ಲಿಂಗಸಗೂರು : ಡಿ 27 : ರಾಯಚೂರು ಜಿಲ್ಲೆಯ ಏಳು ಜನರು ವೀರ ಕನ್ನಡಿಗ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ವಿಶ್ವಮಾನವ ರಾಷ್ಟ್ರಕವಿ ಕುವೆಂಪು ವೇದಿಕೆ
ಕಸ್ತೂರಿ ಕರ್ನಾಟಕ ಜನಪರ ವೇದಿಕೆ (ರಿ)ಬೆಂಗಳೂರು ಹಾಗೂ ನಮ್ಮೂರ ಶಾಸಕರು ರಾಷ್ಟ್ರೀಯ ಕನ್ನಡ ಪತ್ರಿಕೆ ಆಶ್ರಯದಲ್ಲಿ
ಮೂಕ ನಾಯಕ ಕಿರು ಚಲನಚಿತ್ರ ಪೋಸ್ಟ್ ಬಿಡುಗಡೆ ಹಾಗೂ ವೀರ ಕನ್ನಡಿಗ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಸಮಾರಂಭ ಇದೇ ಡಿಸೆಂಬರ್ 29 ಸೋಮವಾರ ಬೆಳಗ್ಗೆ 10:45ಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಸಭಾಂಗಣ ಯಾದಗಿರಿ ನಗರದಲ್ಲಿ ಡಾ. ಜಲಾಲುದ್ದೀನ್ ಅಕ್ಬರ್ ಲಿಂಗಸುಗೂರು ನೇತೃತ್ವದಲ್ಲಿ ಹಾಗೂ ಶ್ರೀ ಸಿದ್ದಪ್ಪ ಹೂಟ್ಟಿ ಯಾದಗಿರಿ ಜಿಲ್ಲಾಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ ರವರ ಅಧ್ಯಕ್ಷತೆಯಲ್ಲಿ ಕ್ಷೇತ್ರದ ಜನಪ್ರಿಯ ಶಾಸಕರಾದ ಚನ್ನರೆಡ್ಡಿ ಪಾಟೀಲ್ ತನ್ನೂರು ಇವರು ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದು. ಮಾಣಿಕ್ಯ ರೆಡ್ಡಿ ಗೌಡ ದರ್ಶನಾಪೂರ ಕಾಂಗ್ರೆಸ್ ಧುರೀಣರು ಈ ಪ್ರಶಸ್ತಿ ಪ್ರಧಾನ ಮಾಡುತ್ತಿದ್ದಾರೆ ಈ ಪ್ರಶಸ್ತಿಗೆ ಭಾಜನರಾದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಾದ ಶಂಕರ್ ದೇವರು ಹಿರೇಮಠ್ ಸಾಹಿತಿಗಳು ಸಿಂಧನೂರು, ನಜೀರ್ ಅಹ್ಮದ್ ಅಧ್ಯಕ್ಷರು ಬ್ಲೂ ಬರ್ಡ್ ಚಾರಿಟೇಬಲ್ ಟ್ರಸ್ಟ್ ಲಿಂಗಸುಗೂರು. ದೇವಪ್ಪ ಮಸ್ಕಿ ಸಮಾಜ ಸೇವಕರು ಹಟ್ಟಿ ಚಿನ್ನದ ಗಣಿ , ಅಬ್ದುಲ್ ರಶೀದ್ ತಾಲೂಕ ಅಧ್ಯಕ್ಷರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಲಿಂಗಸುಗೂರು. ವಿಜಯ ಪೋಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕರ್ನಾಟಕ ರಾಷ್ಟ್ರೀಯ ಸಮಿತಿ ಕೆ ಆರ್ ಎಸ್ ಪಕ್ಷ ರಾಯಚೂರ್ ಹಾಗೂ ಎಸ್ ನಜೀರ್ ಮಸ್ಕಿ ಪತ್ರಕರ್ತರು ರಾಯಚೂರು, ಮಾರುತಿ ಗೋಸ್ಲೆ ಜೀಮ್ ಮಾಸ್ಟರ್ ಕರಡಕಲ್ ಇವರು 2025ನೇ ಸಾಲಿನ ” ವೀರ ಕನ್ನಡಿಗ ” ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಇವರನ್ನು ಜನಸಮ್ಮುಖತೆಯಲ್ಲಿ ಗೌರವ ಪೂರಕವಾಗಿ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು ಎಂದು ಸಾಹಿತ್ಯ ಹಾಗೂ ಪತ್ರಕರ್ತರಾದ
ಡಾ. ಜಲಾಲುದ್ದೀನ್ ಅಕ್ಬರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Leave a Reply

Your email address will not be published. Required fields are marked *