ಸಿಂಧನೂರು ತಾಲೂಕಿನ ತುರ್ವಿಹಾಳ ಪಟ್ಟಣ ಪಂಚಾಯತಿ ಉಪಚುನಾವಣೆ ಮತ ಎಣಿಕೆಯಾಗಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಮುನಿಯಪ್ಪ ಬೆಳ್ಳಿ 22 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ ಎಂದು ಚುನಾವಣಾ ಅಧಿಕಾರಿ ತಿಳಿಸಿದರು.
ತಾಲೂಕಿನ ತುರ್ವಿಹಾಳ ಪಟ್ಟಣ ಪಂಚಾಯತಿ ವಾರ್ಡ್ ನಂ-4ರ ಸದಸ್ಯರು ಅಕಾಲಿಕ ಮರಣದಿಂದಾಗಿ ತೆರವು ಗೊಂಡಿದ್ದ ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿ ರವಿವಾರ ಚುನಾವಣೆ ನಡೆದು ಬುಧವಾರ ಮತ ಎಣಿಕೆ ನಿಗದಿಯಾಗಿತ್ತು. ಅದರಂತೆ ಕಾಂಗ್ರೆಸ್ ಪಕ್ಷದಿಂದ ಬಾಲಾಜಿ ಮಡಿವಾಳ ಹಾಗೂ ಬಿಜೆಪಿ ಪಕ್ಷದಿಂದ ಮುನಿಯಪ್ಪ ಬೆಳ್ಳಿ ಸ್ಪರ್ಧಿಸಿದ್ದರು. ಬಾಲಾಜಿ 354 ಮತಗಳನ್ನು ಪಡೆದರೆ, ಮುನಿಯಪ್ಪ ಬೆಳ್ಳಿ 376 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.
ಗೆಲುವಿನ ಸಂಭ್ರಮ: 22 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ ತರುವಾಯ ಬಿಜೆಪಿ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಬಣ್ಣ ಎರಚಿ ಸಂಭ್ರಮಿಸಿದರು. ಗೆಲುವಿನ ಸಂಭ್ರಮದಲ್ಲಿ ಮಾಜಿ ಶಾಸಕ ಪ್ರತಾಪ್ ಪಾಟೀಲ್, ಸಿಂಧನೂರು ಬಿಜೆಪಿ ಮುಖಂಡ ಕೆ.ಕರಿಯಪ್ಪ, ಸೇರಿದಂತೆ ಸ್ಥಳೀಯ ಬಿಜೆಪಿ ಮುಖಂಡರಾದ ಶಂಕ್ರಪ್ಪ ಸಾಹುಕಾರ, ರುದ್ರಸ್ವಾಮಿ ಕೆಂಡದಮಠ, ನಾಗಪ್ಪ ನಾಯಕ, ಬಾಲಪ್ಪ ಕುಂಟೋಜಿ, ಕರಿಯಪ್ಪ ಭಂಗಿ, ಸಿದ್ದೇಶ್ವರ ಗುರಿಕಾರ, ಶಿವು ಮೊಬೈಲ್ ಶಾಪ್, ದುರಗೇಶ ಜಿ.ವಕೀಲ, ಚಂದ್ರುಪವಾಡಶೆಟ್ಟಿ, ರಮೇಶ ಸಂಕನಾಳ, ನಿರುಪಾದಿ ಶ್ರೀನಿವಾಸ ಕ್ಯಾಂಪ್, ಮುನಿಸ್ವಾಮಿ ಸೇರಿದಂತೆ ಅನೇಕರು ಸಂಭ್ರಮಿಸಿದರು.


