ಜವಳಗೆರೆ : ಡಿ 29 ಗ್ರಾಮದಲ್ಲಿ ಅಬಕಾರಿ ಸಚಿವ ಆರ್. ಬಿ. ತಿಮ್ಮಾಪುರ ಅವರಿಗೆ ಗೌರವ ಸನ್ಮಾನ
ಕಾರ್ಯಕ್ರಮದ ನಿಮಿತ್ತ ರಾಯಚೂರಿಗೆ ಆಗಮಿಸಿ, ಸಿಂಧನೂರು ನಗರದ ಕಡೆಗೆ ಪ್ರಯಾಣ ಬೆಳೆಸುತ್ತಿದ್ದ ಕರ್ನಾಟಕ ಸರಕಾರದ ಅಬಕಾರಿ ಸಚಿವರಾದ ಆರ್. ಬಿ. ತಿಮ್ಮಾಪುರ ಅವರಿಗೆ ದಾರಿ ಮಧ್ಯದಲ್ಲಿ ಜವಳಗೆರೆ ಗ್ರಾಮ ಅಂಬೇಡ್ಕರ್ ಮೈದಾನದ ಹತ್ತಿರ ಭವ್ಯ ಸ್ವಾಗತ ಹಾಗೂ ಗೌರವ ಸನ್ಮಾನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಶ್ರೀ ಆರೋಗ್ಯಪ್ಪ, ದಲಿತ ಸಂಘಟನೆಯ ಮುಖಂಡರಾದ ಜಾನಪ್ಪ, ದೊಡ್ಡಮನಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಅಯ್ಯಪ್ಪ ದೊಡ್ಡಮನಿ, ರಮೇಶ್ ಮಾಸ್ಟರ್ , ರಮೇಶ್ ತಂದೆ ಯಮುನಪ್ಪ, ಪ್ರಸಾದ್, ಪುನೀತ್ ಸೇರಿದಂತೆ ಇತರರು ಸಚಿವರಿಗೆ ಶಾಲು ಹಾರ ಹಾಕಿ ಗೌರವ ಸಮರ್ಪಿಸಿದರು.
ಅದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ದಲಿತ ನಾಯಕರಾದ ಬಾಲಸ್ವಾಮಿ ಕೊಡ್ಲಿ ಅವರಿಗೂ ಗೌರವ ಸನ್ಮಾನ ಸಲ್ಲಿಸಿ, ಅವರ ಸಾಮಾಜಿಕ ಸೇವೆ ಹಾಗೂ ಸಂಘಟನಾ ಕಾರ್ಯವನ್ನು ಪ್ರಶಂಸಿಸಲಾಯಿತು.

