ಮಸ್ಕಿ ತಾಲೂಕಿನ ಹಾಲಾಪೂರದ ಜನನಿ ಪದವಿ ಪೂರ್ವ ಕಾಲೇಜಿನಲ್ಲಿ ಕವಿತಾಳ ಪೊಲೀಸ್ ಠಾಣೆ ವತಿಯಿಂದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಕುರಿತು ಪಿಎಸ್ಐ ಗುರುಚಂದ್ರ ಯಾದವ್ ಮಾತಾಡುತ್ತಾ ಪ್ರತಿಯೊಬ್ಬರು ಕಾನೂನು ಪಾಲಿಸಬೇಕು, ಕಾನೂನು ನಮ್ಮೆಲ್ಲರಿಗೂ ಅವಶ್ಯಕ. ವಿದ್ಯಾರ್ಥಿಗಳು ನೀವು ವಿಶೇಷವಾಗಿ ಯಾವುದೇ ಕೆಟ್ಟ ಚಟಗಳಿಗೆ ಬಲಿಯಾಗದೆ ಅಭ್ಯಾಸ ಕಡೆ ಗಮನ ಕೊಡಿ ಹಾಗೇ ವಿದ್ಯಾರ್ಥಿನಿಯರು ಬಾಲ್ಯ ವಿವಾಹ ತಡೆಗಟ್ಟವಲ್ಲಿ ನಿಮ್ಮ ಪಾತ್ರ ದೊಡ್ಡದು ಸಹಕರಿಸಬೇಕು, ಇಂದು ನಿಮಗಾಗಿ ಸರ್ಕಾರ ಅನೇಕ ಕಾನೂನಗಳನ್ನು ರೂಪಿಸಿದ್ದು ಸರಿಯಾಗಿ ಸದ್ಬಳಿಕೆ ಮಾಡಿಕೊಂಡು ಸಮಾಜದಲ್ಲಿ ಉನ್ನತ ಹುದ್ದೆ ಹೊಂದಿ ಆದರ್ಶ ಪುರುಷರಾಗಿ ಬದುಕಬೇಕೆಂದು ಪಿಎಸ್ಐ ಗುರುಚಂದ್ರ ಯಾದವ್ ಹೇಳಿದರು. ಈ ಸಂದರ್ಭದಲ್ಲಿ ಉಪನ್ಯಾಸಕರಾದ ಸಿದ್ದಾರ್ಥ್ ಪೂ.ಪಾ , ಮರಿಸ್ವಾಮಿ, ವೀರೇಶ ಜೆ, ರಾಮಣ್ಣ ನಾಯಕ್, ದುರ್ಗೇಶ್, ಮಲ್ಲಿಕಾರ್ಜುನ ಪೊಲೀಸ್ ಇದ್ದರು.

