ಸಿಂಧನೂರು: ಸಿಂದನೂರು ಯೂತ್ ಫೋರಂ ಹಾಗೂ ಮೆಟ್ರೋ ಬ್ರಾಂಡ್ಸ್ ಶಾಪಿ, ಸಿಂದನೂರು ಇವರ ಸಹಯೋಗದಲ್ಲಿ ನಗರದ ತಾಯಿ ಮಕ್ಕಳ ಆಸ್ಪತ್ರೆ ಹಾಗೂ ರಸ್ತೆ ವ್ಯಾಪಾರಿಗಳಿಗೆ ಚಳಿಗಾಲದ ಉಪಯೋಗಕ್ಕಾಗಿ 200ಕ್ಕೂ ಹೆಚ್ಚು ಗರಂ ಟೋಪಿ ಮತ್ತು ಸ್ವೆಟರ್‌ಗಳನ್ನು ವಿತರಿಸಲಾಯಿತು.
ಚಳಿಯಿಂದ ರಕ್ಷಣೆ ನೀಡುವ ಉದ್ದೇಶದಿಂದ ಆಯೋಜಿಸಲಾದ ಈ ಸಮಾಜಮುಖಿ ಸೇವಾ ಕಾರ್ಯಕ್ರಮದಲ್ಲಿ ಅಗತ್ಯವಿರುವ ಮಕ್ಕಳಿಗೂ ಹಾಗೂ ರಸ್ತೆ ವ್ಯಾಪಾರಿಗಳಿಗೆ ಉಚಿತವಾಗಿ ಟೋಪಿ ಮತ್ತು ಸ್ವೆಟರ್‌ಗಳನ್ನು ನೀಡುವ ಮೂಲಕ ಮಾನವೀಯತೆಯ ಸಂದೇಶವನ್ನು ಸಾರಲಾಯಿತು.
ಈ ಟೋಪಿ ಮತ್ತು ಸ್ವೆಟರ್‌ಗಳನ್ನು ಸಯ್ಯದ್ ಮನ್ಸೂರ್, ಮೆಟ್ರೋ ಬ್ರಾಂಡ್ಸ್ ಶಾಪಿ, ಸಿಂದನೂರು ಇವರಿಂದ ದಾನವಾಗಿ ನೀಡಲಾಗಿದೆ. ಅವರ ಸಮಾಜಪರ ಕಾಳಜಿ ಮತ್ತು ಸೇವಾ ಮನೋಭಾವಕ್ಕೆ ಸಿಂದನೂರು ಯೂತ್ ಫೋರಂ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಲಾಯಿತು.
ವಿತರಣೆ ಕಾರ್ಯಕ್ರಮದಲ್ಲಿ ಸೈಯ್ಯದ್ ತನ್ವೀರ್ (ನೊಬೆಲ್ ಟೆಕ್ನೋ ಸ್ಕೂಲ್ ಸಿಂಧನೂರು), ಸರ್ಫರಾಜ್ ಖಾನ್ (ದ ಕ್ಲಾಸ್ ಅಕಾಡೆಮಿ ಸಿಂಧನೂರು), ಎಜಾಜ್ ಹುಸೈನ್ (ಅಸಿಸ್ಟಂಟ್ ಪ್ರೊಫೆಸರ್, ತಾವರಗೇರೆ), ಸಿರಾಜ್ ಪಾಷಾ (ಬಿಜೆಪಿ ಮುಖಂಡರು ಸಿಂಧನೂರು), ಸದಾಮ್ ಹುಸೈನ್(ರಿಯಲ್ ಎಸ್ಟೇಟ್ ಉದ್ಯಮುದಾರರು ಸಿಂಧನೂರು), ಮೂಸಾ(ಇಂಜಿನಿಯರ್), ಫಾರೂಕ್, ಆರಿಫ್ ಅನ್ಸಾರಿ(ಫ್ಲಿಪ್ಕಾರ್ಟ್ ಮ್ಯಾನೇಜರ್ ಸಿಂಧನೂರು) ಹಾಗೂ ಅಲಿ ಅವರು ಉಪಸ್ಥಿತರಿದ್ದು
ಸಿಂದನೂರು ಯೂತ್ ಫೋರಂ ಮುಂದಿನ ದಿನಗಳಲ್ಲೂ ಇಂತಹ ಮಾನವೀಯ ಮತ್ತು ಸಮಾಜ ಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುವುದಾಗಿ ಯೂತ್ ಫೋರಂ ಅಧಾಧಿಕಾರಿ ಸರ್ಫರಾಜ್ ಖಾನ್ ಪತ್ರಿಕೆಗೆ ಮಾಹಿತಿ ನೀಡಿದರು.

Leave a Reply

Your email address will not be published. Required fields are marked *