ಕವಿತಾಳ: ಮಾನ್ವಿ ತಾಲೂಕ ವಾಲ್ಮೀಕಿ ಮಹಾಸಭೆಯ ಅಧ್ಯಕ್ಷರಾಗಿ ದೇವೇಂದ್ರ ನಾಯಕ ಆಯ್ಕೆಯಾದ ಪ್ರಯುಕ್ತ ಅಧ್ಯಕ್ಷರು ಮಾನ್ವಿ ಪಟ್ಟಣದ ನೆರಳು ಅನಾಥಾಶ್ರಮ ಭೇಟಿ ನೀಡಿ, ಅಲ್ಲಿನ ನಿರಾಶ್ರಿತರು ಹಾಗೂ ಬಡವರಿಗೆ ಹಣ್ಣು–ಹಂಪಲು ಮತ್ತು ಒಂದು ಊಟದ ವ್ಯವಸ್ಥೆ ಮಾಡಿದರು.
ಈ ಸಂದರ್ಭದಲ್ಲಿ ಆಶ್ರಮದಲ್ಲಿರುವ ವೃದ್ಧರು, ಅನಾಥರು ಮತ್ತು ದೈನಂದಿನ ಕಷ್ಟದಲ್ಲಿರುವವರಿಗೆ ಆಹಾರ ವಿತರಣೆ ಮಾಡಲಾಗಿದ್ದು, ಮಾನವೀಯ ಮೌಲ್ಯಗಳನ್ನು ಸಮಾಜಕ್ಕೆ ತಲುಪಿಸುವ ಕಾರ್ಯವಾಗಿದೆ ಎಂದು ಪ್ರಶಂಸಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ವಾಲ್ಮೀಕಿ ಮಹಾಸಭೆಯ ಅಧ್ಯಕ್ಷರು ದೇವೇಂದ್ರ ನಾಯಕ, “ಸಾಮಾಜಿಕ ಸೇವೆಯೇ ನಮ್ಮ ಸಂಘಟನೆಯ ಮುಖ್ಯ ಗುರಿ. ಸಮಾಜದ ಕೊನೆಯ ವ್ಯಕ್ತಿಗೂ ನೆರವು ತಲುಪಿಸುವ ಹೊಣೆಗಾರಿಕೆ ನಮ್ಮದು. ಮುಂದಿನ ದಿನಗಳಲ್ಲಿ ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಇನ್ನಷ್ಟು ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು” ಎಂದು ತಿಳಿಸಿದರು.
ನೆರಳು ಆಶ್ರಮದ ನಿರ್ವಾಹಕರು, ಆಶ್ರಮದ ನಿವಾಸಿಗಳ ಪರವಾಗಿ ಮಹಾಸಭೆಗೆ ಕೃತಜ್ಞತೆ ಸಲ್ಲಿಸಿ, ಇಂತಹ ಸೇವಾ ಕಾರ್ಯಗಳು ಸಮಾಜಕ್ಕೆ ಮಾದರಿಯಾಗಲಿ ಎಂದು ಆಶಿಸಿದರು.
ಕೋಟ್: ಮಾನ್ವಿ ಪಟ್ಟಣದ ನೆರಳು ಅನಾಥಾಶ್ರಮವು ಇಂದಿಗೂ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಅನಾಥರು, ನಿರಾಶ್ರಿತರು ಮತ್ತು ಹಿರಿಯ ಜೀವಿಗಳಿಗೆ ಶಾಶ್ವತ ಹಾಗೂ ಸುರಕ್ಷಿತ ಆಶ್ರಯ ಒದಗಿಸಲು ಸ್ವಂತ ನಿವೇಶನ ಖರೀದಿಸಿದ್ದು ಶಾಶ್ವತ ಸೂರಿಗಾಗಿ ಕಟ್ಟಡ ಅತೀ ಅಗತ್ಯವಾಗಿದೆ. ಸಮಾಜದ ಹಿತಚಿಂತಕರು, ಉದ್ಯಮಿಗಳು, ಭೂಸ್ವಾಮಿಗಳು ಹಾಗೂ ದಾನಿಗಳು ಕಟ್ಟಡ ನಿರ್ಮಾಣಕ್ಕೆ ಆರ್ಥಿಕ ಸಹಾಯ ನೀಡುವ ಮೂಲಕ ಅನೇಕ ಜೀವಿಗಳಿಗೆ ನೆಮ್ಮದಿಯ ಜೀವನ ನೀಡಬಹುದು.
— ಚನ್ನಬಸವ ಸ್ವಾಮಿ, ಸಂಸ್ಥಾಪಕರು ನೆರಳು ಸೇವಾ ಟ್ರಸ್ಟ್ ಮಾನ್ವಿ
ಈ ವೇಳೆ ನಾಯ್ಡು ನಾಯಕ, ಕೊಂಡಯ್ಯ ನಾಯಕ, ರೇಣು, ವಿನೋದ್ ನಾಯಕ, ಉಪೇಂದ್ರ ನಾಯಕ, ತಾಯಣ್ಣ ನಾಯಕ, ವಿಶ್ವ ನಾಯಕ ಇನ್ನಿತರ ಎಲ್ಲರೂ ಭಾಗವಹಿಸಿದ್ದರು
ವಾಲ್ಮೀಕಿ ಮಹಾಸಭೆಯ ಪದಾಧಿಕಾರಿಗಳು, ಸದಸ್ಯರು ಹಾಗೂ ಆಶ್ರಮದ ಸಿಬ್ಬಂದಿ ಉಪಸ್ಥಿತರಿದ್ದರು.
ಮಾನ್ವಿ ತಾಲೂಕ ವಾಲ್ಮೀಕಿ ಮಹಾಸಭಾ ಅಧ್ಯಕ್ಷರಿಂದ ನೆರಳು ಅನಾಥಾಶ್ರಮಕ್ಕೆ ಭೇಟಿ
ಬಡವರಿಗೆ ಹಣ್ಣು–ಹಂಪಲು ಹಾಗೂ ಊಟದ ವ್ಯವಸ್ಥೆ
ಕವಿತಾಳ: ಮಾನ್ವಿ ತಾಲೂಕ ವಾಲ್ಮೀಕಿ ಮಹಾಸಭೆಯ ಅಧ್ಯಕ್ಷರಾಗಿ ದೇವೇಂದ್ರ ನಾಯಕ ಆಯ್ಕೆಯಾದ ಪ್ರಯುಕ್ತ ಅಧ್ಯಕ್ಷರು ಮಾನ್ವಿ ಪಟ್ಟಣದ ನೆರಳು ಅನಾಥಾಶ್ರಮ ಭೇಟಿ ನೀಡಿ, ಅಲ್ಲಿನ ನಿರಾಶ್ರಿತರು ಹಾಗೂ ಬಡವರಿಗೆ ಹಣ್ಣು–ಹಂಪಲು ಮತ್ತು ಒಂದು ಊಟದ ವ್ಯವಸ್ಥೆ ಮಾಡಿದರು.
ಈ ಸಂದರ್ಭದಲ್ಲಿ ಆಶ್ರಮದಲ್ಲಿರುವ ವೃದ್ಧರು, ಅನಾಥರು ಮತ್ತು ದೈನಂದಿನ ಕಷ್ಟದಲ್ಲಿರುವವರಿಗೆ ಆಹಾರ ವಿತರಣೆ ಮಾಡಲಾಗಿದ್ದು, ಮಾನವೀಯ ಮೌಲ್ಯಗಳನ್ನು ಸಮಾಜಕ್ಕೆ ತಲುಪಿಸುವ ಕಾರ್ಯವಾಗಿದೆ ಎಂದು ಪ್ರಶಂಸಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ವಾಲ್ಮೀಕಿ ಮಹಾಸಭೆಯ ಅಧ್ಯಕ್ಷರು ದೇವೇಂದ್ರ ನಾಯಕ, “ಸಾಮಾಜಿಕ ಸೇವೆಯೇ ನಮ್ಮ ಸಂಘಟನೆಯ ಮುಖ್ಯ ಗುರಿ. ಸಮಾಜದ ಕೊನೆಯ ವ್ಯಕ್ತಿಗೂ ನೆರವು ತಲುಪಿಸುವ ಹೊಣೆಗಾರಿಕೆ ನಮ್ಮದು. ಮುಂದಿನ ದಿನಗಳಲ್ಲಿ ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಇನ್ನಷ್ಟು ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು” ಎಂದು ತಿಳಿಸಿದರು.
ನೆರಳು ಆಶ್ರಮದ ನಿರ್ವಾಹಕರು, ಆಶ್ರಮದ ನಿವಾಸಿಗಳ ಪರವಾಗಿ ಮಹಾಸಭೆಗೆ ಕೃತಜ್ಞತೆ ಸಲ್ಲಿಸಿ, ಇಂತಹ ಸೇವಾ ಕಾರ್ಯಗಳು ಸಮಾಜಕ್ಕೆ ಮಾದರಿಯಾಗಲಿ ಎಂದು ಆಶಿಸಿದರು.
ಕೋಟ್: ಮಾನ್ವಿ ಪಟ್ಟಣದ ನೆರಳು ಅನಾಥಾಶ್ರಮವು ಇಂದಿಗೂ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಅನಾಥರು, ನಿರಾಶ್ರಿತರು ಮತ್ತು ಹಿರಿಯ ಜೀವಿಗಳಿಗೆ ಶಾಶ್ವತ ಹಾಗೂ ಸುರಕ್ಷಿತ ಆಶ್ರಯ ಒದಗಿಸಲು ಸ್ವಂತ ನಿವೇಶನ ಖರೀದಿಸಿದ್ದು ಶಾಶ್ವತ ಸೂರಿಗಾಗಿ ಕಟ್ಟಡ ಅತೀ ಅಗತ್ಯವಾಗಿದೆ. ಸಮಾಜದ ಹಿತಚಿಂತಕರು, ಉದ್ಯಮಿಗಳು, ದಾನಿಗಳು ಕಟ್ಟಡ ನಿರ್ಮಾಣಕ್ಕೆ ಆರ್ಥಿಕ ಸಹಾಯ ನೀಡುವ ಮೂಲಕ ಅನೇಕ ಜೀವಿಗಳಿಗೆ ನೆಮ್ಮದಿಯ ಜೀವನ ನೀಡಬಹುದು.