ಮಸ್ಕಿ ತಾಲೂಕ ಪಂಚಾಯತ ಕಾರ್ಯಾಲಯದಲ್ಲಿ ಕರ್ನಾಟಕ ರಾಜ್ಯ ಕ್ಲಕ೯ ಕಮ್ ಡಾಟಾ ಎಂಟ್ರಿ ಆಪರೇಟರ್ ಕ್ಷೇಮಾಭಿವೃದ್ಧಿ ಸಂಘ ಮಸ್ಕಿ
ಘಟಕದ ವತಿಯಿಂದ ಕಂಪ್ಯೂಟರ್ ಜನಕ ಶ್ರೀ ಚಾಲ್ಸ್೯ ಬ್ಯಾಬೇಜ್ ಜನ್ಮ ದಿನವನ್ನು ಕಂಪ್ಯೂಟರ್ ಆಪರೇಟರ್ ದಿನ ಎಂದು ಆಚರಿಸಲಾಯಿತು. ಕಾರ್ಯಕ್ರಮದ ಕುರಿತು ತಾಲೂಕು ಪಂಚಾಯಿತಿ ಇಒ ಅಮರೇಶ್ ಯಾದವ್ ಮಾತನಾಡಿ ಎಲ್ಲಾ ಡಿಇಓ ಗಳು ಒಗ್ಗಟ್ಟಿನಿಂದ ಕೆಲಸ ಮಾಡಿ, ತಾಲೂಕಿಗೆ ಪ್ರಗತಿ ಅಭಿವೃದ್ಧಿ ಪೂರಕ ಕಾರ್ಯ ಮಾಡಬೇಕು , ಯಾವುದೇ ಕುಂದು ಕೊರತೆಗಳು ಇದ್ದರೆ ಮನವಿ ಪತ್ರದ ಮೂಲಕ ತಾಲೂಕ ಪಂಚಾಯತಿಗೆ ಸಲ್ಲಿಸಲು ತಿಳಿಸಿದರು. ನಂತರ ಮಾತನಾಡಿದ ಡಾಟಾ ಎಂಟ್ರಿ ಆಪರೇಟರ್ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಂಗಪ್ಪ ಹಾಲಾಪೂರ ಇಂತಹ ಕಾರ್ಯಕ್ರಮಗಳು ಯಶಸ್ವಿಯಾಗಬೇಕಾದರೆ ಎಲ್ಲಾ ಸಿಬ್ಬಂದಿಗಳ ಅವಶ್ಯಕತೆ ಇದ್ದು ನಮ್ಮ ಸಿಬ್ಬಂದಿಗಳ ಕುಂದುಕೊರತೆಗಳಿದ್ದರೆ ಮೇಲಾಧಿಕಾರಿಗಳ ಗಮನಕ್ಕೆ ತರಲು ಬಯಸುತ್ತೇನೆ ಎಂದು ರಂಗಪ್ಪ ಹಾಲಾಪೂರ ಹೇಳಿದರು. ನಂತರ ಸೇವೆ ಸಲ್ಲಿಸಿದ ಸಿಬ್ಬಂದಿಗಳಿಗೆ ಗೌರವಿಸಿ ಸನ್ಮಾನಿಸಲಾಯಿತು. ಸಹಾಯಕ ನಿರ್ದೇಶಕರಾದ ಶಿವಾನಂದ ರೆಡ್ಡಿ, ಗಿರಿಯಪ್ಪ ಉದ್ಬಾಳ, ವೆಂಕಟೇಶ್ ಪಾಮನಕಲ್ಲೂರು, ಬಸವರಾಜ ಕಡಬುರು, ಪರಣ್ಣ ಪಾಮನಕಲ್ಲೂರು, ರಸುಲ್ , ಯಾಸಿನ್, ಶರಣಬಸವ ತಲೇಕಾನ, ಅಮೆರೇಗೌಡ ಮುಟ್ಟೂರು, ಬಲವೇಂದ್ರ ಅಂಕುಶದೂಡ್ಡಿ, ದುರ್ಗೇಶ ಗುಂಡ ಇವರನ್ನು ಸನ್ಮಾನಿಸಲಾಯಿತು. ಸಂಘದ ಉಪಾಧ್ಯಕ್ಷರಾದ ಬಸವರಾಜ ಕೋಳಬಾಳ, ನಾಗಪ್ಪ ಬಪ್ಪೂರು, ಶರಣಬಸವ ತಲೇಖಾನ್, ಬಸವರಾಜ ಸಂತೆಕೆಲ್ಲೂರು, ನಾಗರಾಜ ಅಡವಿಬಾವಿ, ಹರೀಶ್ ಹಿರೇದಿನ್ನಿ, ಶರಣಬಸವ ಮಲ್ಲದಗುಡ್ಡ, ವೀರಭದ್ರಯ್ಯ ತೋರಣದಿನ್ನಿ ಹಾಗೂ ಇತರರು ಇದ್ದರು. ಶರಣಬಸವ ತಲೇಕಾನ ಕಾರ್ಯಕ್ರಮ ನಿರೂಪಿಸಿ ಹೊಂದಿಸಿದರು.

