ಹಟ್ಟಿ ಚಿನ್ನದ ಗಣಿ: ಡಿ 29
ಹಟ್ಟಿ ಚಿನ್ನದ ಗಣಿ ಸಮೀಪದ ಹಿರೇನಗನೂರಿನ ಕುವೆಂಪು ಗ್ರಂಥಾಲಯದಲ್ಲಿ.ಸಮಾನ ಮನಸ್ಕರ ವೇದಿಕೆ,ಹಾಗು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಲ್ ಕೆ ಜಿ,ಯು ಕೆ ಜಿ ಇಂಗ್ಲೀಷ್ ಮೀಡಿಯಂ ಮಕ್ಕಳ ಜೊತೆ ಇಂದು ರಾಷ್ಟ್ರಕವಿ ಕುವೆಂಪು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರ ಹುಟ್ಟುಹಬ್ಬವನ್ನು ವಿಶ್ವಮಾನವ ದಿನವಾಗಿ ಆಚರಿಸಲಾಯಿತು.
ಹಾಗೂ ನಮ್ಮೂರಿನ ಯುವ ನಾಯಕರಾದ ಶಿವನಗೌಡ ಪಾಟೀಲ್ ನಗರ್ ರವರ ಹುಟ್ಟುಹಬ್ಬವನ್ನು ಮುದ್ದು ಮಕ್ಕಳ ಜೊತೆ ಇದೇ ಸಂದರ್ಭದಲ್ಲಿ ಆಚರಿಸಲಾಯಿತು.

ರಾಷ್ಟ್ರಕವಿ ಕುವೆಂಪುರವರ ಜನ್ಮ ದಿನಾಚರಣೆ ಕುರಿತು ಮಾತನಾಡಿದ.
ನಮ್ಮೂರಿನ ಯುವ ಮಿತ್ರ ಮೌನುದ್ದೀನ್ ಬೂದಿನಾಳ ಮಾತನಾಡಿ.
ಕುವೆಂಪು ರವರು 21ನೇ ಶತಮಾನ ಕಂಡ ಅದ್ಭುತ ಕವಿಗಳಲ್ಲಿ ಒಬ್ಬರು.ವರಕವಿ ಬೇಂದ್ರೆಯವರಿಂದ ಯುಗದ ಕವಿ,ಜಗದ ಕವಿ, ಎನಿಸಿಕೊಂಡಿರುವ ವಿಶ್ವಮಾನವ ಸಂದೇಶ ನೀಡಿದವರು ಕನ್ನಡದ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದವರು ಅವರೇ ನಮ್ಮ ರಾಷ್ಟ್ರಕವಿ ಕುವೆಂಪು.
ಅವರ ಹುಟ್ಟುಹಬ್ಬವಾದ
ಡಿಸೆಂಬರ್ 29 ಅವರ ಜನ್ಮದಿನಾಚರಣೆಯನ್ನು ವಿಶ್ವ ಮಾನವ ದಿನಾಚರಣೆಯಾಗಿ ಆಚರಿಸಲು ಮುಖ್ಯ ಕಾರಣ, ಕುವೆಂಪು ಅವರು ಸಾರಿದ ‘ಮನುಜ ಮತ ವಿಶ್ವಪಥ’ ಎಂಬ ವಿಶ್ವ ಮಾನವ ಸಂದೇಶದ ಗೌರವಾರ್ಥ.ಎಲ್ಲಾ ಮಾನವರು ಭಾಷೆ,ಧರ್ಮ,ಜಾತಿ,ವರ್ಣಗಳ ಗಡಿಗಳನ್ನು ಮೀರಿ ಒಂದೇ ವಿಶ್ವ ಕುಟುಂಬದ ಸದಸ್ಯರು ಎಂಬ ಕುವೆಂಪು ಅವರ ಆದರ್ಶವನ್ನು ಪಸರಿಸಲು ಕರ್ನಾಟಕ ಸರ್ಕಾರವು 2015 ರಲ್ಲಿ ಡಿಸೆಂಬರ್ 29 ರಂದು ಇದನ್ನು ಅಧಿಕೃತವಾಗಿ ಘೋಷಿಸಿತು.ಶಿಕ್ಷಣದ ಮೂಲಕ ವಿಶ್ವವನ್ನು ಒಂದುಗೂಡಿಸುವ ಅವರ ಆಶಯವನ್ನು.ಶಾಲಾ-ಕಾಲೇಜುಗಳಲ್ಲಿ ಪಠನ ಮತ್ತು ವಿಚಾರ ಸಂಕೀರ್ಣದ ಮೂಲಕ ಮುಂದಿನ ಪೀಳಿಗೆಗೆ ನಾವು ಅವರ ವಿಚಾರವನ್ನು ತಲುಪಿಸುವಂತಹ ಕೆಲಸ ಮಾಡಬೇಕು ಎಂದು ಮಾತನಾಡಿದರು.
ನಂತರ ಮುದ್ದು ಮಕ್ಕಳಿಗೆ ಕೇಕ್ ಮತ್ತು ಚಾಕ್ಲೇಟ್ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಶಿವನಗೌಡ ಪಾಟೀಲ್ ನಗರ್,ಅಬ್ರಹಾಮ್ ಸಲಬೂರು,ಮೌನುದ್ದೀನ್ ಬೂದಿನಾಳ,ಎಸ್ ಡಿ ಎಂ ಸಿ ಉಪಾಧ್ಯಕ್ಷ ಕನಕಪ್ಪ,ವಿಘ್ನೇಶ್ ಪತ್ರಕರ್ತರು,ಚನ್ನು ಹುಬ್ಬಳ್ಳಿ,ದೇವಪ್ಪ ಹುಬ್ಬಳ್ಳಿ,ಯಮನು ಹುಬ್ಬಳ್ಳಿ,ಮರಿಯಾ ಟೀಚರ್,ರೇಣುಕಾ ಸಹಾಯಕಿ ಹಾಗೂ ಮುದ್ದು ಮಕ್ಕಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *