಿರಾಟದ ಪ್ರಾರಂಭ ಮಗುವಿಗೆ ಮೇಲಿಂದ ಮೇಲೆ ಜ್ವರ ಬರುವುದು ಇಂತಹ ಲಕ್ಷಣಗಳು ಕಂಡುಬಂದರೇ ಕೊಡಲೆ ಹತ್ತಿರದ ತಜ್ಞ ವೈದ್ಯರಲ್ಲಿ ಚಿಕಿತ್ಸೆ ಕೊಡಿಸಲು ಮರೆಯದಿರಿ ಹಾಗೂ ಮಕ್ಕಳಿಗೇ ಬಾಲ್ಯವಸ್ಥೆಯಲ್ಲಿ ಬರಬಹುದಾದ ಖಾಯಿಲೆಗಳಿಂದ ತಪ್ಪಿಸಲು ಮಕ್ಕಳಿಗೆ ವಯಸ್ಸಿಗೆ ಅನುಗುಣವಾಗಿ ಎಲ್ಲಾ ಲಸಿಕೆಯನ್ನು ಕೊಡಿಸಬೇಕು ಎಂದು ತಿಳಿಸಿದರು.
ನಂತರದಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿಗಳು ನಿಂಗಮ್ಮ ಅವರು ಮಾತನಾಡುತ್ತಾ ಮಕ್ಕಳಲ್ಲಿ ನೆಗಡಿ ಜ್ವರ ಕೆಮ್ಮು ಮತ್ತು ಕಫ್ ಕಟ್ಟುವಿಕೆ ನ್ಯೂಮೋನಿಯಾ ಕಾಯಿಲಿಗೆ ತುತ್ತಾಗುವ ಸಾಧ್ಯತೆ ಹೆಚ್ಚು. ಅದಕ್ಕಾಗಿ ಪಾಲಕರು ಮಕ್ಕಳಿಗೆ ತಪ್ಪದೇ ಎದೆ ಹಾಲು ಕೊಡುವುದನ್ನು ಮುಂದುವರಿಸಿ ದ್ರವರೂಪದ ಪೌಷ್ಟಿಕ ಆಹಾರವನ್ನು ನೀಡುವ ಮೂಲಕ ಮಕ್ಕಳ ಆರೋಗ್ಯವನ್ನು ಪೌಷ್ಟಿಕ ಅಹಾರವನ್ನು ನೀಡುವ ಕಾಪಾಡುವದು ಮುಖ್ಯವಾಗಿದೆ. ಎಂದರು.
ಈ ಸಂದರ್ಭದಲ್ಲಿ ಬಸವಂತಮ್ಮ ಮತ್ತು ರೂಪಾ ಅಂಗನವಾಡಿ ಕಾರ್ಯಕರ್ತರಾದ . ಆಶಾ ಕಾರ್ಯಕರ್ತರಾದ ಮಹೇಶ್ವರಿ.ಮಕ್ಕಳ ತಾಯಂದಿರು ಉಪಸ್ಥಿತರಿದ್ದರು


