ಸಮಾಜದ ಸಂಘಟನೆಗೆ ಬದ್ಧ: ಅಮರೇಶ ನಾಯ್ಕ ಅಂತರಗಂಗಿ

 

ಮಸ್ಕಿ: ವೈಯಕ್ತಿಕ ಕೆಲಸಗಳನ್ನು ಬದಿಗೊತ್ತಿ ಸಮಾಜದ ಸಂಘಟನೆಗೆ ಬದ್ಧರಾಗಬೇಕೆಂದು ಕರ್ನಾಟಕ ಪ್ರದೇಶ ಬಂಜಾರ ಸೇವಾ ಸಂಘದ ಜಿಲ್ಲಾಧ್ಯಕ್ಷ ಅಮರೇಶ‌ ನಾಯ್ಕ ಅಂತರಗಂಗಿ‌ ಅವರು ಹೇಳಿದರು.
ಪಟ್ಟಣದ ಭ್ರಮರಾಂಭ ಕಲ್ಯಾಣ ‌ಮಂಟಪದಲ್ಲಿ ಸೋಮವಾರ ನಡೆದ ಕರ್ನಾಟಕ ಪ್ರದೇಶ ಬಂಜಾರ ಸೇವಾ ಸಂಘದ ನೂತನ ಪದಾಧಿಕಾರಿ ಆಯ್ಕೆ ಸಭೆಯಲ್ಲಿ ಮಾತನಾಡಿದ ಅವರು, ಸಂಘದ ನೂತನ ಪದಾಧಿಕರಿಗಳು
ಸಮುದಾಯ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು, ಪ್ರಾಮಾಣಿಕರಾಗಿ ಕೆಲಸ ಮಾಡುತ್ತ ಎಲ್ಲರ ನಂಬಿಕೆಗೆ ಪಾತ್ರರಾಗಬೇಕೆಂದು ಹೇಳಿದರು.
ಬಂಜಾರ ಸಮಾಜದವರು ಹೊಟ್ಟೆಪಾಡಿಗಾಗಿ ಗುಳೆಗೆ ತೆರಳುತ್ತಾರೆ ಅವರ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.‌ಅಂತಹ ಮಕ್ಕಳನ್ನು ಗುರುತಿಸಿ ಶಿಕ್ಷಣ ಕೊಡಿಸುವ ಕೆಲಸ ಸರ್ಕಾರ ಮಾಡಬೇಕಿದೆ. ಬಂಜಾರ ಸಮಾಜ ರಾಜಕೀಯವಾಗಿ ತೀರಾ ಹಿಂದುಳಿದಿದೆ. ಎಲ್ಲಾರು ಶಿಕ್ಷಣವಂತರಾಗಿ ರಾಜಕೀಯವಾಗಿ ಹೆಚ್ಚು ಗುರುತಿಸಿಕೊಳ್ಳಬೇಕೆಂದು ಹೇಳಿದರು.
ನೂತನ ಪದಾಧಿಕಾರಿಗಳ ಆಯ್ಕೆ:
ಕರ್ನಾಟಕ ಪ್ರದೇಶ ಬಂಜಾರ ಸೇವಾ ಸಂಘದ ಮಸ್ಕಿ ತಾಲೂಕ ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಜಂಬಣ್ಣಚವ್ಹಾಣ(ಗೌರವಧ್ಯಕ್ಷ) ಶ್ರೀನಿವಾಸ ಚವ್ಹಾಣ (ಅಧ್ಯಕ್ಷ) ಮಾನಪ್ಪ ಅಡವಿಭಾವಿ(ಉಪಾಧ್ಯಕ್ಷ) ಪೂಲಪ್ಪ ಮೆದಕಿನಾಳ(ಉಪಾಧ್ಯಕ್ಷ) ಶೇಟಪ್ಪ ಮೂಡಲದಿನ್ನಿ (ಉಪಾಧ್ಯಕ್ಷ) ವಿಠಲ ಕೆಳೂತ್(ಪ್ರಧಾನ ಕಾರ್ಯದರ್ಶಿ)
ಶೇಖರ ಪಿ ರಾಠೋಡ(ಖಜಾಂಚಿ) ರಾಮಚಂದ್ರ ದೇಸಾಯಿ ಬೋಗಾಪೂರ(ಸಂಘಟನಾ ಕಾರ್ಯದರ್ಶಿ) ಮೌನೇಶ ಪವಾರ ಜಕ್ಕೇರಮಡು(ಸಂಘಟನಾ ಕಾರ್ಯದರ್ಶಿ) ಶಂಕರ ಪಮ್ಮಾರ(ಸಂಘಟನಾ ಕಾರ್ಯದರ್ಶಿ) ದುರ್ಗೇಶ ಸುಲ್ತಾನಪುರ( ಸಂಘಟನಾ ಕಾರ್ಯದರ್ಶಿ) ಮೌನೇಶ ವೆಂಕಟಾಪೂರ ( ಸಂಘಟನಾ ಕಾರ್ಯದರ್ಶಿ) ತಿಪ್ಪಣ್ಣ( ಸಂಘಟನಾ ಕಾರ್ಯದರ್ಶಿ) ಶೇಖರಪ್ಪ ನಾಯ್ಕ( ಸಂಘಟನಾ ಕಾರ್ಯದರ್ಶಿ) ಧರಿಯಪ್ಪ ಹಡಗಲಿ ಅವರನ್ನು ಸಂಘಟನಾ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಯಿತು. ನೀಲಪ್ಪ,ವೆಂಕಟೇಶ, ಆನಂದ‌ ಸೊಂಪೂರು,ಕೃಷ್ಣಪ್ಪ ರಾಠೋಡ, ರಾಮಣ್ಣ ನಾಯ್ಕ, ಶ್ರೀನಿವಾಸ, ಶೇಖರ ಅವರನ್ನು ಸಂಘದ ಸದಸ್ಯರನ್ನಾಗಿ ಆಯ್ಕೆ‌ ಮಾಡಲಾಯಿತು. ಹಾಗೂ ಮಹಿಳಾ ಘಟಕದ ಅಧ್ಯಕ್ಷರಾಗಿ ಅಕ್ಕಮಹಾದೇವಿ ಅವರನ್ನು ಅಯ್ಕೆ ಮಾಡಲಾಯಿತು ಈ ಸಂದರ್ಭದಲ್ಲಿ ಸಮಾಜದ ಹಿರಿಯ ಮುಖಂಡ ಭೀಮಶಪ್ಪ ಪೂಜಾರಿ, ಜಿಲ್ಲಾ ಉಪಾಧ್ಯಕ್ಷ ದೇವಪ್ಪ ಜಾಧವ, ಪೋಮಾನಾಯ್ಕ, ಮೀಠಪ್ಪ, ಶೇಖರ ಮಟ್ಟೂರು, ನೀಲಪ್ಪ ಪವಾರ, ಲಿಂಗಸ್ಗೂರು ಘಟಕದ ಅಧ್ಯಕ್ಷ ಶರಣಪ್ಪ ಜಾಧವ, ಸಿಂಧನೂರು ಘಟಕದ ಅಧ್ಯಕ್ಷ ಈಶಪ್ಪ ಜಾಧವ, ಶಂಕರ ಪವಾರ ಸೇರಿದಂತೆ ಇನ್ನಿತರಿದ್ದರು.

Leave a Reply

Your email address will not be published. Required fields are marked *