ಮಾನ್ವಿ: ಪಟ್ಟಣದ ವಿವಿಧ ವಾರ್ಡಗಳಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ರಾಜ್ಯ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು ಶನಿವಾರ ರಾತ್ರಿ ಪರಿಶೀಲಿಸಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿ ಮಾನ್ವಿ ಪಟ್ಟಣದಲ್ಲಿನ ನಿವಾಸಿಗಳಿಗೆ ಶುದ್ದ ಕುಡಿಯುವ ನೀರು ಪೂರೈಕೆಗಾಗಿ ಕೈಗೊಳ್ಳಲಾದ ಅಮೃತ-2 ಯೋಜನೆಯನ್ನು ನಿಗದಿತ ಅವಧಿಯೋಳಗೆ ಪೂರ್ಣಗೊಳಿಸಬೇಕು ಹಾಗೂ ಬೇಸಿಗೆಯಲ್ಲಿ ಪಟ್ಟಣದ ಜನರಿಗೆ ಕುಡಿಯುವ ನೀರಿನ ತೊಂದರೆ ಉಂಟಾಗದAತೆ ಶೀಘ್ರವೇ ಕಾಮಗಾರಿಯನ್ನು ಪೂರ್ಣಗೊಳ್ಳಿಸಿ ಪಟ್ಟಣದ ಪ್ರತಿ ಮನೆಗೂ ಕೂಡ ಕುಡಿಯುವ ನೀರಿನ ಸಂಪರ್ಕ ನಳಗಳನ್ನು ಜೋಡಿಸುವುದಕ್ಕೆ ಕ್ರಮ ಕೈಗೊಳ್ಳುವುದಕ್ಕೆ ಗುತ್ತೆದಾರರಿಗೆ ಅಗತ್ಯ ಸೂಚನೆ ನೀಡುವಂತೆ ಕರ್ನಾಟಕ ಕುಡಿಯುವ ನೀರು ಸರಬರಾಜು ಮಂಡಳಿಯ ಅಧಿಕಾರಿ ಚೌಹಾಣ್ ರವರಿಗೆ ಸೂಚನೆ ನೀಡಿದರು ಹಾಗೂ ವಿವಿಧ ಇಲಾಖೆಯ ಪ್ರಗತಿ ಪರಿಶೀಲಿಸಿ ಅಗತ್ಯ ಸೂಚನೆ ಗಳನ್ನು ನೀಡಿದರು.
ಸಭೆಯಲ್ಲಿ ಶಾಸಕ ಹಂಪಯ್ಯನಾಯಕ, ತಹಸೀಲ್ದಾರ್ ಭೀಮರಾಯ ಬಿ.ರಾಮಸಮುದ್ರ. ಪುರಸಭೆ ಮುಖ್ಯಾಧಿಕಾರಿ ಪರಶುರಾಮ್ ದೇವಮಾನೆ ಹಾಗೂ ಲ್ಯಾಂಡ್ ಆರ್ಮಿ ಅಧಿಕಾರಿಗಳಾದ ಹನುಮಂತಪ್ಪ ಹಾಗೂ ದೇವರಾಜ್, ಕರ್ನಾಟಕ ಕುಡಿಯುವ ನೀರು ಸರಬರಾಜು ಮಂಡಳಿಯ ಅಧಿಕಾರಿ ಚೌಹಾಣ್, ನಯೋಪ್ರ ತಾ.ಅಧ್ಯಕ್ಷರಾದ ಅಬ್ದುಲ್ ಗಪೂರ್ ಸಾಬ್, ತಾಲೂಕು ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಬಿ.ಕೆ. ಅಂಬರೇಶಪ್ಪ ವಕೀಲರು, ಪುರಸಭೆಯ ಸದಸ್ಯರಾದ ಕಾಮೇಶ್ ಮಂದಕಲ್, ಅಮ್ಜದ್ ಖಾನ್, ಶೇಕ್ ಫಾರೀದ ಉಮ್ರಿ, ಎಸ್ .ಎಸ್. ಪಾಷಾ, ಮೌಲಾಲಿ ನಾಯ್ಕ್, ಎಂ.ಡಿ. ಮೆಹಮ್ಮದ್, ಹೆಚ್.ಪಿ.ಎಂ.ಬಾಷಾ, ಸಾಬೀರ್ ಹುಸೇನ್, ಮುಖಂಡರಾದ ಸತ್ತಾರ್ ಬಂಗ್ಲೆವಲೆ, ಜಯಪ್ರಕಾಶ್, ರಾಮಕೃಷ್ಣ, ಜಿಲಾನಿ ಖುರೇಶಿ, ಹಂಪಯ್ಯ ನಾಯಕ್ ಬೆಳಗಿನಪೇಟ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು
28-ಮಾನ್ವಿ-4:
ಮಾನ್ವಿ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ರಾಜ್ಯ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜುರವರು ವಿವಿಧ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದರು.

Leave a Reply

Your email address will not be published. Required fields are marked *